World Post Day 2024: ಜಗತ್ತಿನ ಏಕೈಕ ತೇಲುವ ಹಾಗೂ ಅತೀ ಎತ್ತರದ ಅಂಚೆ ಕಚೇರಿಯಿರುವುದು ಭಾರತದಲ್ಲೇ, ಏನಿದರ ವಿಶೇಷತೆ?

ತಂತ್ರಜ್ಞಾನ ಬೆಳೆದಂತೆ ಇಂದಿನ ಜನರು ಅಂಚೆ ಸೇವೆಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಜನರ ದೈನಂದಿನ ಜೀವನದಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 9 ರಂದು ಜಾಗತಿಕ ಅಂಚೆ ಒಕ್ಕೂಟವು ವಿಶ್ವ ಅಂಚೆ ದಿನವನ್ನು ಆಚರಿಸುತ್ತದೆ. ಹಾಗಾದ್ರೆ ವಿಶ್ವ ಅಂಚೆ ದಿನದ ಆಚರಣೆಯೂ ಆರಂಭವಾದದ್ದು ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Post Day 2024: ಜಗತ್ತಿನ ಏಕೈಕ ತೇಲುವ ಹಾಗೂ ಅತೀ ಎತ್ತರದ ಅಂಚೆ ಕಚೇರಿಯಿರುವುದು ಭಾರತದಲ್ಲೇ, ಏನಿದರ ವಿಶೇಷತೆ?
ಅಂಚೆ ಕಚೇರಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 9:10 AM

ಈಗಿನ ನಾವು ನೀವು ಸ್ಮಾರ್ಟ್ ಫೋನ್ ಯುಗದಲ್ಲಿದ್ದೇವೆ. ಹೀಗಾಗಿ ಕ್ಷಣಾರ್ಧದಲ್ಲಿಯೇ ಎಲ್ಲರೊಂದಿಗೆ ಸಂವಹನ ನಡೆಸಬಹುದಾಗಿದೆ. ಆದರೆ ಒಂದು ಕಾಲದಲ್ಲಿ ದೂರದ ಸಂಬಂಧಿಕರಿಗೆ ಅಗತ್ಯ ಮಾಹಿತಿ ಕಳುಹಿಸಲು ಹಾಗೂ ಯೋಗ ಕ್ಷೇಮ ವಿಚಾರಿಸಲು ಈ ಅಂಚೆ ಸೇವೆಯನ್ನೇ ಅವಲಂಬಿಸಬೇಕಾಗಿತ್ತು. ಹೀಗಾಗಿ ಅಂಚೆಯಣ್ಣ ಒಂದಾನೊಂದು ಕಾಲದಲ್ಲಿ ದೂರದ ಊರಿನಲ್ಲಿರುವ ಜನರ ನಡುವೆ ಸಂವಹನಕ್ಕೆ ಪ್ರಮುಖ ಕೊಂಡಿಯಾಗಿದ್ದನು. ಆದರೆ ಇಂದು ಸೀಮಿತ ಅಂಚೆ ಸೇವೆಗಳಿಗೆ ಮಾತ್ರ ಅಂಚೆಯಣ್ಣನನ್ನು ಅವಲಂಬಿಸುವಂತಾಗಿದೆ. ಅದಲ್ಲದೇ ಇಂದಿನ ಜನರು ಅಂಚೆ ಸೇವೆಯನ್ನು ಬಳಸುವುದು ತೀರಾ ಕಡಿಮೆಯಾಗಿದೆ. ಹೀಗಾಗಿ ಗ್ರಾಹಕರಿಗೆ ಅಂಚೆ ಇಲಾಖೆಯ ಬಗ್ಗೆ ಮಾಹಿತಿ ನೀಡುವುದು, ಅಂಚೆ ಸೇವಗಳ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಅಂಚೆ ದಿನದ ಇತಿಹಾಸ

1840 ರಲ್ಲಿ ಇಂಗ್ಲೇಂಡಿನ ಸರ್ ರೋಲ್ಯಾಂಡ್ ಹಿಲ್ ಎಂಬವರು ಪತ್ರಗಳನ್ನು ಸಿದ್ಧಪಡಿಸುವ ಹೊಸದಾದ ವ್ಯವಸ್ಥೆಯನ್ನು ಮೊದಲ ಬಾರಿಗೆ ಪ್ರಾರಂಭಿಸಿದರು. ಹೀಗೆ 1800 ರ ದಶಕದ ಅಂತ್ಯದಲ್ಲಿ ಅಂತಾರಾಷ್ಟ್ರೀಯ ಪತ್ರವಿನಿಮಯದ ನಿಧಾನಗತಿಯ ಬೆಳವಣಿಗೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ಅಂಚೆ ಎನ್ನುವ ವ್ಯವಸ್ಥೆಯೂ ಹುಟ್ಟಿಕೊಂಡಿತು. ಆ ಬಳಿಕ ಮೊದಲ ಬಾರಿಗೆ ಅಕ್ಟೋಬರ್ 9 1874 ರಲ್ಲಿ ಸ್ವಿಟ್ಜರ್ಲೆಂಡ್ನ ಬರ್ನ್ ನಲ್ಲಿ ಯುನಿವರ್ಸಲ್ ಪೋಸ್ಟಲ್ ಯುನಿಯನ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ನೆನಪಿಗಾಗಿ 1969 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ಸಮ್ಮೇಳನದಲ್ಲಿ ಮೊದಲನೇ ಬಾರಿಗೆ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಅಂಚೆ ದಿನದ ಮಹತ್ವ ಹಾಗೂ ಆಚರಣೆ

ಈಗೇನು ಕುಳಿತಲ್ಲಿಂದ ಎಷ್ಟೋ ದೂರದಲ್ಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯ ಎನ್ನುವಂತಾಗಿದೆ. ಆದರೆ ಇಂಟರ್ನೆಟ್ ಮತ್ತು ದೂರಸಂಪರ್ಕದ ಆವಿಷ್ಕಾರದ ಮೊದಲು, ಜನರು ಸಂವಹನಕ್ಕಾಗಿ ಕೇವಲ ಅಂಚೆ ಸೇವೆಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದರು. ಆ ಕಾಲದಿಂದ ಈ ಕಾಲದವರೆಗೆ ಅಂಚೆ ಇಲಾಖೆಯೂ ಜನರಿಗೆ ವಿವಿಧ ಸೇವೆಗಳನ್ನು ನೀಡುತ್ತಾ ಬರುವಲ್ಲಿ ಯಶಸ್ವಿಯಾಗಿದೆ ಪ್ರಪಂಚದಾದ್ಯಂತ ಜನರ ದೈನಂದಿನ ಜೀವನದಲ್ಲಿನ ವ್ಯವಹಾರ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಂಚೆ ಇಲಾಖೆಯ ಪಾತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಹಾಗೂ ಗ್ರಾಹಕರಿಗೆ ಅಂಚೆ ಇಲಾಖೆಯ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಅಂಚೆ ಇಲಾಖೆಗಳು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಇದನ್ನೂ ಓದಿ: ಬೇರೆಯವರು ಏನು ಅಂದುಕೊಳ್ತಾರೋ ಎಂದು ಯೋಚಿಸುವುದನ್ನು ಬಿಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ವಿಶ್ವದಲ್ಲೇ ಏಕೈಕ ತೇಲುವ ಅಂಚೆ ಕಚೇರಿ

ಶ್ರೀನಗರದ ದಾಲ್ ಸರೋವರದಲ್ಲಿರುವ ಸುಮಾರು 200 ವರ್ಷಗಳಷ್ಟು ಹಳೆಯ ಕಚೇರಿಯಿದೆ. ಇದು ನೀರಿನ ಮೇಲೆ ತೇಲುವುದೇ ಇದರ ವಿಶೇಷತೆಯಾಗಿದೆ. ಹೀಗಾಗಿ ವಿಶ್ವದ ಏಕೈಕ ತೇಲುವ ಅಂಚೆ ಕಚೇರಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಈ ಬೋಟ್ ಹೌಸ್ ಮಾದರಿಯಲ್ಲಿದ್ದು ಈ ಅಂಚೆ ಕಛೇರಿಯನ್ನು ಮೊದಲು ನೆಹರು ಪಾರ್ಕ್ ಪೋಸ್ಟ್ ಎಂದು ಕರೆಯಲಾಗುತ್ತಿತ್ತು. ಆದರೆ 2011ರಲ್ಲಿ ‘ಫ್ಲೋಟಿಂಗ್ ಪೋಸ್ಟ್ ಆಫೀಸ್’ ಎಂದು ಹೆಸರಿಡಲಾಯಿತು. ಈ ಅಂಚೆ ಕಚೇರಿಯ ಕುರಿತು ಸಾಕಷ್ಟು ಸಾಕ್ಷ್ಯ ಚಿತ್ರಗಳನ್ನು ಕಾಣಬಹುದು. ಇದು ದಾಲ್ ಲೇಕ್ ನ ನಿವಾಸಿಗಳ ಸೇವಿಂಗ್ ಅಕೌಂಟ್, ಇತರೆ ವ್ಯವಸ್ಯೆಗಳನ್ನೂ ಹೊಂದಿದೆ. ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.

ಅತೀ ಎತ್ತರದ ಅಂಚೆ ಕಚೇರಿ

ವಿಶ್ವದ ಅತಿ ಎತ್ತರದಲ್ಲಿರುವ ಅಂಚೆ ಕಚೇರಿಯಿರುವುದು ಭಾರತದಲ್ಲಿ ಎನ್ನಲಾಗಿದೆ. ಹಿಮಾಚಲ ಪ್ರದೇಶದ ಹಿಕ್ಕಿಮ್ ಎನ್ನುವ ಹಳ್ಳಿಯೊಂದರಲ್ಲಿ ಈ ಅಂಚೆ ಕಚೇರಿಯಿದೆ. ರಿಂಚೆನ್ ಛೆರಿಂಗ್ ಎನ್ನುವ ವ್ಯಕ್ತಿಯೂ ಸುಮಾರು 1983 ಇಸ್ವೀಯಿಂದ ಈ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 14,400 ಅಡಿಯಷ್ಟು ಎತ್ತರದಲ್ಲಿದ್ದು ಅತೀ ಎತ್ತರದ ಜಗತ್ತಿನ ಏಕೈಕ ಅಂಚೆ ಕಚೇರಿಯಿದಾಗಿದೆ.

ಈ ಪ್ರದೇಶದಲ್ಲಿ ಹಿಮಪಾತವಾಗುವುದರಿಂದ ಇಲ್ಲಿನ ಕೆಲವು ಹಳ್ಳಿಗಳಿಗೆ ಯಾವುದೇ ದೂರವಾಣಿಯ ಸಂಪರ್ಕವಿಲ್ಲದ ಕಾರಣ ಸಂವಹನಕ್ಕೆ ಸಹಾಯ ಮಾಡುವುದೇ ಈ ಅಂಚೆ ಸೇವೆ. ಆದರೆ ರಸ್ತೆಯಿಲ್ಲದ ಕಾರಣ ಕಾಗದ ಪತ್ರಗಳನ್ನು ಹೊತ್ತು ಕೊಂಡು 46 ಕಿಮೀ ದೂರದಲ್ಲಿರುವ ಕಾಝಾಗೆ ನಡೆದುಕೊಂಡು ಹೋಗುವುದೇ ಅಂಚೆಯಣ್ಣನಿಗೆ ಅನಿವಾರ್ಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ
‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!