AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2024:.ನವರಾತ್ರಿಗೆ ಆರನೇ ದಿನ ಬಾಳೆಹಣ್ಣಿನ ಬರ್ಫಿ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿ, ಇಲ್ಲಿದೆ ಪಾಕವಿಧಾನ

ನವರಾತ್ರಿಗೆ ಬಂತೆಂದರೆ ಸಾಕು, ಒಂಬತ್ತು ದಿನಗಳ ವಿಶೇಷ ಅಡುಗೆಗಳನ್ನು ಮಾಡಿ ದೇವರಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಆದರೆ ಅಡುಗೆ ರುಚಿಯ ಜೊತೆಗೆ ಮಾಡಲು ಸುಲಭವಾಗಿದ್ದರೆ ಎಲ್ಲರು ಅಂತಹ ಅಡುಗೆಯನ್ನು ಮಾಡಬಯಸುತ್ತಾರೆ. ಮನೆಯಲ್ಲಿ ಸುಲಭವಾಗಿ ಬಾಳೆಹಣ್ಣಿನ ಬರ್ಫಿ ಮಾಡಿ ದೇವಿಗೆ ನೈವೇದ್ಯವಾಗಿ ಇಡಬಹುದಾಗಿದ್ದು, ಈ ರೆಸಿಪಿ ಮಾಡೋದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Navaratri 2024:.ನವರಾತ್ರಿಗೆ ಆರನೇ ದಿನ ಬಾಳೆಹಣ್ಣಿನ ಬರ್ಫಿ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿ, ಇಲ್ಲಿದೆ ಪಾಕವಿಧಾನ
ಬಾಳೆಹಣ್ಣಿನ ಬರ್ಫಿ
ಸಾಯಿನಂದಾ
| Edited By: |

Updated on:Oct 07, 2024 | 6:27 PM

Share

ನವರಾತ್ರಿಯು ದುರ್ಗಾ ದೇವಿಯ ಆರಾಧನೆ ಸಮಯ. ಹಿಂದೂ ಧರ್ಮದಲ್ಲಿ ನವರಾತ್ರಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಶಾರದೀಯ ನವರಾತ್ರಿಯು ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ಬಾರಿ ಅಕ್ಟೋಬರ್ 3 ರಿಂದ 12 ರವರೆಗೆ ಒಂಬತ್ತು ದಿನಗಳ ಕಾಲ ದೇವಿಯನ್ನು ಆರಾಧಿಸಲಾಗುತ್ತದೆ. ಈ ಒಂಬತ್ತು ದಿನಗಳ ಉತ್ಸವದಲ್ಲಿ, ದುರ್ಗೆಗೆ ಬಗೆಬಗೆ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ. ಆರನೇ ದಿನದಂದು ದೇವಿಗೆ ಬಾಳೆಹಣ್ಣಿನ ಬರ್ಫಿಯನ್ನು ನೈವೇದ್ಯವಾಗಿ ಅರ್ಪಿಸಬಹುದಾಗಿದೆ.

ಬಾಳೆಹಣ್ಣಿನ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು

* ಮೂರರಿಂದ ನಾಲ್ಕು ಬಾಳೆಹಣ್ಣು

* ಬೆಲ್ಲ

* ಕಾಲು ಕಪ್ ರವ

* ಕಾಲು ಕಪ್ ಗೋಧಿ ಹಿಟ್ಟು

* ಏಲಕ್ಕಿ ಪುಡಿ

* ತುಪ್ಪ

* ಗೋಡಂಬಿ ಬಾದಾಮಿ

* ನೀರು

ಬಾಳೆಹಣ್ಣಿನ ಬರ್ಫಿ ಮಾಡುವ ವಿಧಾನ

* ಬಾಳೆಹಣ್ಣು ಬರ್ಫಿ ಮಾಡಲು ಬಾಳೆಹಣ್ಣನ್ನು ಕತ್ತರಿಸಿ ನುಣ್ಣಗೆ ರುಬ್ಬಿಕೊಳ್ಳಿ

* ತದನಂತರದಲ್ಲಿ ಒಂದು ಬಾಣಲೆಗೆ ಬೆಲ್ಲ ಹಾಕಿ ಅದರ ಅರ್ಧದಷ್ಟು ನೀರು ಹಾಕಿ ಪಾಕ ಮಾಡಿಟ್ಟುಕೊಳ್ಳಿ.

* ಆ ಬಳಿಕ ಇನ್ನೊಂದು ಬಾಣಲೆಗೆ ತುಪ್ಪ ಹಾಕಿ ಬಿಸಿಯಾಗುತ್ತಿದ್ದಂತೆ ಗೋಧಿ ಹಿಟ್ಟು ಹಾಗೂ ರವಾ ಹಾಕಿ ಮಧ್ಯಮ ಹುರಿಯಲ್ಲಿ ಉರಿದುಕೊಳ್ಳಿ.

* ಈಗಾಗಲೇ ರುಬ್ಬಿಟ್ಟ ಬಾಳೆಹಣ್ಣಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

* ನಂತರದಲ್ಲಿ ಪಾಕ ಮಾಡಿಕೊಂಡ ಬೆಲ್ಲ ಹಾಕಿ ಮಧ್ಯಮ ಹುರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಹಾಗೂ ಬೇಕಿದ್ದರೆ ತುಪ್ಪ ಸೇರಿಸಿಕೊಳ್ಳಿ.

* ಮಿಶ್ರಣವು ಗಟ್ಟಿಯಾಗುತ್ತಿದ್ದಂತೆ ಕತ್ತರಿಸಿಟ್ಟ ಗೋಡಂಬಿ ಹಾಗೂ ಬಾದಾಮಿಯನ್ನು ಸೇರಿಸಿಕೊಳ್ಳಿ.

* ಒಂದು ತಟ್ಟೆಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿಕೊಳ್ಳಿ. ಇದನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ ಎರಡು ಗಂಟೆಗಳ ಕಾಲ ಇಟ್ಟರೆ ಬಾಳೆಹಣ್ಣಿನ ಬರ್ಫಿ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Mon, 7 October 24

Follow Us
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!