Optical Illusion: ಒಂದು ಸವಾಲು; ಈ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಹೇಳಿ

ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ, ಬುದ್ಧಿವಂತಿಕೆ ಸವಾಲೊಡ್ಡುವಂತಹ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಬಹಳಷ್ಟು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಇರುವ ನಂಬರ್‌ಗಳೆಷ್ಟು ಎಂದು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸುವ ಮೂಲಕ ನೀವೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷಿಸಿ.

Optical Illusion: ಒಂದು ಸವಾಲು; ಈ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಹೇಳಿ
ಆಪ್ಟಿಕಲ್‌ ಇಲ್ಯೂಷನ್‌
Image Credit source: Hindustan Times

Updated on: Aug 26, 2025 | 3:36 PM

ಈಗಂತೂ ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಸಖತ್‌ ಟ್ರೆಂಡಿಂಗ್‌ನಲ್ಲಿದೆ. ನಮ್ಮ ಬುದ್ಧಿವಂತಿಗೆ ಸವಾಲೋಡ್ಡುವಂತಹ ಇಂತಹ ಆಟಗಳನ್ನು ಆಡಲು ತುಂಬಾನೇ ಮಜಾವಾಗಿರುತ್ತವೆ. ಇದು ಕೇವಲ ನಮ್ಮ ಬುದ್ಧುವಂತಿಕೆಗೆ ಸವಾಲು ನೀಡುವುದು ಮಾತ್ರವಲ್ಲದೆ ನಮ್ಮ ಏಕಾಗ್ರತೆ, ಬುದ್ಧಿವಂತಿಕೆ, ದೃಷ್ಟಿ ತೀಕ್ಷ್ಣತೆಯನ್ನು ಹೆಚ್ಚಿಸಲು ಸಹಕಾರಿ. ನೀವು ಕೂಡ ಇಂತಹ ಸಾಕಷ್ಟು ಸವಾಲುಗಳನ್ನು ಸ್ವೀಕರಿಸಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಒಟ್ಟು ಎಷ್ಟು ಅಂಕಿಗಳಿವೆ ಎಂದು ಕಂಡು ಹಿಡಿಯಲು ನಿಮಗೆ ಸವಾಲನ್ನು ನೀಡಲಾಗಿದೆ.

ಈ ಚಿತ್ರದಲ್ಲಿ ಒಟ್ಟು ಎಷ್ಟು ನಂಬರ್‌ಗಳಿವೆ ಎಂದು ಹೇಳಬಲ್ಲಿರಾ?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು Anpe Napalan Mayor ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಒಗಟಿನ ಆಟ ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸಲಿರುವ ಉತ್ತಮ ಮಾರ್ಗವಾಗಿದ್ದು, ಈ ಚಿತ್ರದಲ್ಲಿ ಒಟ್ಟು ಎಷ್ಟು ಅಂಕಿಗಳಿವೆ ಎಂದು ಹೇಳುವ ಮೂಲಕ ನೀವೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷಿಸಿ. ಇದು ನಿಮ್ಮ ದೃಷ್ಟಿ ತೀಕ್ಷ್ಣತೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸಲು ಇರುವಂತಹ ಮೋಜಿನ ಆಟವಾಗಿದೆ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಗುಪ್ತ ಪದ ಯಾವುದೆಂದು ಕಂಡುಹಿಡಿಯಬಲ್ಲಿರಾ?
ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?
ಈ ಚಿತ್ರದಲ್ಲಿ ಅಡಗಿರುವ ಮರಕುಟಿಕವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದೊಳಗೆ ಅಡಗಿರುವ ಜೀವಿಯನ್ನು ಗುರುತಿಸಬಲ್ಲಿರಾ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಚಿತ್ರ ಸರಳವಾದರೂ ನಿಮ್ಮ ಕಣ್ಣುಗಳಿಗೆ ಮೋಸಗೊಳಿಸುವಂತಿದೆ. ಈ ಚಿತ್ರದಲ್ಲಿ “ನಿಮ್ಮ ಕಣ್ಣುಗಳನ್ನು ಪರೀಕ್ಷಿಸಿ, ಇದರಲ್ಲಿ ಎಷ್ಟು ನಂಬರ್‌ಗಳಿವೆ” ಎಂದು ಬರೆಯಲಾಗಿದೆ. ಈ ಚಿತ್ರದಲ್ಲಿ ಒಂದರ ಕೆಳಗೊಂದರಂತೆ ನಂಬರ್‌ಗಳನ್ನು ಬರೆಯಲಾಗಿದ್ದು, ಆ ಸಂಖ್ಯೆಗಳು ಕಣ್ಣಿಗೆ ಗೊಂದಲವನ್ನು ಉಂಟುಮಾಡುವಂತಿದೆ.  ನೀವು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಅದರಲ್ಲಿ ಒಟ್ಟು ಎಷ್ಟು ಎಷ್ಟು ಸಂಖ್ಯೆಗಳಿವೆ ಎಂದು ಕಂಡುಹಿಡಿಯಬೇಕು. ನೀವು ಏಕಾಗ್ರತೆಯಿಂದ ಎಲ್ಲಾ ಅಂಕಿಗಳನ್ನು ವಿಭಜಿಸುತ್ತಾ ಹೋದರೆ, ಉತ್ತರವನ್ನು ಸುಲಭವಾಗಿ ಕಂಡು ಹಿಡಿಯಲು ಸಾಧ್ಯ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಗುಪ್ತ ಪದ ಯಾವುದೆಂದು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?

ಗುಪ್ತ ಅಂಕಿಗಳನ್ನು ಕಂಡುಹಿಡಿದಿದ್ದೀರಾ?

ಈ ಒಗಟಿನ ಆಟವು ತಾಳ್ಮೆ ಮತ್ತು ಏಕಾಗ್ರತೆಯ ಪರೀಕ್ಷೆಯಾಗಿದ್ದು, ಈ ಒಗಟಿನ ಚಿತ್ರವನ್ನು ಪ್ರತಿಯೊಬ್ಬರೂ ವಿಭಿನ್ನವಾಗಿ ಅರ್ಥೈಸುತ್ತಾರೆ. ಕೆಲವರು ಇದರಲ್ಲಿ ಒಟ್ಟು 8 ಅಂಕಿಗಳಿವೆ ಎಂದು ಹೇಳಿದರೆ ಇನ್ನೂ ಕೆಲವರು 6 ಅಂಕಿಗಳಿವೆ ಎಂದು ಉತ್ತರಿಸಿದ್ದಾರೆ. ಇದರಲ್ಲಿ  ಎಷ್ಟು ಸಂಖ್ಯೆಗಳಿವೆ ಎಂಬುದನ್ನು ನೋಡುವುದಾದರೆ, 7,6,8,9,0,2,4,1 ಒಟ್ಟು 8 ಸಂಖ್ಯೆಗಳಿವೆ. ಅದರ ಕೆಳಗಿರುವ 95 ನಂಬರ್‌ಗಳನ್ನು ಲೆಕ್ಕ ಹಾಕಿದರೆ, ಒಟ್ಟು 10 ಅಂಕಿಗಳಾಗುತ್ತವೆ. ಒಟ್ಟು ಎಷ್ಟು ಸಂಖ್ಯೆಗಳಿವೆಯೆಂದು ನೀವು ಹೇಳಿ ನೋಡೋಣ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ