ರಾಷ್ಟ್ರೀಯ ಮಾವು ದಿನ 2021: ಹಣ್ಣುಗಳ ರಾಜನ ಇತಿಹಾಸ ನಿಮಗೆ ಗೊತ್ತೇ?

| Updated By: Digi Tech Desk

Updated on: Jul 22, 2021 | 2:56 PM

‘ಮ್ಯಾಂಗೋ’ ಎಂಬ ಪದವನ್ನು ಮಲಯಾಳಂ ಪದವಾಗಿರುವ ‘ಮನ್ನಾ’ ದಿಂದ ತೆಗೆದುಕೊಳ್ಳಲಾಗಿದೆ, ಪೋರ್ಚುಗೀಸರು ಮಸಾಲೆ ವ್ಯಾಪಾರಕ್ಕಾಗಿ 1498 ರಲ್ಲಿ ಕೇರಳಕ್ಕೆ ಬಂದಾಗ ಅದನ್ನು ‘ಮಂಗಾ’ ಎಂದು ಕರೆದರು.

ರಾಷ್ಟ್ರೀಯ ಮಾವು ದಿನ 2021: ಹಣ್ಣುಗಳ ರಾಜನ ಇತಿಹಾಸ ನಿಮಗೆ ಗೊತ್ತೇ?
Mango
Follow us on

ಬೇಸಿಗೆಯಲ್ಲಿ ಪ್ರತಿಯೊಬ್ಬರ ಮೊದಲ ಹಣ್ಣಿನ ಆಯ್ಕೆ ಮಾವು. ಈ ಅದ್ಭುತವಾದ, ರಸಭರಿತವಾದ ಹಣ್ಣಿಗೆ ಮೀಸಲಾದ ವಿಶೇಷ ದಿನವನ್ನು ಸಹ ನಾವು ಹೊಂದಿದ್ದೇವೆ. ಬೇಸಿಗೆ ಕಾಲದಲ್ಲಿ ನಮ್ಮ ನೆಚ್ಚಿನ ಹಣ್ಣುಗಳ ಪಟ್ಟಿಯಲ್ಲಿ ಮಾವು ಅಗ್ರಸ್ಥಾನದಲ್ಲಿದೆ. ಆದ್ದರಿಂದ, ಈ ಸೊಗಸಾದ ಹಣ್ಣನ್ನು ಗೌರವಿಸಲು ಮತ್ತು ಮಾವಿನಹಣ್ಣನ್ನು ದಿನದ ಕೇಂದ್ರಬಿಂದುವಾಗಿಡಲು ಜುಲೈ 22 ರಂದು ರಾಷ್ಟ್ರೀಯ ಮಾವಿನ ದಿನವನ್ನು ಆಚರಿಸಲಾಗುತ್ತದೆ.

ಮಾವಿನಹಣ್ಣಿಗೆ ದೀರ್ಘ ಇತಿಹಾಸವಿದೆ. ಸುಮಾರು 5000 ವರ್ಷಗಳ ಹಿಂದೆ ಮಾವುಗಳನ್ನು ಮೊದಲು ಭಾರತದಲ್ಲಿ ಬೆಳೆಸಲಾಯಿತು. ಇದು ಭಾರತೀಯ ಜಾನಪದ ಮತ್ತು ಧಾರ್ಮಿಕ ವಿಧಿಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಒಂದು ಮಾವಿನ ತೋಟವನ್ನು ಬುದ್ಧನಿಗೆ ಉಡುಗೊರೆಯಾಗಿ ನೀಡಲಾಯಿತು.

‘ಮ್ಯಾಂಗೋ’ ಎಂಬ ಪದವನ್ನು ಮಲಯಾಳಂ ಪದವಾಗಿರುವ ‘ಮನ್ನಾ’ ದಿಂದ ತೆಗೆದುಕೊಳ್ಳಲಾಗಿದೆ, ಪೋರ್ಚುಗೀಸರು ಮಸಾಲೆ ವ್ಯಾಪಾರಕ್ಕಾಗಿ 1498 ರಲ್ಲಿ ಕೇರಳಕ್ಕೆ ಬಂದಾಗ ಅದನ್ನು ‘ಮಂಗಾ’ ಎಂದು ಕರೆದರು.

ಬೀಜಗಳನ್ನು ವರ್ಗಾವಣೆ ಮಾಡುವ ತೊಂದರೆಗಳಿಂದಾಗಿ, ಇದು ಒಂದು ಸೀಮಿತ ಅವಧಿಗೆ ಮಾತ್ರ ಕಾರ್ಯಸಾಧ್ಯವಾಗಿ ಉಳಿದಿತ್ತು, ಈ ಮರವನ್ನು ಪಶ್ಚಿಮ ಗೋಳಾರ್ಧದಲ್ಲಿ ಸುಮಾರು 1700 ರವರೆಗೆ ಬ್ರೆಜಿಲ್‌ನಲ್ಲಿ ನೆಡುವವರೆಗೂ ಪರಿಚಯಿಸಲಾಗಿರಲಿಲ್ಲ. ನಂತರ ಇದು 1740 ರಲ್ಲಿ ವೆಸ್ಟ್ ಇಂಡೀಸ್ಗೆ ಪ್ರವೇಶಿಸಿತು.

ಮಾವಿನ ಬಗ್ಗೆ ನಿಮಗೆ ಗೊತ್ತಿರಬೇಕಾದ ಕೆಲವು ಅಂಶಗಳು:

  1. ಭಾರತದಲ್ಲಿ ವರ್ಷಕ್ಕೆ ಸುಮಾರು 20 ಮಿಲಿಯನ್ ಟನ್ ದರದಲ್ಲಿ ಮಾವುಗಳನ್ನು ಬೆಳೆಯಲಾಗುತ್ತದೆ.
  2. ಭಾರತದಲ್ಲಿ, ಮಾವಿನಹಣ್ಣು ನೀಡುವುದೆಂದರೇ ಒಂದು ರೀತಿಯ ಕೊಡುಗೆ ನೀಡುವ ಹಾಗೆ.
  3. ಮಾವಿನ ಮರಗಳು ಸುಮಾರು 100 ಅಡಿಗಳಷ್ಟು ಎತ್ತರವನ್ನು ತಲುಪಬಹುದು.
  4. ಯುಎಸ್ನಲ್ಲಿ ಮಾರಾಟವಾಗುವ ಹೆಚ್ಚಿನ ಮಾವಿನಹಣ್ಣುಗಳನ್ನು ಮೆಕ್ಸಿಕೊ, ಪೆರು, ಈಕ್ವೆಡಾರ್, ಬ್ರೆಜಿಲ್, ಗ್ವಾಟೆಮಾಲಾ ಮತ್ತು ಹೈಟಿಯಿಂದ ಸರಬರಾಜು ಮಾಡಲಾಗುತ್ತದೆ.
  5. ಮಾವಿನ ಹಣ್ಣುಗಳ ದಿನವನ್ನು ಆಚರಿಸುವ ದೇಶಗಳಲ್ಲಿ ಕೆನಡಾ, ಜಮೈಕಾ, ಫಿಲಿಪೈನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿವೆ.
  6. ಮಾವಿನ ಹಣ್ಣು ಶೇಖಡ 50%ರಷ್ಟು ವಿಟಮಿನ್ ಸಿ, ಶೇಖಡ 8% ರಷ್ಟು ವಿಟಮಿನ್ ಎ, ಮತ್ತು ವಿಟಮಿನ್ ಬಿ6 ಅನ್ನು ಹೊಂದಿರುತ್ತದೆ.
  7. ಮಾವಿನಹಣ್ಣು ಸರಿಸುಮಾರು 20 ವಿಭಿನ್ನ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.