AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Fungus: ನಿಮ್ಮ ಉಗುರುಗಳ ಬಣ್ಣ ಹಳದಿಯಾಗಿದ್ದರೆ ಏನನ್ನು ಸೂಚಿಸುತ್ತದೆ?

Nail Fungus: ಉಗುರಿನ ಬಣ್ಣ ತಾನೆ ಯಾವ ಬಣ್ಣ ಇದ್ದರೇನು ಎಂದು ನಿರ್ಲಕ್ಷಿಸಬೇಡಿ. ಒಂದೊಮ್ಮೆ ನಿಮ್ಮ ಉಗುರಿನ ಬಣ್ಣ ಹಳದಿಗೆ ತಿರುಗಿದ್ದರೆ ಉಗುರಿನ ಫಂಗಸ್ ಆಗಿದೆ ಎಂದರ್ಥ.

Nail Fungus: ನಿಮ್ಮ ಉಗುರುಗಳ ಬಣ್ಣ ಹಳದಿಯಾಗಿದ್ದರೆ ಏನನ್ನು ಸೂಚಿಸುತ್ತದೆ?
Nail Fungus
TV9 Web
| Updated By: ನಯನಾ ರಾಜೀವ್|

Updated on: Jun 06, 2022 | 9:56 AM

Share

ಉಗುರಿನ ಬಣ್ಣ ತಾನೆ ಯಾವ ಬಣ್ಣ ಇದ್ದರೇನು ಎಂದು ನಿರ್ಲಕ್ಷಿಸಬೇಡಿ. ಒಂದೊಮ್ಮೆ ನಿಮ್ಮ ಉಗುರಿನ ಬಣ್ಣ ಹಳದಿಗೆ ತಿರುಗಿದ್ದರೆ ಉಗುರಿನ ಫಂಗಸ್ ಆಗಿದೆ ಎಂದರ್ಥ. ಉಗುರುಗಳು ತೆಳುವಾಗಿದ್ದರೆ, ನೀವು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂದು ನೀವು ಅರ್ಥಮಾಡಿಕೊಳ್ಳಬೇಕು.

ಮೊದಲನೆಯದು ರಕ್ತಹೀನತೆ ಹಾಗೆಯೇ, ಯಕೃತ್ತಿನ ಕಾಯಿಲೆ ಕೂಡ ದೇಹದಲ್ಲಿ ಕಾಣಿಸಬಹುದು. ಅಪೌಷ್ಟಿಕತೆ ಹೊಂದಿರುವ ಜನರು ತೆಳು ಉಗುರುಗಳನ್ನು ಹೊಂದಿರುತ್ತಾರೆ. ಮಸುಕಾದ ಉಗುರುಗಳನ್ನು ಹೊಂದಿರುವ ಜನರು ಹೃದಯ ಸಮಸ್ಯೆಗಳನ್ನು ಹೊಂದಿರಬಹುದು.

ಉಗುರುಗಳ ಹಳದಿ ಬಣ್ಣವು ಸಾಮಾನ್ಯ ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ. ಸಾಮಾನ್ಯ ಶಿಲೀಂಧ್ರ ಸೋಂಕು ಉಗುರುಗಳು ಬಿಳಿಯಾಗಲು ಕಾರಣವಾಗುತ್ತದೆ. ಸೋಂಕು ಮುಂದುವರೆದಂತೆ, ಉಗುರುಗಳು ಹಾನಿಗೊಳಗಾಗುತ್ತವೆ. ಜೊತೆಗೆ ಥೈರಾಯ್ಡ್, ಶ್ವಾಸಕೋಶದ ಸಮಸ್ಯೆ, ಮಧುಮೇಹದಂತಹ ಆರೋಗ್ಯ ಸಮಸ್ಯೆ ಇರುವವರ ಉಗುರುಗಳು ಕೂಡ ಹಳದಿಯಾಗಿರುತ್ತದೆ.

ಉಗುರುಗಳು ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಆಮ್ಲಜನಕದ ಕೊರತೆಯಿಂದ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಕೈಗಳ ಅಂದವನ್ನು ಕೆಡಿಸುತ್ತದೆ.

ಬಿಳಿ ಉಗುರು:

ಉಗುರುಗಳು ಬಿಳಿಯಾಗಿರುವವರಲ್ಲಿ ಯಕೃತ್ತಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಉಗುರುಗಳು ದೊಡ್ಡದಾಗಿದ್ದರೆ, ಯಕೃತ್ತಿನ ಸಮಸ್ಯೆಗಳಿಂದ ಸಂಪೂರ್ಣವಾಗಿ ಬಿಳಿಯಾಗಬಹುದು.

ನೀಲಿ ಬಣ್ಣ ಉಗುರುಗಳು ನೀಲಿ ಬಣ್ಣಕ್ಕೆ ತಿರುಗಿದರೆ, ವ್ಯಕ್ತಿಯ ದೇಹಕ್ಕೆ ಸರಿಯಾದ ಪ್ರಮಾಣದ ಆಮ್ಲಜನಕ ಸಿಗುತ್ತಿಲ್ಲ ಎಂದರ್ಥ. ಇದರ ಜೊತೆಗೆ, ಶ್ವಾಸಕೋಶದ ಸಮಸ್ಯೆಯಿರುವ ಜನರು ನೀಲಿ ಉಗುರುಗಳನ್ನು ಹೊಂದಿರಬಹುದು.

ನಿಮ್ಮ ಉಗುರಿನ ಬಣ್ಣ ದಲ್ಲಿ ಸಹ ಈ ವ್ಯತ್ಯಾಸಗಳು ಕಂಡು ಬಂದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಅವಶ್ಯಕತೆ ಇದೆ. ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಅನೇಕ ಜನರು ತಮ್ಮ ಕೈ ಅಥವಾ ಕಾಲುಗಳ ಮೇಲೆ ಉಗುರುಗಳು ಅರ್ಧ ಕಟ್ ಆಗುತ್ತದೆ. ಇದೇ ನಿಮಗೆ ಥೈರಾಯ್ಡ್ ಸಮಸ್ಯೆಗೆ ಕಾರಣವಾಗಬಹುದು. ಇದು ಫಂಗಲ್ ಸೋಂಕಿನಿಂದಲೂ ಉಂಟಾಗಬಹುದು.

ಉಗುರುಗಳಲ್ಲಿ ಹೊಳಪು ಮೂಡಿಸಲು ಇಲ್ಲಿವೆ ಟಿಪ್ಸ್

– ಚಮಚ ನಿಂಬೆ ರಸ, ಒಂದು ಚಮಚ ಟೂತ್ ಪೇಸ್ಟ್ ತೆಗೆದುಕೊಳ್ಳಿ. ಮೊದಲು ಉಗುರಿಗೆ ಹಚ್ಚಿರುವ ನೇಲ್ ಪಾಲಿಶನ್ನು ತೆಗೆಯಿರಿ. ನಂತ್ರ ಟೂತ್ ಪೇಸ್ಟ್ ಗೆ ನಿಂಬೆ ರಸ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಉಜ್ಜಿ. ಇದರಿಂದ ಉಗುರಿನ ಹೊಳಪು ಹೆಚ್ಚುತ್ತದೆ.

-ಒಂದು ಚಮಚ ಆಲಿವ್ ಆಯಿಲ್ ಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಉಗುರಿಗೆ ಹಚ್ಚಿಕೊಳ್ಳಿ. ನಂತರ ಅದರ ಮೇಲೆ ನಿಂಬೆ ರಸವನ್ನು ಹಾಕಿ 15 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಇಂತಹ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ತುರ್ತು ವೈದ್ಯರನ್ನು ಸಂಪರ್ಕಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?