ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದ್ರೆ ನಿಮ್ಮ ಇಡೀ ದಿನ ಚೆನ್ನಾಗಿರುತ್ತಂತೆ

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವುದು, ಕನ್ನಡಿ ನೋಡುವುದು ಹೇಗೆ ನಕಾರಾತ್ಮಕತೆಯ ಸಂಕೇತವೋ ಅದೇ ರೀತಿ ಒಂದಷ್ಟು ವಸ್ತುಗಳು ಶುಭದ ಸಂಕೇತವೂ ಹೌದು. ಅದಕ್ಕಾಗಿಯೇ ಬೆಳಗ್ಗೆ ಎದ್ದ ತಕ್ಷಣ ಈ ಒಂದಷ್ಟು ವಸ್ತುಗಳನ್ನು ನೋಡಬೇಕಂತೆ. ಇವುಗಳನ್ನು ನೋಡಿದರೆ ನಿಮ್ಮ ಇಡೀ ದಿನ ಪಾಸಿಟಿವ್‌ ಆಗಿ, ಚೆನ್ನಾಗಿರುತ್ತಂತೆ. ಹಾಗಿದ್ರೆ ಬೆಳಗ್ಗೆ ಎದ್ದ ತಕ್ಷಣ ಏನು ನೋಡಿದ್ರೆ ತುಂಬಾನೇ ಒಳ್ಳೆಯದು ಎಂಬುದನ್ನು ನೋಡೋಣ ಬನ್ನಿ.

ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ನೋಡಿದ್ರೆ ನಿಮ್ಮ ಇಡೀ ದಿನ ಚೆನ್ನಾಗಿರುತ್ತಂತೆ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 07, 2025 | 6:04 PM

ದಿನದ ಆರಂಭ ಚೆನ್ನಾಗಿದ್ದರೆ, ಆ ಇಡೀ ದಿನವೇ ಸಕಾರಾತ್ಮಕವಾಗಿ (Positivity) ಉತ್ತಮ ರೀತಿಯಲ್ಲಿರುತ್ತದೆ ಎಂದು ಹೇಳುತ್ತಾರೆ. ಅದೇ ಎದ್ದ ತಕ್ಷಣ ಮೊಬೈಲ್‌ ನೋಡುವುದು, ಕನ್ನಡಿ ನೋಡುವುದು, ನೆರಳು ನೋಡುವುದು ಹೀಗೆಲ್ಲಾ ಮಾಡುವುದರಿಂದ ಇಡೀ ದಿನವೇ ಹಾಳಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಹೀಗೆ ದಿನ ಚೆನ್ನಾಗಿರಬೇಕೆಂದರೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬಾರದಂದು ಹೇಳುವಂತೆ, ದಿನ ಪೂರ್ತಿ ಸಕಾರಾತ್ಮಕತೆ ತುಂಬಿರಲು ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಎಂಬುದನ್ನು ಕೂಡಾ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಿದ್ರೆ ದಿನವಿಡೀ ಪಾಸಿಟಿವ್‌ ಆಗಿರಲು ಬೆಳಗ್ಗೆ ಎದ್ದ ತಕ್ಷಣ (see these things wake up in the morning) ಏನು ನೋಡಬೇಕು ಎಂಬ ಮಾಹಿತಿ ಇಲ್ಲಿದೆ.

ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನು ಇವುಗಳನ್ನು ನೋಡಬೇಕಂತೆ:

ಅಂಗೈ: ಬೆಳಗ್ಗೆ ಎದ್ದ ತಕ್ಷಣ ನೀವು ನಿಮ್ಮ ಅಂಗೈಗಳನ್ನು ನೋಡಬೇಕಂತೆ. ಎರಡು ಕರವನ್ನು ನೋಡುತ್ತಾ ಕರ ದರ್ಶನ ಮಂತ್ರವನ್ನು ಪಠಿಸುವುದರಿಂದ ದಿನ ಸಕಾರಾತ್ಮಕವಾಗಿ ಆರಂಭವಾಗುತ್ತದೆ. ಇದರಿಂದ ನೀವು ದಿನಪೂರ್ತಿ ಉಲ್ಲಾಸದಾಯಕವಾಗಿರಬಹುದು.

ದೇವರ ಚಿತ್ರ ಅಥವಾ ವಿಗ್ರಹ: ಬೆಳಗ್ಗೆ ಎದ್ದ ತಕ್ಷಣ ದೇವರ ವಿಗ್ರಹ ಅಥವಾ ಫೋಟೋವನ್ನು ನೋಡುವುದು ಕೂಡಾ ಒಳ್ಳೆಯದು. ಅಲ್ಲದೆ ಇದನ್ನು ಶುಭವೆಂದು ಸಹ ಪರಿಗಣಿಸಲಾಗಿದೆ. ದೇವರು ಅಂದ್ರೆನೇ ಸಕಾರಾತ್ಮಕತೆಯ ಸಂಕೇತ. ಹೀಗೆ ಬೆಳಗ್ಗೆ ದೇವರನ್ನು ನೋಡುವುದರಿಂದ ಇಡೀ ದಿನವೇ ಸಕಾರಾತ್ಮಕತೆಯಿಂದ ಕೂಡಿರುತ್ತದೆ.

ಇದನ್ನೂ ಓದಿ
ಇಂತಹವರಿಗೆ ಯಾವತ್ತಿಗೂ ಸಾಲ ಕೊಡಬಾರದಂತೆ
ಮೊಬೈಲ್‌ ಚಟದಿಂದ ಹೊರ ಬರಲು ಈ ಸರಳ ಸಲಹೆಯನ್ನು ಪಾಲಿಸಿ
ಮಕ್ಕಳಿಗೆ ಪೋಷಕರು ತಪ್ಪದೆ ಈ ವಿಚಾರಗಳನ್ನು ಕಲಿಸಬೇಕಂತೆ
ಬೆಳಗ್ಗೆ ಎದ್ದ ತಕ್ಷಣ ತಪ್ಪಿಯೂ ಈ ವಸ್ತುಗಳನ್ನು ನೋಡಬೇಡಿ

ಸೂರ್ಯ: ಬೆಳಗ್ಗೆ ಎದ್ದ ನಂತರ ಸೂರ್ಯನನ್ನು, ಸೂರ್ಯೋದಯವನ್ನು ನೋಡುವುದು ಕೂಡಾ ತುಂಬಾನೇ ಒಳ್ಳೆಯದು. ಹೀಗೆ ಬೆಳಗ್ಗೆ ಸೂರ್ಯನನ್ನು ನೋಡುವುದರಿಂದ ನಿಮ್ಮ ಇಡೀ ದಿನ ಸಕಾರಾತ್ಮಕವಾಗಿರುತ್ತದೆ.

ಹಸು: ಬೆಳಗ್ಗೆ ಎದ್ದ ತಕ್ಷಣ ಹಸುವನ್ನು ನೋಡುವುದರಿಂದ ಶುಭ ಫಲಿತಾಂಶ ದೊರೆಯುತ್ತದೆ. ಅದರಲ್ಲೂ ಬಿಳಿ ಬಣ್ಣದ ಹಸುವನ್ನು ನೋಡಿದರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಹೂವುಗಳು: ಬೆಳಗ್ಗೆ ಎದ್ದ ತಕ್ಷಣ ಹೂವುಗಳು, ಹೂವು ಬಿಡುವ ಸಸ್ಯಗಳು ಮತ್ತು ಹಸಿರು ಮರಗಳನ್ನು ನೋಡುವುದು ಕೂಡಾ ಒಳ್ಳೆಯದು. ಸಕಾರಾತ್ಮಕತೆಯ ಸಂಕೇತವಾಗಿರುವ ಮರ ಗಿಡಗಳು  ಮನಸ್ಸಿಗೆ ಖುಷಿ ಮತ್ತು ಶಾಂತಿಯನ್ನು ಒದಗಿಸುತ್ತದೆ.

ನೀರು: ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನೀರು ಮತ್ತು ಜಲಪಾತಗಳ ಚಿತ್ರಗಳನ್ನು ನೋಡುವುದು ಕೂಡ ತುಂಬಾನೇ ಒಳ್ಳೆಯದು. ಹೌದು ಇದರಿಂದ ಮಾನಸಿಕ ಶಾಂತಿ ದೊರೆಯುತ್ತದೆ.

ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ತಪ್ಪಿಯೂ ಈ ವಸ್ತುಗಳನ್ನು ನೋಡಬೇಡಿ

ನವಿಲು ಗರಿ: ಬೆಳಗ್ಗೆ ಎದ್ದ ತಕ್ಷಣ ನೀವು ನವಿಲು ಗರಿಯನ್ನು ಸಹ ನೋಡಬಹುದು. ನವಿಲು ಗರಿಯನ್ನು ನೋಡುವುದರಿಂದ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ಅಲ್ಲದೆ ನವಿಲು ಗರಿ ನೋಡುವುದರಿಂದ ನಿಮ್ಮಲ್ಲಿ ದಿನಪೂರ್ತಿ ಸಕಾರಾತ್ಮಕ ಆಲೋಚನೆಗಳೇ ತುಂಬಿರುತ್ತಂತೆ.

ಪಕ್ಷಿ ವೀಕ್ಷಣೆ: ಮುಂಜಾನೆ ವೇಳೆ ಮನೆಯ ಅಂಗಳ, ಛಾವಣಿಯಲ್ಲಿ ಪಕ್ಷಿಗಳು ಬಂದು ಕೂರುತ್ತವೆ. ಹೀಗೆ ಮನೆ ಬಾಗಿಲಿಗೆ ಬರುವ ಪಕ್ಷಿಗಳನ್ನು ನೋಡುವುದು ಸಹ ತುಂಬಾನೇ ಒಳ್ಳೆಯದಂತೆ. ಇದು ನಿಮ್ಮಲ್ಲಿ ಸಂತೋಷ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ