Personality Test : ಊಟ ಮಾಡುವ ರೀತಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

ಒಬ್ಬರಿಂದ ಇನ್ನೊಬ್ಬರಿಗೆ ಹೋಲಿಕೆ ಮಾಡಿದರೆ ಊಟ ಮಾಡುವ ರೀತಿಯು ಭಿನ್ನವಾಗಿರುತ್ತದೆ. ನೀವು ಎಂದಾದರೂ ನೀವು ಹೇಗೆ ಊಟ ಮಾಡುತ್ತೀರಿ ಎನ್ನುವುದನ್ನು ಯೋಚಿಸಿದ್ದೀರಾ. ನೀವು ಆಹಾರ ಸೇವನೆ ಮಾಡುವ ರೀತಿಯಲ್ಲಿಯೇ ನಿಮ್ಮ ವ್ಯಕ್ತಿತ್ವವು ಅಡಗಿದೆ. ಹಾಗಾದ್ರೆ ನೀವು ಯಾವ ರೀತಿ ಊಟ ಮಾಡುತ್ತೀರಾ ಅದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಅಳೆಯಬಹುದು.

Personality Test : ಊಟ ಮಾಡುವ ರೀತಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 5:27 PM

ದಿನನಿತ್ಯ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಊಟ ಮಾಡುವ ರೀತಿಯು ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವಾಗಿಯೇ ಇರುತ್ತದೆ. ಕೆಲವರು ಬೇಗ ಬೇಗ ಊಟ ಮಾಡಿದರೆ, ಇನ್ನು ಕೆಲವರು ನಿಧಾನವಾಗಿ ಪ್ರತಿ ತುತ್ತನ್ನು ಆಸ್ವಾದಿಸುತ್ತಾರೆ. ಆದರೆ ಊಟ ಮಾಡುವುದರಲ್ಲಿಯೂ ನೀವು ಯಾವ ರೀತಿಯ ವ್ಯಕ್ತಿಯೆಂದು ತಿಳಿಯಬಹುದಾಗಿದೆ.

  1. ನಿಧಾನವಾಗಿ ತಿನ್ನುವವರು: ಈ ರೀತಿ ಆಹಾರ ಸೇವಿಸುವ ಜನರು ತಮ್ಮ ಕೆಲಸ ಕಾರ್ಯಗಳನ್ನು ನಿಧಾನವಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುತ್ತಾರೆ. ಎಲ್ಲರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಗುಣ ಇವರದ್ದಾಗಿರುತ್ತದೆ. ಈ ವ್ಯಕ್ತಿಗಳು ನಾಯಕತ್ವ ಸ್ಥಾನಗಳಲ್ಲಿರಲು ಇಷ್ಟಪಡುತ್ತಾರೆ.
  2. ವೇಗವಾಗಿ ತಿನ್ನುವವರು: ಇವರು ಶ್ರದ್ಧೆಯಿಂದ ಕೆಲಸ ಮಾಡುವುದಷ್ಟೇ ಅಲ್ಲ, ಸಮಯಕ್ಕೂ ಮುನ್ನವೇ ಎಲ್ಲಾ ಕೆಲಸವನ್ನು ಮುಗಿಸುತ್ತಾರೆ. ಅದಲ್ಲದೇ, ಕೆಲಸದಲ್ಲಿ ಕಳೆದು ಹೋಗಿ ವೈಯಕ್ತಿಕ ಬದುಕಿನ ಹೆಚ್ಚು ಗಮನ ಕೊಡುವುದಿಲ್ಲ. ಹೆಚ್ಚು ಹಸಿವಿನಿಂದ ಕೂಡಿರುವ ಈ ವ್ಯಕ್ತಿಗಳು ತಮ್ಮ ಸಮಯವನ್ನು ಗೌರವಿಸುತ್ತಾರೆ. ಕೆಲಸವನ್ನು ಮುಗಿಸುವ ಭರದಲ್ಲಿ ಜೀವನದ ಸಣ್ಣ ಪುಟ್ಟ ಸಂತೋಷಗಳನ್ನು ಕಳೆದುಕೊಳ್ಳುತ್ತಾರೆ.
  3. ಎಲ್ಲವನ್ನು ಒಪ್ಪಿಕೊಂಡು ತಿನ್ನುವವರು: ಎಲ್ಲಾ ಆಹಾರವನ್ನು ತಿನ್ನುವ ಜನರು ಎಲ್ಲಾ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ನಾವು ಅಂದುಕೊಂಡಂತೆ ಎಲ್ಲವೂ ನಡೆಯಬೇಕೆಂದು ಬಯಸುವುದು ಇವರ ವ್ಯಕ್ತಿತ್ವವಾಗಿರುತ್ತದೆ. ಇದರಿಂದ ಈ ಜನರು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವುದಲ್ಲದೆ, ಎಲ್ಲರೂ ಸ್ವಚ್ಛತೆ ಕಡೆಗೆ ಗಮನ ಕೊಡಬೇಕು ಎಂದು ಬಯಸುವ ಗುಣ ಇವರದ್ದಾಗಿರುತ್ತದೆ.
  4. ಬೇಕಾದ್ದನ್ನು ಮಾತ್ರ ತಿನ್ನುವವರು : ಕೆಲವು ವ್ಯಕ್ತಿಗಳು ಎಲ್ಲಾ ತರಕಾರಿಗಳನ್ನು ತಿನ್ನಲು ಬಯಸುವುದಿಲ್ಲ. ತಮಗೆ ಏನು ಬೇಕೋ ಅದನ್ನು ಮಾತ್ರ ಸೇವಿಸುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುತ್ತಾರೆ. ಸೋಲಿನ ಭಯದಿಂದಾಗಿ ಹೊಸದನ್ನು ಪ್ರಯತ್ನಿಸಲು ಮುಂದಾಗುವುದಿಲ್ಲ.ಯಾವಾಗಲೂ ನಿಮ್ಮ ಆರಾಮದಾಯಕವಾಗಿರುವ ಕಾರಣ ನೀವು ಯಶಸ್ಸನ್ನು ಸಾಧಿಸುವುದು ಕಷ್ಟಕರವಾಗುತ್ತದೆ.
  5. ಶಬ್ಧ ಮಾಡುತ್ತಾ ತಿನ್ನುವ ವ್ಯಕ್ತಿಗಳು : ಕೆಲವರಿಗೆ ಊಟ ಮಾಡುವಾಗ ಶಬ್ದ ಮಾಡುತ್ತ ತಿನ್ನುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ಸದಾ ಸದ್ದು ಮಾಡುವವರಾಗಿರುತ್ತಾರೆ. ನೆರೆಹೊರೆಯವರು ಇವರನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ. ಹೊಸತನವನ್ನು ಪ್ರಯತ್ನ ಮಾಡುವುದರಿಂದ ಜೀವನದಲ್ಲಿ ಸವಾಲುಗಳನ್ನು ಎದುರಿಸುವುದೇ ಹೆಚ್ಚು. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಕಾರಣ ಏನನ್ನಾದರೂ ಸಾಧಿಸುತ್ತಾರೆ.
  6. ಕೆಳಗೆ ಬೀಳಿಸುತ್ತಾ ತಿನ್ನುವವರು: ಕೆಲವರು ಮಕ್ಕಳಂತೆ ತಟ್ಟೆಯ ಸುತ್ತ ಬೀಳಿಸುತ್ತ ಆಹಾರ ಸೇವಿಸುತ್ತಾರೆ. ಈ ವ್ಯಕ್ತಿಗಳು ಕೆಲಸ ಮತ್ತು ಸುತ್ತಮುತ್ತಲಿನ ಜನರನ್ನು ಪ್ರೀತಿಸುತ್ತಾರೆ. ಆದರೆ ಕೆಲಸವನ್ನು ಯಾವಾಗ ಮುಗಿಸಬೇಕೆಂದು ಎನ್ನುವುದನ್ನು ಮರೆತು ಬಿಡುತ್ತಾರೆ. ಹೀಗಾಗಿ ಇತರರು ಈ ವ್ಯಕ್ತಿಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವುದೇ ಹೆಚ್ಚು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ನಾನೆಂಥವನು ಅಂತ ಚಿಕ್ಕಮಗಳೂರು ಜನಕ್ಕೆ ಗೊತ್ತು: ಸಿಟಿ ರವಿ
ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ
ಬಿಗ್​ಬಾಸ್ ಮನೆಯಲ್ಲಿ ಭೂತ, ಬಿದ್ದು ಒದ್ದಾಡಿದ ಚೈತ್ರಾ, ಮನೆ ಮಂದಿಗೆ ಭಯ
Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು
Video: ಜರ್ಮನಿಯ ಕ್ರಿಸ್​ಮಸ್ ಮಾರ್ಕೆಟ್​ನಲ್ಲಿ ಜನರ ಮೇಲೆ ಹರಿದ ಕಾರು
ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ
ತಿರುಪತಿ 7 ದ್ವಾರಗಳ ರಹಸ್ಯ ಮತ್ತು ಆಧ್ಯಾತ್ಮಿಕ ಮಹತ್ವ ತಿಳಿಯಿರಿ
Daily horoscope: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
Daily horoscope: ಈ ರಾಶಿಯ ಸರ್ಕಾರಿ ನೌಕರರು ಇಂದು ಶುಭ ಸುದ್ದಿ ಕೇಳುವರು
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ಇನ್ಮುಂದೆ ಬೆಂಗಳೂರು ಟ್ರಾಫಿಕ್​ ಬಗ್ಗೆ ಮೊಬೈಲ್​ನಲ್ಲೇ ತಿಳಿಯಿರಿ: ವಿಡಿಯೋ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ
ನಾವೇನು ಕೈಗೆ ಬಳೆ ತೊಟ್ಟು ಕುಳಿತಿಲ್ಲ: ವಿಜಯೇಂದ್ರ ಕಿಡಿ