ಪ್ಯಾನಿಕ್ ಅಟ್ಯಾಕ್(Panic Attack) ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಒಂದು ಸಮಸ್ಯೆಯಾಗಿದೆ. ಆ ಸಮಯದಲ್ಲಿ ನೀವು ಅವರ ಜೊತೆಗಿದ್ದು, ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ಆರೋಗ್ಯ ತಜ್ಞರಾದ ಲೊವ್ನೀತ್ ಬಾತ್ರಾ ಸಲಹೆ ನೀಡುತ್ತಾರೆ. ಇದು ಸಮಸ್ಯೆ ಸಾಮಾನ್ಯವಾಗಿ ಚಿಕ್ಕದಾಗಿ ಕಂಡರೂ ಕೂಡ, ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸುತ್ತಮುತ್ತಲಿನವರಲ್ಲಿ ಇಂತಹ ಸಮಸ್ಯೆ ಕಂಡು ಬಂದರೆ ಅವರಿಗೆ ಧೈರ್ಯ ನೀಡುವುದು, ಅವರ ಜೊತೆಯಾಗಿ ನಿಲ್ಲುವುದು ತುಂಬಾ ಅಗತ್ಯ ಎಂದು ತಜ್ಞರಾದ ಲೊವ್ನೀತ್ ಬಾತ್ರಾ ಹೇಳುತ್ತಾರೆ. ಎದೆನೋವು, ಮರಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳ ಜೊತೆಗೆ ವ್ಯಕ್ತಿಯನ್ನು ಆವರಿಸುವ ಭಯ ಮತ್ತು ಆತಂಕದ ಹಠಾತ್ ಭಾವನೆಯಿಂದ ಪ್ಯಾನಿಕ್ ಅಟ್ಯಾಕ್ ಸಂಭವಿಸುತ್ತದೆ.
ತಜ್ಞರಾದ ಲೊವ್ನೀತ್ ಬಾತ್ರಾ ಪ್ಯಾನಿಕ್ ಅಟ್ಯಾಕ್ನಿಂದ ಬಳಲುತ್ತಿದ್ದವರಿಗೆ ಸಹಾಯ ಮಾಡಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇಲ್ಲಿದೆ.
ಇದನ್ನೂ ಓದಿ: ನೀರು ಹೆಚ್ಚು ಕುಡಿಯುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು
ನೀರು ಕುಡಿಯುವುದರಿಂದ ಸ್ವಲ್ಪ ಮಟ್ಟದ ಭಯ, ಆತಂಕದಿಂದ ಶಾಂತಗೊಳಿಸುತ್ತದೆ ಎಂದು ಬಾತ್ರಾ ಹೇಳುತ್ತಾರೆ. ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸುತ್ತದೆ. ಇದು ವ್ಯಕ್ತಿಯನ್ನು ಶಾಂತಗೊಳಿಸಲು ಸಹಕಾರಿಯಾಗಿದೆ. ಆದ್ದರಿಂದ ಆ ವ್ಯಕ್ತಿಯ ಕೈ ಅಥವಾ ಪಾದಗಳನ್ನು ತಣ್ಣೀರು ಹಾಕಿ ಅಥವಾ ಒದ್ದೆಯಾದ ಟವೆಲ್ನಲ್ಲಿ ಮುಖದ ಮೇಲೆ ಅಥವಾ ಕುತ್ತಿಗೆಗೆ ಹಾಕಿ. ಇದು ಅವರನ್ನು ಭಯದಿಂದ ಸ್ವಲ್ಪ ಶಾಂತಗೊಳಿಸುತ್ತದೆ.
ನಿಮ್ಮ ಸುತ್ತಮುತ್ತ ಅಥವಾ ಮನೆಯಲ್ಲಿ ಪ್ಯಾನಿಕ್ ಅಟ್ಯಾಕ್ ಆದವರು ಕಂಡುಬಂದರೆ ಆ ವ್ಯಕ್ತಿಯನ್ನು ಆರಾಮದಾಯಕವಾದ ಕುರ್ಚಿ ಅಥವಾ ಸೋಫಾದಲ್ಲಿ ಕುಳಿತುಕೊಳ್ಳಿ. ಸ್ವಲ್ಪ ಹೊತ್ತು ನೀವು ಜೊತೆಗಿದ್ದು ಧೈರ್ಯ ಹೇಳಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:26 pm, Sat, 28 January 23