AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Milk Water Bath: ಹಾಲು ಬೆರೆಸಿದ ನೀರಿನಿಂದ ಸ್ನಾನ ಮಾಡಿದರೆ ಎಷ್ಟೇಲ್ಲಾ ಪ್ರಯೋಜನ ಗೊತ್ತಾ..?

ಹಾಲು ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪ್ರೋಟೀನ್ ಆರೋಗ್ಯಕರ ಕೊಬ್ಬು, ಲ್ಯಾಕ್ಟಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಇ ಸಮೃದ್ಧವಾಗಿದೆ.

Milk Water Bath: ಹಾಲು ಬೆರೆಸಿದ ನೀರಿನಿಂದ ಸ್ನಾನ ಮಾಡಿದರೆ ಎಷ್ಟೇಲ್ಲಾ ಪ್ರಯೋಜನ ಗೊತ್ತಾ..?
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Aug 07, 2022 | 7:30 AM

Share

ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು (Milk Water Bath) ಎಲ್ಲರಿಗೂ ತಿಳಿದಿದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್​ಗಳಿಂದ್ದು, ಮೂಳೆಗಳನ್ನು ಆರೋಗ್ಯವಾಗಿಡುವುದರೊಂದಿಗೆ ಗಟ್ಟಿಯಾಗುವಂತೆ ಮಾಡುತ್ತದೆ. ಆದರೆ ಹಾಲು ಕೂಡ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ಜನರು ಹಾಲನ್ನು ಮುಖ ಮತ್ತು ದೇಹದ ಮಾಯಿಶ್ಚರೈಸರ್ ಆಗಿ ಬಳಸುತ್ತಾರೆ. ಹಾಲು ಅನೇಕ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪ್ರೋಟೀನ್ ಆರೋಗ್ಯಕರ ಕೊಬ್ಬು, ಲ್ಯಾಕ್ಟಿಕ್ ಆಮ್ಲ, ಕ್ಯಾಲ್ಸಿಯಂ, ವಿಟಮಿನ್ ಇ ಸಮೃದ್ಧವಾಗಿದೆ. ಇದು ನಿಮ್ಮ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಆದರೆ ನೀವು ಎಂದಾದರೂ ಸ್ನಾನದಲ್ಲಿ ಹಾಲನ್ನು ಬಳಸಿದ್ದೀರಾ? ಇಲ್ಲವೆಂದಾದರೆ ಈ ವಿಷಯಗಳ ಬಗ್ಗೆ ತಿಳಿದಿರಲೇಬೇಕು. ನೀರಿನಲ್ಲಿ ಹಾಲಿನ್ನು ಬೆರೆಸಿ ಸ್ನಾನ ಮಾಡುವುದರಿಂದಾಗುವ ಪ್ರಯೋಜನಗಳನ್ನು ತಿಳಿಯೋಣ.

ಇದನ್ನೂ ಓದಿ: Relationship: ಸಂಬಂಧಗಳಲ್ಲಿನ ಗೊಂದಲವನ್ನು ಸುಧಾರಿಸಲು 6 ಮಾರ್ಗಗಳು ಇಲ್ಲಿದೆ

ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ:

ಒಣ ತ್ವಚೆಯ ಸಮಸ್ಯೆಯ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಪ್ರತಿದಿನ ಸ್ನಾನದ ನೀರಿನಲ್ಲಿ ಅರ್ಧ ಲೋಟ ಹಾಲನ್ನು ಬೆರೆಸಿ ಸ್ನಾನ ಮಾಡಬಹುದು. ಇದು ಯಾವಾಗಲೂ ತೇವವನ್ನು ಇಡುತ್ತದೆ. ಒಣ ತ್ವಚೆಯನ್ನು ಹೋಗಲಾಡಿಸುವ ಜೊತೆಗೆ ಮೃದುವಾದ ತ್ವಚೆಯನ್ನು ಒದಗಿಸುತ್ತದೆ.

ಹೊಳೆಯುವ ತ್ವಚೆ:

ಹಾಲಿನೊಂದಿಗೆ ನೀರು ಬೆರೆಸಿ ಸ್ನಾನ ಮಾಡುವುದರಿಂದ ಮುಖ ಮಾತ್ರವಲ್ಲದೇ ಇಡೀ ದೇಹ ಹೊಳೆಯುತ್ತದೆ. ಅಷ್ಟೇ ಅಲ್ಲ ಮೈಬಣ್ಣವನ್ನು ಸುಧಾರಿಸುತ್ತದೆ. ಇದು ಕಲೆಗಳನ್ನು ಸಹ ತೆಗೆದುಹಾಕುತ್ತದೆ. ಅದೇ ಸಮಯದಲ್ಲಿ ಇದು ಚರ್ಮ ಮತ್ತು ಟ್ಯಾನಿಂಗ್​ನ್ನು ತೆಗೆದುಹಾಕುತ್ತದೆ.

ತ್ವಚೆಯ ಅಲರ್ಜಿಯನ್ನು ಹೋಗಲಾಡಿಸುತ್ತದೆ:

ನಿಮಗೆ ತ್ವಚೆಯ ಅಲರ್ಜಿಯ ಸಮಸ್ಯೆ ಇದ್ದರೆ, ನೀರು ಮತ್ತು ಹಾಲಿನ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಬಹುದು. ಹೀಗೆ ಮಾಡುವುದರಿಂದ ಅಲರ್ಜಿ, ತುರಿಕೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದು ಚರ್ಮವನ್ನು ಬಿಗಿಗೊಳಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಪ್ರತಿದಿನ ಹಾಲಿನ ನೀರಿನಿಂದ ಸ್ನಾನ ಮಾಡಿದರೆ ವಯಸ್ಸಾಗುವ ಲಕ್ಷಣಗಳು ಕಡಿಮೆಯಾಗುತ್ತವೆ.

ಮತ್ತಷ್ಟು ಲೈಫ್​ಸ್ಟೈಲ್​ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ