AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mother’s Day 2026: ಈ ಬಾರಿಯ ತಾಯಂದಿರ ದಿನವನ್ನು ಹೀಗೆ ವಿಶೇಷವಾಗಿ ಆಚರಿಸಿ

ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸಲು, ಆಕೆಯ ತ್ಯಾಗ ಮತ್ತು ಪ್ರೀತಿಗೆ ಧನ್ಯವಾದ ತಿಳಿಸಲು ಪ್ರತಿವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಅನೇಕರು ತಮ್ಮ ಅಮ್ಮಂದಿರಿಗೆ, ತಾಯಿಯ ಸ್ಥಾನದಲ್ಲಿ ನಿಂತು ತಮ್ಮನ್ನು ಸಾಕಿ ಸಲಹಿದವರಿಗೆ ಗಿಫ್ಟ್‌, ಸರ್ಪೈಸ್‌ ನೀಡುವ ಮೂಲಕ, ಅವರಿಗಾಗಿ ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ಅಮ್ಮಂದಿರ ದಿನವನ್ನು ಸೆಲೆಬ್ರೇಟ್‌ ಮಾಡುತ್ತಾರೆ. ಅದೇ ರೀತಿ ಬಾರಿಯ ತಾಯಂದಿರ ದಿನವನ್ನು ಸ್ಪೆಷಲ್‌ ಆಗಿ ಆಚರಿಸುವ ಮೂಲಕ ನಿಮ್ಮ ತಾಯಿಯನ್ನು ಹೇಗೆ ಖುಷಿ ಪಡಿಸಬಹುದು ಎಂಬುದರ ಸಂಕ್ಷಿಪ್ತ ಇಲ್ಲಿದೆ.

Mother's Day 2026: ಈ ಬಾರಿಯ ತಾಯಂದಿರ ದಿನವನ್ನು ಹೀಗೆ ವಿಶೇಷವಾಗಿ ಆಚರಿಸಿ
ಮದರ್ಸ್‌ ಡೇImage Credit source: Getty Images
ಮಾಲಾಶ್ರೀ ಅಂಚನ್​
|

Updated on: May 07, 2026 | 5:41 PM

Share

ತಾಯಿಗೆ (Mother) ಆಕೆಯ ಪ್ರೀತಿಗೆ ವಿಶೇಷವಾದ ಸ್ಥಾನವಿದೆ. ಮಕ್ಕಳು, ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿಯ ತ್ಯಾಗ, ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷ, ಏಳಿಗೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧಳಿರುವ ತ್ಯಾಗಮಯಿ ತಾಯಿಗೆ ಗೌರವಿಸಲು ಆಕೆಯನ್ನು ಸಂಭ್ರಮಿಸಲು ಪ್ರತಿವರ್ಷ ಮೇ ಎರಡನೇ ಭಾನುವಾರದಂದು ವಿಶ್ವಾದ್ಯಂತ ಮದರ್ಸ್‌ ಡೇ ಆಚರಿಸಲಾಗುತ್ತದೆ. ಈ ದಿನ ಮಕ್ಕಳು ತಮ್ಮ ತಾಯಂದಿರನ್ನು ಸಂಭ್ರಮಿಸುತ್ತಾರೆ. ಗಿಫ್ಟ್‌, ಸರ್‌ಪ್ರೈಸ್‌ ನೀಡುವ ಮೂಲಕ ಅಮ್ಮನಿಗೊಂದು ಥ್ಯಾಂಕ್ಸ್‌ ಹೇಳುತ್ತಾರೆ. ಈ ಬಾರಿ ಮದರ್ಸ್‌ ಡೇ ದಿನ ನಿಮ್ಮ ತಾಯಿಯನ್ನು ಖುಷಿಪಡಿಸಲು, ಆಕೆಯನ್ನು ಸಂಭ್ರಮಿಸಲು ಏನು ಮಾಡಬಹುದು, ತಾಯಂದಿರ ದಿನವನ್ನು ವಿಶೇಷವಾಗಿ ಯಾವ ರೀತಿ ಆಚರಿಸಬಹುದು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತಾಯಂದಿರ ದಿನದಂದು ಅಮ್ಮನಿಗಾಗಿ ನೀವು ಏನು ಮಾಡಬಹುದು?

ಅಮ್ಮನಿಗೆ ವಿಶ್ರಾಂತಿ ನೀಡಿ: ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಅಮ್ಮನಿಗೆ ಒಂದಲ್ಲಾ ಒಂದು ಕೆಲಸ ಇದ್ದೇ ಇರುತ್ತದೆ. ಆಕೆಗೆ ವಿಶ್ರಾಂತಿ ಅನ್ನೋದೇ ಇರೋಲ್ಲ. ಹೀಗಿರುವಾಗ ಮದರ್ಸ್‌ ಡೇ ದಿನ ಅಮ್ಮನಿಗೆ ಎಲ್ಲಾ ಕೆಲಸದಿಂದ ಬ್ರೇಕ್‌ ಕೊಟ್ಟು, ಸಂಪೂರ್ಣ ಮನೆಯ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳುವ ಮೂಲಕ ಆಕೆಗೆ ರೆಸ್ಟ್‌ ನೀಡಬಹುದು, ಆಕೆಯನ್ನು ಸಂತೋಷಪಡಿಸಬಹುದು.

ಸರ್‌ಪ್ರೈಸ್‌ ನೀಡಿ: ಪ್ರತಿಯೊಬ್ಬ ಮಹಿಳೆಯೂ ಸರ್‌ಪ್ರೈಸ್‌ಗಳೆಂದರೆ ತುಂಬಾನೇ ಇಷ್ಟ. ಆದ್ದರಿಂದ ನಿಮ್ಮ ಅಮ್ಮನನ್ನು ಸಂತೋಷಪಡಿಸಲು ಆಕೆಗೆ ಸರ್‌ಪ್ರೈಸ್‌ ಉಡುಗೊರೆಗಳನ್ನು ನೀಡಬಹುದು. ಆಕೆಗಾಗಿ ಸರ್‌ಪ್ರೈಸ್‌ ಟ್ರಿಪ್‌, ಡಿನ್ನರ್‌ ಪಾರ್ಟಿ ಅರೇಂಜ್‌ ಮಾಡಬಹುದು.

ನಿಮ್ಮ ಒಂದು ದಿನವನ್ನು ತಾಯಿಯಾಗಿ ಅರ್ಪಿಸಿ: ಇಂದಿನ ಯುವ ಜನತೆ ಮೊಬೈಲ್‌, ಇಂಟರ್‌ನೆಟ್‌ನಲ್ಲಿ ಸಮಯ ಕಳೆಯುವಷ್ಟು, ತಮ್ಮ ತಾಯಿಯೊಂದಿಗೆ ಸಮಯ ಕಳೆಯುವುದಿಲ್ಲ. ಅಮ್ಮನೊಂದಿಗೆ ಸರಿಯಾಗಿ ಮಾತನಾಡುವುದು ಕೂಡ ಇಲ್ಲ. ಆದ್ದರಿಂದ ಅಮ್ಮಂದಿರ ದಿನದಂದು ತಾಯಿಯನ್ನು ಸಂತೋಷಪಡಿಸಲು ನಿಮ್ಮ ಪೂರ್ಣ ಸಮಯವನ್ನು ತಾಯಿಗಾಗಿ ಮೀಸಲಿಡಲು ಪ್ರಯತ್ನಿಸಿ. ಅವರ ಕೆಲಸಗಳಲ್ಲಿ ಸಹಾಯ ಮಾಡಿ, ಅವರನ್ನು ಎಲ್ಲಾದ್ರೂ ಹೊರಗಡೆ ಕರೆದುಕೊಂಡು ಹೋಗಿ ಅವರಿಷ್ಟದ ತಿಂಡಿ ತಿನಿಸನ್ನು, ನೆಚ್ಚಿನ ಸೀರೆಯನ್ನು ತೆಗೆದಯಕೊಡಿ. ಅವರನ್ನು ರಾಣಿಯಂತೆ ಭಾವಿಸುವಂತೆ ಮಾಡಿ.

ಇದನ್ನೂ ಓದಿ: ಮದುವೆಯ ಬಳಿಕ ನವದಂಪತಿಗಳು ಹನಿಮೂನ್‌ಗೆ ಹೋಗೋ ಹಿಂದಿನ ಕಾರಣ ತಿಳಿಯಿರಿ

ವಿಶೇಷ ಖಾದ್ಯ ತಯಾರಿಸಿ: ಅಮ್ಮಂದಿರ ದಿನದಂದು ನಿಮ್ಮ ತಾಯಿಗಾಗಿ ಅವರಿಷ್ಟದ ಖಾದ್ಯ, ಸ್ಟೀಟ್‌ಗಳನ್ನು ನಿಮ್ಮ ಕೈಯಾರೆ ತಯಾರಿಸಿ, ಉಣಬಡಿಸಿ. ಇದು ಖಂಡಿತವಾಗಿಯೂ ನಿಮ್ಮ ತಾಯಿಗೆ ಖುಷಿ ಕೊಡುತ್ತದೆ.

ಇದಲ್ಲದೆ ಮದರ್ಸ್‌ ಡೇ ದಿನ ನಿಮ್ಮ ತಾಯಿಯನ್ನು ಸಂಭ್ರಮಿಸಲು, ಅವರನ್ನು ಖುಷಿಪಡಿಸಲು ಅವರನ್ನು ಲಂಚ್‌, ಡಿನ್ನರ್‌ ಡೇಟ್‌ಗೆ ಕರೆದುಕೊಂಡು ಹೋಗಬಹುದು. ಮನೆಯ ಕೆಲಸದಿಂದ ಬ್ರೇಕ್‌ ಕೊಟ್ಟು ಅವರನ್ನು ಒಂದು ದಿನ ಹೊರಗಡೆ ಸುತ್ತಾಡಿಸಿಕೊಂಡು ಬರಬಹುದು, ಅವರಿಗಾಗಿ ಟ್ರಿಪ್‌ ಪ್ಲಾನ್‌ ಮಾಡಬಹುದು. ಇಲ್ಲವೇ ಏನಾದರೂ ಸ್ಪೆಷಲ್‌ ಗಿಫ್ಟ್‌ಗಳನ್ನು ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​