ಕೇಂದ್ರ ಸರ್ಕಾರದಿಂದ ಹೆಣ್ಣುಮಕ್ಕಳಿಗಾಗಿ ಇರುವ ಯೋಜನೆಗಳ ಬಗ್ಗೆ ನಿಮಗೆ ತಿಳಿದಿರುವುದು ಅಗತ್ಯ. ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಹೆಣ್ಣುಮಕ್ಕಳ ಶೋಷಣೆಯನ್ನು ನಿಯಂತ್ರಿಸಲು ಸರ್ಕಾರ ಹೆಣ್ಣುಮಕ್ಕಳಿಗಾಗಿ ಹಲವು ವಿಶೇಷ ಯೋಜನೆಗಳನ್ನು ಘೋಷಿಸಿದೆ. ಈ ಮೂಲಕ ನಿಮ್ಮ ಹೆಣ್ಣುಮಕ್ಕಳು ಸ್ವಾವಲಂಬಿಯಾಗಿ ಬದುಕಬಹುದು, ಶಿಕ್ಷಣ ಪಡೆಯಬಹುದು. ಹೆಣ್ಣುಮಕ್ಕಳಿಗಾಗಿ ಇರುವ 5 ಅತ್ಯುತ್ತಮ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಸಚಿವಾಲಯದ ಪ್ರಕಾರ, ರಾಷ್ಟ್ರೀಯ ಹೆಣ್ಣುಮಕ್ಕಳ ದಿನವು ಹೆಣ್ಣು ಮಗುವಿನ ವಿವಿಧ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ, ಲಿಂಗ ಭೇದವನ್ನು ತೊಡೆದುಹಾಕುತ್ತದೆ. ಹಾಗೇ, ಹೆಣ್ಣುಮಕ್ಕಳ ಶಿಕ್ಷಣ, ಪೋಷಣೆ ಮತ್ತು ಆರೋಗ್ಯದ ಮಹತ್ವವನ್ನು ಒತ್ತಿಹೇಳುತ್ತದೆ. ಈ ದಿನದಂದು, ದೇಶದ ವಿವಿಧ ನಗರಗಳಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಹೆಣ್ಣುಮಕ್ಕಳಿಗಾಗಿ ಇರುವ 5 ಅತ್ಯುತ್ತಮ ಸರ್ಕಾರಿ ಯೋಜನೆಗಳ ಮಾಹಿತಿ ಇಲ್ಲಿದೆ.
1. ಸುಕನ್ಯಾ ಸಮೃದ್ಧಿ ಯೋಜನೆ (SSY):
ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಹೆಣ್ಣು ಮಗುವಿಗೆ 10 ವರ್ಷ ತುಂಬುವವರೆಗೆ ಪೋಷಕರು ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಇದರಲ್ಲಿ ಕನಿಷ್ಠ 250 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಠೇವಣಿ ಮಾಡಬಹುದು. ಖಾತೆ ತೆರೆದ ದಿನಾಂಕದಿಂದ 21 ವರ್ಷಗಳು ಪೂರ್ಣಗೊಂಡ ನಂತರ ಅಥವಾ 18 ವರ್ಷ ತುಂಬಿದ ನಂತರ ಹುಡುಗಿಯ ವಿವಾಹದವರೆಗೆ ಈ ಯೋಜನೆ ಮುಕ್ತಾಯಗೊಳ್ಳುತ್ತದೆ. ಕೇಂದ್ರ ಸರ್ಕಾರವು ಈ ಯೋಜನೆಯ ಬಡ್ಡಿದರವನ್ನು ತ್ರೈಮಾಸಿಕವಾಗಿ ಪರಿಷ್ಕರಿಸುತ್ತದೆ. ಈ ಯೋಜನೆಯಲ್ಲಿ ಹೆಚ್ಚು ಬಡ್ಡಿದರವನ್ನು ನೀಡಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಸಂಗಾತಿ ಜೊತೆ ಜಗಳವಾಡಿದಾಗ ಈ ತಪ್ಪನ್ನೆಂದೂ ಮಾಡಬೇಡಿ!
2. UDAAN CBSE ವಿದ್ಯಾರ್ಥಿವೇತನ ಕಾರ್ಯಕ್ರಮ:
ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ಕಡಿಮೆ ದಾಖಲಾತಿಯನ್ನು ಪರಿಹರಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಆಶ್ರಯದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಈ ಯೋಜನೆಯನ್ನು ಪ್ರಾರಂಭಿಸಿದೆ. ಇದು ಶಾಲಾ ಶಿಕ್ಷಣ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ನಡುವಿನ ಬೋಧನಾ ಅಂತರವನ್ನು ಸಹ ಪರಿಹರಿಸುತ್ತದೆ. ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ಮಂಡಳಿ/ಸಿಬಿಎಸ್‌ಇ ಸಂಯೋಜಿತ ಖಾಸಗಿ ಶಾಲೆಗಳ KVs/NVಗಳು ಅಥವಾ ಸರ್ಕಾರಿ ಶಾಲೆಗಳ ಪಿಯುಸಿ ತರಗತಿಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯು ಅರ್ಹತೆಯ ಆಧಾರದ ಮೇಲೆ ಇರುತ್ತದೆ. CGPA ಅನ್ನು ಅನುಸರಿಸುವ ಬೋರ್ಡ್‌ಗಳಿಗೆ ಒಟ್ಟಾರೆ 10ನೇ ತರಗತಿಯಲ್ಲಿ ಕನಿಷ್ಠ 70% ಅಂಕಗಳು ಮತ್ತು ವಿಜ್ಞಾನ ಮತ್ತು ಗಣಿತದಲ್ಲಿ 80% ಅಂಕಗಳು ಬಂದಿರಬೇಕು.
3. ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ:
ಈ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಮೇ 2008ರಲ್ಲಿ 9ನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಲಾಯಿತು. ಸೆಕೆಂಡರಿ ಶಾಲೆಗಳಲ್ಲಿ ದಾಖಲಾತಿಯನ್ನು ಉತ್ತೇಜಿಸಲು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ಹುಡುಗಿಯರ ಡ್ರಾಪ್‌ಔಟ್ ಅನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಈ ಯೋಜನೆಯ ಭಾಗವಾಗಿ, ಒಂಬತ್ತನೇ ತರಗತಿಗೆ ದಾಖಲಾದಾಗ ಅರ್ಹ ಅವಿವಾಹಿತ ಹುಡುಗಿಯರ ಹೆಸರಿನಲ್ಲಿ 3,000 ರೂ. ಠೇವಣಿ ಇಡಲಾಗುತ್ತದೆ. ಅವರು 18 ವರ್ಷಗಳನ್ನು ತಲುಪಿದ ನಂತರ ಮತ್ತು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಬಡ್ಡಿಯೊಂದಿಗೆ ಮೊತ್ತವನ್ನು ಹಿಂಪಡೆಯಬಹುದು.
ಇದನ್ನೂ ಓದಿ: National Girl Child Day: ಇಂದೇ ಯಾಕೆ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಿಸಲಾಗುತ್ತದೆ?
4. ಬೇಟಿ ಬಚಾವೋ ಬೇಟಿ ಪಢಾವೋ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರ ಜನವರಿ 22ರಂದು ಈ ಯೋಜನೆಯನ್ನು ಪ್ರಾರಂಭಿಸಿದರು. ಇದು ಮಕ್ಕಳ ಲಿಂಗ ಅನುಪಾತ (CSR) ಮತ್ತು ಜೀವನ ಚಕ್ರ ನಿರಂತರತೆಯ ಮೇಲೆ ಮಹಿಳಾ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ.
5. ಬಾಲಿಕಾ ಸಮೃದ್ಧಿ ಯೋಜನೆ:
ಈ ವಿದ್ಯಾರ್ಥಿವೇತನ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಮಗಳು ಹುಟ್ಟಿದ ನಂತರ 500 ರೂ. ನೀಡಲಾಗುತ್ತದೆ. ಪ್ರತಿ ವರ್ಷ ಅವಳ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನವನ್ನು ಕೂಡ ನೀಡಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Wed, 24 January 24