National Anti-Terrorism Day 2024: ಮೇ 21ರಂದು ಭಯೋತ್ಪಾದನಾ ವಿರೋಧಿ ದಿನ ಎಂದು ಆಚರಿಸುವುದೇಕೆ? ಹಿನ್ನೆಲೆಯೇನು?
ಭಯೋತ್ಪಾದನೆಯಿಂದ ಹತರಾದದವರ ಸ್ಮರಣೆಗೋಸ್ಕರ, ಅಮಾಯಕ ಜೀವಗಳ ನೆನಪಿಗೋಸ್ಕರ ಮೇ 21ರಂದು ಭಾರತದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ರಾಜೀವ್ ಗಾಂಧಿ ಅವರು ಶ್ರೀಲಂಕಾಕ್ಕೆ ಎಲ್ಟಿಟಿಇ ಉಗ್ರಪಡೆಯ ನಿವಾರಣೆಗೋಸ್ಕರ ಭಾರತದ ಸೇನೆಯನ್ನು ಕಳಿಸುವ ನಿರ್ಧಾರವೇ ಅವರನ್ನು ಬಲಿ ಪಡೆದಿತ್ತು. ಪೆರಂಬದೂರ್ನಲ್ಲಿ ಉಗ್ರರ ಮಾನವ ಬಾಂಬ್ ದಾಳಿಗೆ ರಾಜೀವ್ ಗಾಂಧಿಯವರ ದೇಹ ಛಿದ್ರವಾಗಿತ್ತು.
ಪ್ರತಿವರ್ಷವೂ ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ (National Anti-Terrorism Day) ಆಚರಿಸುತ್ತಾರೆ. ಏಕೆಂದರೆ 1991ರ ಇದೇ ದಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹುತಾತ್ಮರಾದ ದಿನ. ಎಲ್ಟಿಟಿಇ ಸಂಘಟನೆಯ ಸದಸ್ಯರು ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದರು. ಅವರ ಸ್ಮರಣೆಗಾಗಿ ಮತ್ತು ಸಮಾಜದಲ್ಲಿ ಭಯೋತ್ಪಾದನೆಯ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಮೇ 21ರಂದು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಮಹತ್ವವೇನು? ಏಕೆ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ದಿನದ ಇತಿಹಾಸ ಮತ್ತು ಮಹತ್ವ
ತಮಿಳುನಾಡು ರಾಜಧಾನಿ ಚೆನ್ನೈ ಸಮೀಪದ ಪೆರಂಬದೂರು ಬಳಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿದ್ದ ರಾಜೀವ್ ಗಾಂಧಿ ಎಲ್ಟಿಟಿಇ ಉಗ್ರರಿಂದ ಹತರಾಗಿ 2024ಕ್ಕೆ 33 ವರ್ಷ. ಈ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಲು, ಭಯೋತ್ಪಾದನೆಯಿಂದ ಹತರಾದದವರ ಸ್ಮರಣೆಗೋಸ್ಕರ, ಅಮಾಯಕ ಜೀವಗಳ ನೆನಪಿಗೋಸ್ಕರ ಮೇ 21ರಂದು ಭಾರತದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ರಾಜೀವ್ ಗಾಂಧಿ ಅವರು ಶ್ರೀಲಂಕಾಕ್ಕೆ ಎಲ್ಟಿಟಿಇ ಉಗ್ರಪಡೆಯ ನಿವಾರಣೆಗೋಸ್ಕರ ಭಾರತದ ಸೇನೆಯನ್ನು ಕಳಿಸುವ ನಿರ್ಧಾರವೇ ಅವರನ್ನು ಬಲಿ ಪಡೆದಿತ್ತು. ಪೆರಂಬದೂರ್ನಲ್ಲಿ ಉಗ್ರರ ಮಾನವ ಬಾಂಬ್ ದಾಳಿಗೆ ರಾಜೀವ್ ಗಾಂಧಿಯವರ ದೇಹ ಛಿದ್ರವಾಗಿತ್ತು.
ಇದನ್ನೂ ಓದಿ: ಮಾನವ ಕುಲದ ಉಳಿವಿಗಾಗಿ, ಜೇನು ನೊಣಗಳನ್ನು ರಕ್ಷಿಸೋಣ!
ಈ ದಿನದ ಆಚರಣೆ ಹೇಗೆ?
ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನದಂದು, ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಗಳು, ಉಪನ್ಯಾಸಗಳು ನಡೆಯುತ್ತವೆ. ಈ ದಿನವು ಭಯೋತ್ಪಾದನೆಯ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ಸೈನಿಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ದಾಳಿಯ ಎಲ್ಲರಿಗೂ ಗೌರವ ಸಲ್ಲಿಸುತ್ತದೆ. ದೇಶದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರ ಜೊತೆ ಜೊತೆಗೆ ಉದಾತ್ತ ಮಾನವೀಯ ಮೌಲ್ಯಗಳಿಗೆ ಭಂಗ ತರುವ ಕೃತ್ಯಗಳು ನಡೆಯ ಅವಕಾಶ ನೀಡುವುದಿಲ್ಲ ಎಂದು ನಾವೆಲ್ಲರೂ ಸ್ವಯಂ ಪ್ರಮಾಣ ಮಾಡಬೇಕಿದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ