Sign In

By signing in or creating an account, you agree with Associated Broadcasting Company's Terms & Conditions and Privacy Policy.

Parenting Tips: ಮಕ್ಕಳಿಗೆ ಸ್ವಯಂ ಪ್ರೀತಿಯನ್ನು ಕಲಿಸಿಕೊಡಬೇಕಾದ ಕೆಲವು ವಿಧಾನಗಳು ಇಲ್ಲಿವೆ

ಮಿತಿಗಳನ್ನು ರೂಪಿಸುವುದರಿಂದ ಹಿಡಿದು ಮಕ್ಕಳನ್ನು ಮೌಲ್ಯಯುತ ಹಾಗೂ ಸಂಸ್ಕಾರಯುತವಾಗಿಸುವವರೆಗೆ, ಪೋಷಕರು ಮಕ್ಕಳಿಗೆ ಸ್ವಯಂ ಪ್ರೀತಿಯನ್ನು ಕಲಿಸಿಕೊಡಬೇಕಾದ ಕೆಲವು ವಿಧಾನಗಳು ಇಲ್ಲಿವೆ.

Parenting Tips: ಮಕ್ಕಳಿಗೆ ಸ್ವಯಂ ಪ್ರೀತಿಯನ್ನು ಕಲಿಸಿಕೊಡಬೇಕಾದ ಕೆಲವು ವಿಧಾನಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Feb 18, 2023 | 6:58 PM

ಮಕ್ಕಳಿಗೆ ಸಣ್ಣ ಮಯಸ್ಸಿನಲ್ಲಿಯೆ ಪೋಷಕರು ಕಲಿಸಬೇಕಾದ ಪ್ರಮುಖ ವಿಷಯಗಳಲ್ಲಿ ಸ್ವಯಂ ಪ್ರೀತಿ(Self Love) ಕೂಡ ಒಂದು. ನೀವು ನಿಮ್ಮನ್ನು ಪ್ರೀತಿಸಲು ಮತ್ತು ನಿಮ್ಮನ್ನು ನಿಮ್ಮ ಜೀವನದ ಆದ್ಯತೆಯನ್ನಾಗಿ ಮಾಡಿಕೊಳ್ಳಲು ಕಲಿತಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಾಗೂ ನಿಮ್ಮ ಜೀವನದ ಬಗ್ಗೆ ಸ್ಪಷ್ಟತೆ ಬರುತ್ತದೆ. ಹಾಗೂ ಸ್ವಯಂ ಪ್ರೀತಿ ಆತ್ಮವಿಶ್ವಾಸವನ್ನು ಗಳಿಸಲು ಸಹಾಯವಾಗುತ್ತದೆ. ನಿಮ್ಮನ್ನು ನೀವು ಪ್ರೀತಿಸುವುದನ್ನು ಕಲಿಯುವುದು ಆರಂಭಿಕ ಹಂತದಿಂದಲೇ ಪ್ರಾರಂಭವಾಗಬೇಕು. ಪೋಷಕರು ಮಕ್ಕಳಿಗೆ ಸ್ವಯಂ ಪ್ರೀತಿಯ ಬಗ್ಗೆ ತಿಳಿಸಿಕೊಡಬೇಕು. ಇದರಿಂದ ಮಕ್ಕಳು ತಮ್ಮನ್ನು ತಾವು ಹೇಗೆ ಪ್ರಿತಿಸಬೇಕು ಹಾಗೂ ಮಕ್ಕಳಿಗೆ ಅವರ ಮೌಲ್ಯಗಳ ಬಗ್ಗೆ ತಿಳಿಯುತ್ತದೆ.

ಮನಶಾಸ್ತ್ರಜ್ಞರಾದ ಡಾ. ಜಾಜ್ಮಿನ್ ಮೆಕಾಯ್ ಅವರು ಮಕ್ಕಳಲ್ಲಿ ಸ್ವಯಂ ಪ್ರೀತಿಯನ್ನು ಬೆಳೆಸಲು ಪೋಷಕರು ಮಾಡಬೇಕಾದ ಪ್ರಮುಖ ವಿಷಯಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆ.

ಮೌಲ್ಯ ಹಾಗೂ ಪ್ರಾಮುಖ್ಯತೆ:

ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಮಗುವಿನ ಅಭಿಪ್ರಾಯವನ್ನು ಕೇಳುವುದು ಹಾಗೂ ಕುಟುಂಬದ ಟೀಮ್ ವರ್ಕ್​ನಲ್ಲಿ ಅವರಿಗೂ ಪ್ರಾಶಸ್ತ್ಯ ನೀಡುವುದು, ಮಕ್ಕಳಲ್ಲಿ ಮೌಲ್ಯಯುತ ಭಾವನೆಯನ್ನು ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಅದು ಮಕ್ಕಳಲ್ಲಿ ಅವರು ಕೂಡಾ ಪ್ರಾಮುಖ್ಯರು ಎಂಬ ಭಾವನೆ ಮೂಡಿಸುತ್ತದೆ. ಇದು ತಮ್ಮನ್ನು ತಾವು ಪ್ರೀತಿಸಲು ಮತ್ತು ಉತ್ತಮವಾಗಲು ಮಕ್ಕಳನ್ನು ಪ್ರೇರೆಪಿಸುತ್ತದೆ.

ಇದನ್ನೂ ಓದಿ: ಆಲ್ಕೋಹಾಲ್ ಸೇವನೆಯು ಈ ಕಾಯಿಲೆಯನ್ನುಂಟು ಮಾಡುತ್ತದೆ: ಸಂಶೋಧನೆ

ಅಭಿನಂದನೆಗಳು:

ಪೋಷಕರು ತಮ್ಮ ಮಕ್ಕಳಿಗೆ ನೀಡುವ ಅಭಿನಂದನೆಗಳ ಬಗ್ಗೆ ಜಾಗೃತವಾಗಿರಬೇಕು. ಫಲಿತಾಂಶಗಳ ಮೇಲೆ ತಮ್ಮ ಅಭಿನಂದನೆಗಳನ್ನು ಕೇಂದ್ರೀಕರಿಸುವ ಬದಲು, ಮಕ್ಕಳ ಪ್ರಯತ್ನಗಳನ್ನು ಶ್ಲಾಘಿಸುತ್ತಾ, ಆ ಪತ್ರಯತ್ನಗಳಲ್ಲಿ ಸಫಲರಾಗುವಂತೆ ಹೆಚ್ಚಿನ ಒತ್ತನ್ನು ನೀಡಬೇಕು.

ಮಿತಿಗಳು:

ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮಿತಿಗಳು ಮತ್ತು ಗಡಿಗಳ ಪ್ರಾಮುಖ್ಯತೆಯನ್ನು ಕಲಿಸುವುದು ಮುಖ್ಯ. ಇದು ಮುಂದೆ ಅವರಿಗೆ ಪ್ರತಿಯೊಂದು ವಿಷಯದಲ್ಲಿಯೂ ಆರೋಗ್ಯಕರ ಸ್ಥಳವನ್ನು ರಚಿಸಲು ಸಹಾಯವಾಗುತ್ತದೆ. ಯಾರನ್ನು ತಮ್ಮ ಜೊತೆ ಸೇರಬೇಕು ಎಂಬ ಜ್ಞಾನ ಮಕ್ಕಳಿಗೆ ಮೂಡುತ್ತದೆ.

ಸಕಾರಾತ್ಮಕ ಗುಣಗಳು:

ಪ್ರತಿ ಮಗುವು ಕೂಡಾ ವಿಭಿನ್ನವಾಗಿರುತ್ತದೆ. ಅವರದೇ ಆದ ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಪೋಷಕರಾಗಿ ನೀವು ಅವರ ಸಕಾರಾತ್ಮಕ ಗುಣಗಳ ಮೇಲೆ ಕೇಂದ್ರೀಕರಿಸಬೇಕು. ಮತ್ತು ಅವರ ಒಳ್ಳೆಯ ಗುಣಗಳನ್ನು ಮತ್ತಷ್ಟು ಹೆಚ್ಚಿಸಲು ಮಕ್ಕಳಿಗೆ ಸಹಾಯ ಮಾಡಬೇಕು.

ದೇಹಗಳ ಬಗ್ಗೆ ಮಾತನಾಡಿ:

ಮಕ್ಕಳಲ್ಲಿ ದೇಹ ರಚನೆಯ ಕುರಿತು ಸಕಾರಾತ್ಮಕವಾಗಿ ಮಾತನಾಡಿ. ಇದರಿಂದ ಮಕ್ಕಳು ತಮ್ಮ ದೇಹ ರಚನೆಯ ಬಗ್ಗೆ ಬೇರೆಯವರು ಹೀಯಾಲಿಸಿದರೂ ತಮ್ಮನ್ನು ತಾವು ಪ್ರೀತಿಸುತ್ತಾರೆ. ಅವರಲ್ಲಿ ಯಾವುದೇ ನಕಾರಾತ್ಮಕ ಭಾವನೆ ಮೂಡುವುದಿಲ್ಲ. ಹಾಗೂ ಪ್ರಾಮಾಣಿಕವಾಗಿ ತಮ್ಮ ದೇಹವನ್ನು ಸ್ವೀಕರಿಸಲು ಮತ್ತು ಪ್ರೀತಿಸಲು ಸಹಾಯವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಸ್ವಯಂ ಪ್ರೀತಿಯ ಬಗ್ಗೆ ಕಲಿಸಿಕೊಡುವುದು ಅಗತ್ಯವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:58 pm, Sat, 18 February 23

ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ