Nagara Panchami 2026: ನಾಗರ ಪಂಚಮಿಗೆ ಮನೆಯಲ್ಲಿಯೇ ಮಾಡಿ ಅರಶಿನ ಎಲೆ ಕಡುಬು; ಇಲ್ಲಿದೆ ರೆಸಿಪಿ

ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ. ಇದು ಶ್ರಾವಣ ಮಾಸದ ಮೊದಲ ಹಬ್ಬ. ಈ ಹಬ್ಬದ ದಿನ ಒಂದೊಂದು ಕಡೆ ಒಂದೊಂದು ವಿಶೇಷ ತಿನಿಸುಗಳನ್ನು ಮಾಡಲಾಗುತ್ತದೆ. ಅದೇ ರೀತಿ ನಾಗರ ಪಂಚಮಿಯ ದಿನ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ವಿಶೇಷವಾಗಿ ಅರಶಿನ ಎಲೆ ಸಿಹಿ ಕಡುಬನ್ನು ತಯಾರಿಸಲಾಗುತ್ತದೆ. ಈ ಬಾರಿ ಹಬ್ಬದ ದಿನ ಪತೋಳಿ ಅಥವಾ ಕಡುಬನ್ನು ತಯಾರಿಸಿ, ಇದರ ಈಸಿ ರೆಸಿಪಿ ಇಲ್ಲಿದೆ.

Nagara Panchami 2026: ನಾಗರ ಪಂಚಮಿಗೆ ಮನೆಯಲ್ಲಿಯೇ ಮಾಡಿ ಅರಶಿನ ಎಲೆ ಕಡುಬು; ಇಲ್ಲಿದೆ ರೆಸಿಪಿ
ಅರಶಿನ ಎಲೆ ಕಡುಬು
Image Credit source: Social Media

Updated on: Aug 16, 2026 | 3:30 PM

ನಾಗರ ಪಂಚಮಿ (Nagara Panchami) ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ಈ ಬಾರಿ ಈ ಹಬ್ಬವನ್ನು ಆಗಸ್ಟ್‌ 27 ರಂದು ಆಚರಿಸಲಾಗುತ್ತಿದೆ. ನಾಗರ ಪಂಚಮಿಯ ದಿನ ನಾಗ ದೇವರಿಗೆ ಹಾಲೆರೆದು, ವಿಶೇಷ ಖಾದ್ಯಗಳನ್ನು ಮಾಡಿ ನೈವೇದ್ಯವಾಗಿ ಇಡಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ದೇವರ ನೈವೇದ್ಯಕ್ಕಾಗಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಹುರಿಗಡಲೆ ಮತ್ತು ಬೆಲ್ಲ ಬಳಸಿ ರುಚಿಕರ ತಂಬಿಟ್ಟು ತಯಾರಿಸುವಂತೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಮಲೆನಾಡು ಭಾಗಗಳಲ್ಲಿ ನಾಗರ ಪಂಚಮಿಯ ದಿನ ಅರಶಿನ ಎಲೆ ಕಡುಬು ಮಾಡಲಾಗುತ್ತದೆ. ಈ ಬಾರಿಯ ನಾಗರ ಪಂಚಮಿ ಹಬ್ಬಕ್ಕೆ ನೀವು ಕೂಡ ಮನೆಯಲ್ಲಿ ಅರಶಿನ ಎಲೆ ಕಡುಬನ್ನು ಮಾಡಿ, ಇದರ ಈಸಿ ರೆಸಿಪಿ ಇಲ್ಲಿದೆ.

ಅರಶಿನ ಎಲೆ ಕಡುಬು ಮಾಡುವುದು ಹೇಗೆ?

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಾಗರಪಂಚಮಿಯ ದಿನ ಸಾಂಪ್ರದಾಯಿಕ ತಿನಿಸು ಅರಶಿನ ಎಲೆ ಕಡುಬು ತಯಾರಿಸಲಾಗುತ್ತದೆ. ಈ ಬಾರಿ ಹಬ್ಬಕ್ಕೆ ನೀವು ಕೂಡ ಈ ಸಿಹಿ ಕಡುಬನ್ನು ಮನೆಯಲ್ಲಿ ತಯಾರಿಸಿ. ಇದರ ಈಸಿ ರೆಸಿಪಿಯನ್ನು Sandhya Shetty’s Kitchen ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ಅರಿಶಿನ ಎಲೆ ಕಡುಬು ಮಾಡಲು ಬೇಕಾಗುವ ಪದಾರ್ಥಗಳು: ಅಕ್ಕಿ, ನೀರು, ತುರಿದ ತೆಂಗಿನಕಾಯಿ, ಪುಡಿ ಮಾಡಿದ ಬೆಲ್ಲ, ತುಪ್ಪ, ಏಲಕ್ಕಿ, ಉಪ್ಪು, ಅರಿಶಿನ ಎಲೆ

ರೆಸಿಪಿ ವಿಡಿಯೋ ಇಲ್ಲಿದೆ ನೋಡಿ:‌

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಯಂದು ಸುಲಭವಾಗಿ ‘ತ್ರಿವರ್ಣ’ ಖಾದ್ಯ ತಯಾರಿಸಿ; ರೆಸಿಪಿ ಇಲ್ಲಿದೆ

ಅರಶಿನ ಎಲೆ ಕಡುಬು ತಯಾರಿಸುವ ವಿಧಾನ:

  • ಮೊದಲಿಗೆ 4 ರಿಂದ 5 ಗಂಟೆ ನೆನೆಸಿಟ್ಟ ಅಕ್ಕಿ, ಒಂದು ಕಪ್‌ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಲೋಟ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಜಾಸ್ತಿ ತೆಳುವಾಗಿರಬಾರದು.
  • ಈಗ ಹೂರಣ ತಯಾರಿಸಿಕೊಳ್ಳಲು, ಒಂದು ಬೌಲ್‌ಗೆ ತುರಿದ ಬೆಲ್ಲವನ್ನು ಹಾಕಿ. ಒಂದು ಕಪ್‌ ಬೆಲ್ಲಕ್ಕೆ ಎರಡು ಕಪ್‌ನಷ್ಟು ತೆಂಗಿನಕಾಯಿ ತುರಿ ಹಾಕಿ, ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನೀವು ಈ ಹೂರಣವನ್ನು ತುಪ್ಪದಲ್ಲಿ ಹುರಿಯಬಹುದು ಹಾಗೂ ಹುರಿದ ಬಿಳಿ ಎಳ್ಳನ್ನು ಕೂಡ ಸೇರಿಸಬಹುದು.
  • ಹೂರಣ ಸಿದ್ಧವಾದ ಬಳಿಕ ಒಂದೊಂದೇ ಅರಶಿನ ಎಲೆಯನ್ನು ತೆಗೆದುಕೊಂಡು ಅದಕ್ಕೆ ತೆಳುವಾಗಿ ಹಿಟ್ಟನ್ನು ಹರಡಿ, ನಂತರ ಮೊದಲೇ ತಯಾರಿಸಿಟ್ಟ ಕಾಯಿ ತುರಿ, ಬೆಲ್ಲದ ಹೂರಣವನ್ನು ಹಾಕಿ ಎಲೆಯನ್ನು ಮಡಸಿ. ನಂತರ ಇಡ್ಲಿ ಪಾತ್ರೆ ಅಥವಾ ಬಿಸಿ ನೀರಿನ ಹಬೆಯಲ್ಲಿ ಬೇಯಿಸಿ.
  • 10 ರಿಂದ 15 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರ ಅರಶಿನ ಎಲೆ ಕಡುಬು ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us