Women Health: ಗರ್ಭಿಣಿಯರಿಗೆ ತಲೆತಿರುಗುವ ಸಮಸ್ಯೆ ಕಾಡುವುದೇಕೆ? ಪರಿಹಾರ ಕ್ರಮಗಳೇನು?

ಗರ್ಭಾವಸ್ಥೆಯ ಸಮಯದಲ್ಲಿ ಸುಮಾರು ಆರು ವಾರಗಳವರೆಗೆ ತಲೆತಿರುಗುವ ಸಮಸ್ಯೆ ಕಾಡಬಹುದು. ಬೆಳೆಯುತ್ತಿರುವ ಗರ್ಭಾಶಯದ ರಕ್ತನಾಳಗಳ ಮೇಲೆ ಉಂಟಾಗುವ ಒತ್ತಡದಿಂದಾಗಿ ತಲೆತಿರುಗುವ ಸಮಸ್ಯೆ ಕಾಡುತ್ತದೆ.

Women Health: ಗರ್ಭಿಣಿಯರಿಗೆ ತಲೆತಿರುಗುವ ಸಮಸ್ಯೆ ಕಾಡುವುದೇಕೆ? ಪರಿಹಾರ ಕ್ರಮಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 21, 2021 | 8:20 PM

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತದೆ. ಜತೆಗೆ ಅನೇಕ ಸಮಸ್ಯೆಗಳೂ ಎದುರಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಎಷ್ಟು ಆರೋಗ್ಯ ಕಾಳಜಿ ಮಾಡಿದರೂ ಸಾಕಾಗದು. ಕೆಲವರಿಗೆ ಗರ್ಭವಸ್ಥೆಯ(Pregnancy) ಪ್ರಾರಂಭದ ಮೊದಲ ವಾರದಲ್ಲಿ ಹೆಚ್ಚು ತಲೆತಿರುಗುವುದು, ವಾಂತಿ ಕಂಡು ಬರುತ್ತದೆ. ಆದರೆ ಇನ್ನು ಕೆಲವರಿಗೆ ಮೂರು ತಿಂಗಳು ತುಂಬಿದ ಮೇಲೂ ತಲೆತಿರುಗುವ ಸಮಸ್ಯೆ ಕಾಡತೊಡಗುತ್ತದೆ. ಹಾಗಿರುವಾಗ ಈ ಸಮಸ್ಯೆಗೆ ಪರಿಹರವೇನು ಮತ್ತು ಏಕೆ ತಲೆತಿರುಗುವ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಗರ್ಭಾವಸ್ಥೆಯ ಸಮಯದಲ್ಲಿ ಸುಮಾರು ಆರು ವಾರಗಳವರೆಗೆ ತಲೆತಿರುಗುವ ಸಮಸ್ಯೆ ಕಾಡಬಹುದು. ಬೆಳೆಯುತ್ತಿರುವ ಗರ್ಭಾಶಯದ ರಕ್ತನಾಳಗಳ ಮೇಲೆ ಉಂಟಾಗುವ ಒತ್ತಡದಿಂದಾಗಿ ತಲೆತಿರುಗುವ ಸಮಸ್ಯೆ ಕಾಡುತ್ತದೆ. ಹಾಗಾಗಿ ಮೂರು ತಿಂಗಳು ಕಳೆಯುವವರೆಗೂ ತಲೆ ತಿರುಗುವ ಸಮಸ್ಯೆ ಕಾಡುತ್ತಲೇ ಇರಬಹುದು.

  • ಪ್ರೊಜೆಸ್ಟರೋನ್​ ಹಾರ್ಮೋನ್​ನಿಂದ ಉಂಟಾಗುವ ರಕ್ತ ಕಣಗಳು ದುರ್ಬಲಗೊಳ್ಳುತ್ತವೆ. ರಕ್ತದ ಒತ್ತಡದ ಸಮಸ್ಯೆಯಿಂದಾಗಿ ತಲೆ ತಿರುಗುವ ಸಮಸ್ಯೆ ಕಾಡಬಹುದು
  • ಗರ್ಭಾವಸ್ಥೆಯನ್ನು ರಕ್ತದೊತ್ತಡ ಸಮಸ್ಯೆ ಹೆಚ್ಚು ಕಾಡಬಹುದು. ರಕ್ತದಲ್ಲಿ ಸಕ್ಕರೆ ಮಟ್ಟ ಇಳಿಕೆಯಾಗಿರುವುದರಿಂದಲೂ ತಲೆತಿರುಗುವ ಸಮಸ್ಯೆ ಕಾಡಬಹುದು

ಪರಿಹಾರ

  • ಕುಳಿತ ಜಾಗದಲ್ಲಿಯೇ ಹೆಚ್ಚುಕಾಲ ಕುಳಿತುಕೊಳ್ಳಬೇಡಿ. ಬಹಳ ಹೊತ್ತು ಒಂದೇ ಸ್ಥಳದಲ್ಲಿ ಕುಳಿತಿದ್ದರೆ ಎದ್ದು ನಿಂತು ಸ್ವಲ್ಪ ಹೊತ್ತು ನಡೆದಾಡುವ ಅಭ್ಯಾಸ ಮಾಡಿ
  • ಗರ್ಭಾವಸ್ಥೆಯನ್ನು ಅತಿಯಾದ ಆಹಾರ ಒಳ್ಳೆಯದಲ್ಲ. ನಿಯಮಿತವಾಗಿ ಆಹಾರ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು
  • ಸಾಕಷ್ಟು ನೀರು ಕುಡಿಯುವ ಅಭ್ಯಾಸ ಮಾಡಿ
  • ಪೌಷ್ಟಿಕಾಂಶವನ್ನು ಹೆಚ್ಚಿಸಿಕೊಳ್ಳಲು ಹಣ್ಣಿನ ರಸ ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ
  • ಕಬ್ಬಿಣಾಂಶದ ಕೊರತೆಯಿಂದ ತಲೆತಿರುಗುವ ಸಮಸ್ಯೆ ಕಾಡಬಹುದು ಹಾಗಾಗಿ ಕಬ್ಬಿಣ ಅಂಶವಿರುವ ಆಹಾರವನ್ನು ಸೇವಿಸಿ. ಇದರಿಂದ ಗರ್ಭಾವಸ್ಥೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ತಲೆತಿರುಗುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ
  • ಗರ್ಭಾವಸ್ಥೆ ಸಮಯದಲ್ಲಿ ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ಹತ್ತಿರದ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ

ಇದನ್ನೂ ಓದಿ:

Women Health: ಯುವತಿಯರಲ್ಲಿ ಆರೋಗ್ಯ ಸಮಸ್ಯೆ; ಜೀವನಶೈಲಿ ಸುಧಾರಣೆಗೆ ತಜ್ಞರ ಸಲಹೆಗಳು ಇಲ್ಲಿವೆ

Women Health: ಯುವತಿಯರಿಗೆ ತಲೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ತಿಳಿಯಿರಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್