National Best Friends Day 2023: ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇಯ ಮಹತ್ವ ಇಲ್ಲಿದೆ
ನಾವು ಸಂತೋಷದಲ್ಲಿದ್ದಾಗ ಎಲ್ಲರೂ ನಮ್ಮ ಜೊತೆಯಲ್ಲಿರುತ್ತಾರೆ. ಆದರೆ ನೋವಿನಲ್ಲಿ ನಮ್ಮ ಜತೆ ಇರುವವರು ನಿಜವಾದ ಸ್ನೇಹಿತರು ಎಂಬುದು ನಿಮಗೆ ಗೊತ್ತಿರಬಹುದು. ಇಂತಹ ಸ್ನೇಹಿತರಿಗೆ ಗೌರವ ನೀಡಲು ಜೂನ್ 8 ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ಜೀವನದಲ್ಲಿ ನಮ್ಮ ಜತೆಗಿರುವ ಉತ್ತಮ ಸ್ನೇಹಿತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಒಂದು ದಿನ ಬೇಕಾಗಿಲ್ಲ. ಆದರೆ ಇಂತದ್ದೇ ದಿನ ಎಂದು ಇರುವಾಗ ಅದನ್ನು ಆಚರಣೆ ಮಾಡುವುದರಲ್ಲಿಯೂ ಏನು ತಪ್ಪಿಲ್ಲ. ಸ್ನೇಹಿತರು ಎಂದರೆ ಜೀವನದಲ್ಲಿ ಜೊತೆಯಾಗಿ ನಡೆಯುವವರು. ಕಷ್ಟವಿರಲಿ ಸುಖವಿರಲಿ ಅವರು ಎಂದಿಗೂ ಜೊತೆಗಿರುತ್ತಾರೆ. ಗೆಳೆಯರು ಎಂಬುದಕ್ಕೆ ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ಅರ್ಥಗಳಿವೆ. ಅಂದರೆ ನನಗೆ ಗೆಳೆಯರು ದೇವರು ಎನ್ನಿಸಬಹುದು, ಇನ್ನೊಬ್ಬನಿಗೆ ರಕ್ತ ಸಂಬಂಧಕ್ಕಿಂತ ಮೇಲು ಎನಿಸಿರಬಹುದು. ಮತ್ತೊಬ್ಬನಿಗೆ ಸಂಕಟಕ್ಕೆ ಆಗುವ ವೆಂಕಟರಮಣ ನಾಗಿರಬಹುದು. ಹೀಗೇ, ಗೆಳೆಯರು ಸಂಬಂಧದಲ್ಲಿ ಎಂದು ಮಾಸದ ಮಾಣಿಕ್ಯವಾಗಿರುತ್ತಾರೆ. ನಾಳೆ ನಮ್ಮಲ್ಲಿ ಅತೀ ಹೆಚ್ಚು ಜನ, ಕಷ್ಟ ಬಂದಾಗ ಕರೆಯುವುದು ಸ್ನೇಹಿತರನ್ನೇ. ಒಡ ಹುಟ್ಟಿದವರಿಗಿಂತ ನಮಗೆ ಗೆಳೆಯರು ಹೆಚ್ಚಾಗಿರುತ್ತಾರೆ. ಗೆಳೆಯ-ಗೆಳತಿ ಎನ್ನುವ ಸಂಬಂಧಗಳ ಅರಿವಿರದವರು ಬಹುಷಃ ಜೀವನದಲ್ಲಿ ಅದೆಷ್ಟೋ ಸುಂದರ ಸನ್ನಿವೇಶಗಳನ್ನು ಕಳೆದುಕೊಂಡಿರುತ್ತಾರೆ ಎಂದರೆ ತಪ್ಪಾಗಿರಲಿಕ್ಕಿಲ್ಲ. ಜೀವನದಲ್ಲಿನ ಅದೆಷ್ಟೋ ಘಟನೆಗಳನ್ನು ಪೋಷಕರಲ್ಲಿ ಹೇಳಲು ಸಾಧ್ಯ ವಾಗದ ಪಕ್ಷದಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು ಅಂತಹ ಉತ್ತಮ ಸ್ನೇಹಿತರನ್ನು ನೆನೆಸಿಕೊಳ್ಳಲು ಪ್ರತಿ ವರ್ಷ ಜೂನ್ 8 ರಂದು ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಇತಿಹಾಸ: ಈ ದಿನವನ್ನು 1935, ಜೂನ್ 8 ರಂದು ಮೊದಲ ಬಾರಿಗೆ ಜಾರಿಗೆ ತರಲಾಯಿತು. ಅಂದಿನಿಂದ ಪ್ರತಿ ವರ್ಷ ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ಕಾಲಾನಂತರದಲ್ಲಿ, ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನವು ಅನೇಕ ದೇಶಗಳಲ್ಲಿ ಆಚರಣೆಗೆ ಬಂದಿದ್ದು. ಈ ಆಚರಣೆಯೂ ಯುವಕರಲ್ಲಿ ಹೆಚ್ಚು ಮನ್ನಣೆ ಪಡೆಯಿತು. ಈ ದಿನದಂದು ವಿಶೇಷವಾಗಿ ಸ್ನೇಹಿತರಿಗೆ ಶುಭಾಶಯ ಕೋರುವ ಮೂಲಕ ವಿವಿಧ ರೀತಿಯಲ್ಲಿ ಆಚರಿಸಿಕೊಳ್ಳಲಾಗುತ್ತದೆ. ಕೆಲವರು ಪ್ರವಾಸ ಹೋಗುತ್ತಾರೆ, ಇನ್ನು ಕೆಲವರು ಪಾರ್ಟಿ ಮಾಡುತ್ತಾರೆ. ಹೀಗೆ ಅವರಿಗೆ ಇಷ್ಟವಾಗುವಂತ ರೀತಿಯಲ್ಲಿ ಈ ದಿನವನ್ನು ಆಚರಿಸಿಕೊಳ್ಳುತ್ತಾರೆ.
ಇದನ್ನೂ ಓದಿ: World Ocean Day 2023 : ವಿಶ್ವ ಸಾಗರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ
ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನದ ಮಹತ್ವ: ನಾವು ಸಂತೋಷದಲ್ಲಿದ್ದಾಗ ಎಲ್ಲರೂ ನಮ್ಮ ಜೊತೆಯಲ್ಲಿರುತ್ತಾರೆ. ಆದರೆ ನೋವಿನಲ್ಲಿ ನಮ್ಮ ಜತೆ ಇರುವವರು ನಿಜವಾದ ಸ್ನೇಹಿತರು ಎಂಬುದು ನಿಮಗೆ ಗೊತ್ತಿರಬಹುದು. ನಿಮ್ಮ ಬದುಕಿನಲ್ಲಿಯೂ ನಿಮಗೆ ಅಂತಹ ಸ್ನೇಹಿತರ ಮಿಲನವಾಗಿದ್ದರೆ ಅಂತವರ ಜತೆ ಈ ದಿನ ಕಳೆಯಬೇಕು. ಅವರಿಗಿಷ್ಟ ವಾಗುವಂತೆ ಒಂದು ಚೆಂದದ ಉಡುಗೊರೆ ನೀಡಿ ಖುಷಿ ಪಡಿಸಬೇಕು. ಮತ್ತು ನಿಮ್ಮ ಮನದಲ್ಲಿನ ಭಾವನೆಗಳ ಅವರೊಂದಿಗೆ ಹಂಚಿಕೊಂಡು ತೃಪ್ತಿ ಪಡಬೇಕು. ಇದಕ್ಕೆ ಇದೊಂದೇ ದಿನ ಬೇಕಾ ಎನ್ನಬಹುದು. ಯಾವುದೇ ದಿನವಾದರೂ ನಿಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಕಾಲ ಕಳೆಯಿರಿ. ನಿಮ್ಮ ಒತ್ತಡದ ಜೀವನಶೈಲಿ ಅದಕ್ಕೆ ಅವಕಾಶ ಮಾಡಿಕೊಡದಿದ್ದಲ್ಲಿ ಸ್ನೇಹಿತರಿಗಾಗಿಯೇ ಮಾಡಿದ ಈ ದಿನವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರೊಂದಿಗೆ ಸಂತೋಷವಾಗಿರಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Thu, 8 June 23