Personality Test: ಈ ವೃತ್ತದಲ್ಲಿ ನಿಮಗೆ ಕಾಣಿಸಿದ ಬಣ್ಣ ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವ

ಸೋಶಿಯಲ್ ಮೀಡಿಯಾದಲ್ಲಿ ಆಫ್ಟಿಕಲ್ ಇಲ್ಯೂಷನ್ ಹಾಗೂ ಪರ್ಸನಾಲಿಟಿ ಟೆಸ್ಟ್ ಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ಫೋಟೋಗಳನ್ನು ಕಂಡಾಗ ನಮ್ಮ ಕಣ್ಣನ್ನು ಮೋಸ ಗೊಳಿಸುತ್ತದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಫ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ವೃತ್ತವೊಂದಿದೆ. ಈ ವೃತ್ತದ ಚಿತ್ರದಲ್ಲಿ ಕಾಣಿಸುವ ಬಣ್ಣ ಯಾವುದು ಎನ್ನುವುದೇ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ, ಈ ಕುರಿತಾದ ಮಾಹಿತಿ ಇಲ್ಲಿದೆ.

Personality Test: ಈ ವೃತ್ತದಲ್ಲಿ ನಿಮಗೆ ಕಾಣಿಸಿದ ಬಣ್ಣ ಯಾವುದು? ಇದುವೇ ಹೇಳುತ್ತೆ ವ್ಯಕ್ತಿತ್ವ
ಆಫ್ಟಿಕಲ್ ಇಲ್ಯೂಷನ್
Edited By:

Updated on: May 17, 2025 | 3:52 PM

ಮೆದುಳಿಗೆ ಹಾಗೂ ಬುದ್ದಿಗೆ ಕೆಲಸ ನೀಡುವಂತಹ ಆಫ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಕೆಲವು ಚಿತ್ರಗಳಿಗೆ ಕಷ್ಟವಾಗುತ್ತದೆ. ಇನ್ನು ಕೆಲ ಚಿತ್ರಗಳು ನಮ್ಮ ವ್ಯಕ್ತಿತ್ವ ಹೇಗೆ ನಾವು ಏನು ಎನ್ನುವುದನ್ನು ತಿಳಿಯಲು ಸಹಾಯ ಮಾಡುತ್ತದೆ. ಹೌದು ಈ ಚಿತ್ರದಲ್ಲಿ ನಾವು ಏನನ್ನೂ ನೋಡುತ್ತೇವೆ ಹಾಗೂ ನಮಗೆ ಏನು ಕಾಣಿಸುತ್ತದೆ ಎನ್ನುವುದೇ ಮುಖ್ಯವಾಗಿದೆ. ಇದೀಗ ವೈರಲ್ ಆಗಿರುವ ಆಫ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ವೃತ್ತ (circle) ವೊಂದನ್ನು ಕಾಣಬಹುದು. ಇದು ನಿಮ್ಮ ಕಣ್ಣಿಗೆ ಯಾವ ಬಣ್ಣದಲ್ಲಿ ಕಾಣುತ್ತದೆ ಎನ್ನುವುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ (personality) ವನ್ನು ಸುಲಭವಾಗಿ ಕಂಡುಕೊಳ್ಳಬಹುದು.

  • ಈ ವೃತ್ತದಲ್ಲಿ ಹಸಿರು ಬಣ್ಣ ಕಾಣಿಸಿದರೆ, ಗುಂಪಿನಲ್ಲಿದ್ದರೂ ಕೂಡ ಈ ವ್ಯಕ್ತಿಗಳು ಎದ್ದು ಕಾಣುತ್ತಾರೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದ್ದು ಉತ್ಸಾಹಿಗಳಾಗಿರುತ್ತಾರೆ. ಇತರರಿಗೆ ಸಲಹೆಗಳನ್ನು ನೀಡುವ ಮೂಲಕ ಸ್ನೇಹಿತರ ಗುಂಪಿನಲ್ಲಿ ಪ್ರಮುಖರಾಗಿ ಗುರುತಿಸಿಕೊಳ್ಳುತ್ತಾರೆ.
  • ಈ ವೃತ್ತದಲ್ಲಿ ನಿಮಗೆ ನೀಲಿ ಬಣ್ಣ ಕಂಡು ಬಂದರೆ ಈ ವ್ಯಕ್ತಿಗಳು ಪ್ರತಿಭಾನ್ವಿತ ವ್ಯಕ್ತಿಗಳು. ತಮ್ಮ ಏಕಾಗ್ರತೆಯಿಂದ ಗೆಲುವು ಸಾಧಿಸುತ್ತಾರೆ. ಮಾನಸಿಕ ಸ್ಪಷ್ಟತೆಯಿದ್ದು, ನಿರ್ಧಾರಗಳು ಸ್ಪಷ್ಟ ಹಾಗೂ ನೇರವಾಗಿಯೇ ಇರುತ್ತದೆ. ಇದ್ದ ವಿಷಯವನ್ನು ನೇರವಾಗಿ ಹೇಳುತ್ತಾರೆ. ಸಂಬಂಧ ಹಾಗೂ ಕೆಲಸ ವಿಷಯದಲ್ಲಿ ಪ್ರಾಮಾಣಿಕರಾಗಿರುತ್ತಾರೆ.
  • ಈ ವೃತ್ತದಲ್ಲಿ ಹಳದಿ ಬಣ್ಣ ಕಾಣಿಸಿದರೆ ಇವರು ಸೃಜನಶೀಲ ವ್ಯಕ್ತಿಗಳು. ಎಲ್ಲಾ ವಿಚಾರದಲ್ಲಿ ತುಂಬಾನೇ ಜಾಗರೂಕರಾಗಿರುತ್ತಾರೆ. ಈ ಜನರು ಸವಾಲು ಸುಲಭವಾಗಿ ಸ್ವೀಕರಿಸುತ್ತಾರೆ ಹಾಗೂ ಜೀವನದಲ್ಲಿ ಎಂತಹ ಸನ್ನಿವೇಶಗಳಿಗೂ ಹೆದರುವುದಿಲ್ಲ. ಎಲ್ಲಾ ಸಂದರ್ಭ ಹಾಗೂ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ.
  • ಈ ವೃತ್ತದಲ್ಲಿ ನಿಮಗೆ ಕೆಂಪು ಬಣ್ಣ ಕಂಡರೆ ಇವರು ಲಾಜಿಕಲ್ ಆಗಿ ಯೋಚಿಸುವ ವ್ಯಕ್ತಿಯಾಗಿದ್ದಾರೆ ಎಂದರ್ಥ. ಹೆಚ್ಚು ಬುದ್ಧಿವಂತರಾಗಿದ್ದು ನಾಯಕತ್ವ ಗುಣ ಇವರಲ್ಲಿ ಹೆಚ್ಚಿರುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸುಲಭವಾಗಿ ಸ್ವೀಕರಿಸಿ ಪರಿಹಾರ ಕಂಡುಕೊಳ್ಳುವವರಾಗಿರುತ್ತಾರೆ. ಇವರಲ್ಲಿರುವ ಈ ಗುಣವೇ ಸುತ್ತಲಿನವರನ್ನು ಇವರತ್ತ ಆಕರ್ಷಿಸುವಂತೆ ಮಾಡುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
ಅಧಿಕ ರಕ್ತದೊತ್ತಡದ ನಿಯಂತ್ರಿಸಲು ಈ ರೀತಿ ಮಾಡಿ
ಪೋಷಕರು ತಮ್ಮ ಮಕ್ಕಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ
ವಿಶ್ವ ದೂರಸಂಪರ್ಕ ದಿನವನ್ನು ಏಕೆ ಆಚರಿಸಲಾಗುತ್ತದೆ?
ಕರ್ನಾಟಕ ಸೇರಿದಂತೆ ಈ 10 ಹುಲಿ ಮೀಸಲು ತಾಣಗಳಿವು, ಸಫಾರಿ