Kannada News Lifestyle Parenting Tips: Lessons every father should teach their sons Kannada News
Parenting Tips : ಪ್ರತಿಯೊಬ್ಬ ತಂದೆಯು ಗಂಡು ಮಕ್ಕಳಿಗೆ ಕಲಿಸಿಕೊಡಬೇಕಾದ ಅಗತ್ಯ ಜೀವನ ಪಾಠಗಳಿವು
ಮಕ್ಕಳನ್ನು ಬೆಳೆಸುವುದು ಸುಲಭವಾದ ಕೆಲಸವಲ್ಲ. ಸರಿಯಾದ ಸಮಯಕ್ಕೆ ಒಂದೊಳ್ಳೆ ಸಂಸ್ಕಾರ ವಿಟ್ಟು ಬೆಳೆಸಿದರೆ ಮಾತ್ರ ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ಹೆಣ್ಣು ಮಕ್ಕಳಿಗೆ ತಂದೆಯೂ ಅಚ್ಚು ಮೆಚ್ಚು ಆಗಿದ್ದರೂ ಕೂಡ ತಾಯಿ ದೊಡ್ಡವರ ಜೊತೆಗೆ ಹೇಗೆ ಇರಬೇಕು. ಯಾರ ಜೊತೆಗೆ ಜೊತೆಗೆ ನಡೆದುಕೊಳ್ಳಬೇಕು ಹೀಗೆ ಹತ್ತು ಹಲವು ಪಾಠ ಕಲಿಸಿಕೊಡುತ್ತಾಳೆ. ಆದರೆ ಗಂಡು ಮಕ್ಕಳಿಗೆ ಕೆಲವ ವಿಷಯಗಳ ಬಗ್ಗೆ ತಂದೆಯಾವದವನು ತಿಳಿಸಿಕೊಡಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ಮಗನು ಸಂಸ್ಕಾರವಂತ ವ್ಯಕ್ತಿಯಾಗಲು ಸಾಧ್ಯ.
ಸಾಂದರ್ಭಿಕ ಚಿತ್ರ
Follow us on
ಹೆಚ್ಚಿನವರ ಮನೆಯಲ್ಲಿ ತಾಯಿಯು ತನ್ನ ಮಕ್ಕಳನ್ನು ಹೆಚ್ಚು ಮುದ್ದು ಮಾಡಿ ಪ್ರೀತಿ, ವಾತ್ಸಲ್ಯ ತೋರಿಸುತ್ತಾರೆ. ತಂದೆಯು ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿರುವ ಕಾರಣ ಮಕ್ಕಳು ಮಾತನಾಡಲು ಹೆದರುವುದಿದೆ. ಆದರೆ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯದ್ದು ಪಾತ್ರವಿರುತ್ತದೆ. ಬೆಳೆಯುವ ಮಕ್ಕಳು ತಂದೆಯಿಂದಲೇ ಬಹಳಷ್ಟನ್ನು ಕಲಿಯುತ್ತಾರೆ. ಟೀನೇಜ್ತಲುಪುವ ಗಂಡು ಮಕ್ಕಳಿಗೆ ತಂದೆಯ ನಿರ್ದೇಶನ ಹಾಗೂ ಮಾರ್ಗದರ್ಶನ ಅಗತ್ಯವಾಗಿ ಬೇಕು. ಈ ಕೆಲವು ಜೀವನ ಪಾಠಗಳಿಂದ ಗಂಡು ಮಗ ಸಂಸ್ಕಾರವಂತ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ.
ಮಹಿಳೆಗೆ ಗೌರವ ನೀಡುವುದು : ತಂದೆಯೂ ತನ್ನ ಮಗನಿಗೆ ಕಲಿಸಿಕೊಡಬೇಕಾದ ಅತಿಮುಖ್ಯ ವಿಷಯವೆಂದರೆ ಸಮಾಜದಲ್ಲಿರುವ ಪ್ರತಿ ವ್ಯಕ್ತಿಗೂ ನೀಡಬೇಕು. ಅದರಲ್ಲಿ ವಿಶೇಷವಾಗಿ ಮಹಿಳೆಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದು. ಯಾವ ವ್ಯಕ್ತಿಯು ತನ್ನ ತಾಯಿ, ಮಗಳು ಮತ್ತು ಸೊಸೆಯಂದಿರನ್ನು ಗೌರವಿಸುತ್ತಾನೆಯೋ ಆತನಿಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ. ಈ ಪಾಠವು ಮಗನು ಬೆಳೆದು ದೊಡ್ಡವನಾದಾಗ ಪತ್ನಿಯನ್ನು ಆತ ಗೌರವಯುತವಾಗಿ ನೋಡಲು ಸಹಾಯ ಮಾಡುತ್ತದೆ.
ತನ್ನ ಕಾಲುಗಳ ಮೇಲೆ ನಿಲ್ಲುವುದನ್ನು ಕಲಿಸಿ ಕೊಡಿ : ಜೀವನ ಪರ್ಯಂತ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸಿಯೇ ಬದುಕಲು ಸಾಧ್ಯವಿಲ್ಲ. ಹೀಗಾಗಿ ತಂದೆಯು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವ ಬಗ್ಗೆ ಹೇಳಿ ಕೊಡಬಹುದು. ಅದಕ್ಕೆ ಪೂರಕವಾದ ಕೌಶಲ್ಯ ಹಾಗೂ ವಾತಾವರಣವನ್ನು ಸೃಷ್ಟಿಸಿಕೊಡಬೇಕು.
ಜವಾಬ್ದಾರಿ ವಹಿಸಿಕೊಳ್ಳಲು ಕಲಿಸಿ : ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ಹಂತದಲ್ಲಿ ವಿವಿಧ ರೀತಿಯ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಮಕ್ಕಳಿಗೆ ಫೋಷಕರು ಜವಾಬ್ದಾರಿ ವಹಿಸಿಕೊಂಡು ನಿಭಾಯಿಸುವುದನ್ನು ಕಲಿಸಕೊಡುವುದು ಬಹಳ ಮುಖ್ಯ. ಎಷ್ಟೋ ಜವಾಬ್ದಾರಿಗಳನ್ನು ಮಕ್ಕಳು ತಾವಾಗಿ ಕಲಿಯಲು ಆಗುವುದಿಲ್ಲ. ಅದಲ್ಲದೇ, ಶಾಲೆಯಲ್ಲಿಯೂ ಕಲಿಸುವುದಿಲ್ಲ, ಹೀಗಾಗಿ ತಂದೆಯೇ ಕಲಿಸುವುದು ಅಗತ್ಯ.
ಭಾವನೆಗಳನ್ನು ನಿಯಂತ್ರಿಸುವುದು ಹೇಗೆಂದು ತಿಳಿಸಿ : ಪ್ರತಿಯೊಬ್ಬ ವ್ಯಕ್ತಿಯು ಸಂದರ್ಭಕ್ಕೆ ಅನುಸಾರವಾಗಿ ಭಾವನೆಗಳನ್ನು ಹೊರಹಾಕುತ್ತಾನೆ. ಆದರೆ ಗಂಡು ಮಕ್ಕಳು ಅಳುವುದು ಸೇರಿದಂತೆ ಇನ್ನಿತ್ತರ ಭಾವನೆಯನ್ನು ತೋರ್ಪಡಿಸುವುದನ್ನು ಸಮಾಜವು ಒಪ್ಪುವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಭಾವನೆಗಳ ಮೇಲೆ ಸ್ಥಿಮಿತವನ್ನು ಕಾಯ್ದುಕೊಂಡು ಆ ಸನ್ನಿವೇಶವನ್ನು ಹೇಗೆ ಎದುರಿಸಬೇಕು ಎನ್ನುವ ಪಾಠವನ್ನು ತಂದೆಯು ಕಲಿಸಿಕೊಡಬೇಕು. ಇದರಿಂದ ಕಷ್ಟಕರ ಸನ್ನಿವೇಶಗಳನ್ನು ಎದುರಿಸಲು ಸಾಧ್ಯವಾಗುತ್ತದೆ.