Loneliness: ಒಂಟಿಯಾಗಿರುವವರು ಆಗಾಗ ಅನಾರೋಗ್ಯಕ್ಕೆ ತುತ್ತಾಗಿ, ರೋಗ ನಿರೋಧಕ ಶಕ್ತಿ ಕಳೆದುಕೊಳ್ಳಲು ಕಾರಣವೇನು?
ಜೀವನದ ಒಂದಲ್ಲಾ ಒಂದು ಹಂತದಲ್ಲಿ ನಾವೆಲ್ಲರೂ ಏಕಾಂಗಿಯಾಗಿರುತ್ತೇವೆ. ಆದರೆ ಕೆಲವೊಮ್ಮೆ ನಾವು ಇಷ್ಟಪಟ್ಟರೂ ಕೂಡ ನಮ್ಮ ಪ್ರೀತಿಪಾತ್ರರಿಂದ ದೂರ ಉಳಿದುಬಿಡುತ್ತೇವೆ.
ಜೀವನದ ಒಂದಲ್ಲಾ ಒಂದು ಹಂತದಲ್ಲಿ ನಾವೆಲ್ಲರೂ ಏಕಾಂಗಿಯಾಗಿರುತ್ತೇವೆ. ಆದರೆ ಕೆಲವೊಮ್ಮೆ ನಾವು ಇಷ್ಟಪಟ್ಟರೂ ಕೂಡ ನಮ್ಮ ಪ್ರೀತಿಪಾತ್ರರಿಂದ ದೂರ ಉಳಿದುಬಿಡುತ್ತೇವೆ. ಒಂಟಿಯಾಗಿರುವವರಿಗೆ ಪದೇ ಪದೇ ಅನಾರೋಗ್ಯವು ಕಾಡುತ್ತಿರುತ್ತದೆ, ಒಂಟಿಯಾಗಿರುವಾಗ ಬೇರೆಯವರ ತೊಂದರೆ ಇಲ್ಲದಿದ್ದರೂ ಮಾನಸಿಕವಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಾರೆ.
ಕೋವಿಡ್ ಸಂದರ್ಭದಲ್ಲಿ ದೀರ್ಘಕಾಲ ಜನರು ದೂರ ದೂರವೇ ಇದ್ದರು. ಇದು ಕೂಡ ಜನರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿತ್ತು. ಕೋವಿಡ್-19 ನಂತರ ಅನೇಕ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿರುವುದಕ್ಕೆ ಇದೇ ಕಾರಣ.
ಆದರೆ ಒಂಟಿತನವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ನಿಮ್ಮ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಒಂಟಿತನವು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಮೂಲಕ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ನೀವೂ ಕೂಡ ಕೆಲವು ದಿನಗಳಿಂದ ಒಂಟಿತನ ಅನುಭವಿಸುತ್ತಿದ್ದರೆ ಮತ್ತು ಈ ದಿನಗಳಲ್ಲಿ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ಈ ಎರಡು ಅಂಶಗಳು ಒಂದಕ್ಕೊಂದು ಸಂಬಂಧಿಸಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಒಂಟಿತನವು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಬಹಿರಂಗಪಡಿಸಲಾಗಿದೆ. ಹಾಗಾದರೆ ಒಂಟಿತನಕ್ಕೂ ರೋಗನಿರೋಧಕ ಶಕ್ತಿಗೂ ಏನು ಸಂಬಂಧ ಎಂದು ತಿಳಿಯೋಣ.
ಓಹಿಯೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಸ್ತುತಪಡಿಸಲಾದ ಸಂಶೋಧನೆಯ ಪ್ರಕಾರ ನೀವು ಒಬ್ಬಂಟಿಯಾಗಿದ್ದರೆ, ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ನೀವು ಹೆಚ್ಚು ಉರಿಯೂತ-ಸಂಬಂಧಿತ ಪ್ರೋಟೀನ್‌ಗಳನ್ನು ಉತ್ಪಾದಿಸುವ ಸಾಧ್ಯತೆಯಿದೆ. ಉರಿಯೂತವು ಟೈಪ್ 2 ಡಯಾಬಿಟಿಸ್, ಸಂಧಿವಾತ ಮತ್ತು ಆಲ್ಝೈಮರ್ನ ಕಾಯಿಲೆಯಂತಹ ಹಲವಾರು ಆರೋಗ್ಯ ಪರಿಸ್ಥಿತಿಗಳಿಗೆ ಸಂಬಂಧಿಸಿದೆ.
ಒಂಟಿಯಾಗಿರುವ ಜನರು ಹೆಚ್ಚಿನ ಒತ್ತಡವನ್ನು ಹೊಂದಿರುತ್ತಾರೆ. ಒಂಟಿತನದಿಂದ ಉಂಟಾಗುವ ಒತ್ತಡವು ಅಡ್ರಿನೊಕಾರ್ಟಿಕಲ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ, ಇದನ್ನು “ಫ್ಲೈಟ್ ಮತ್ತು ಫೈಟ್” ಪ್ರತಿಕ್ರಿಯೆ ಎಂದೂ ಕರೆಯುತ್ತಾರೆ.
ಒಂಟಿತನವು ಅನೇಕ ಬಾಹ್ಯ ಸೋಂಕುಗಳಿಗೆ ಗುರಿಯಾಗುವಂತೆ ಮಾಡುತ್ತದೆ, ಏಕೆಂದರೆ ನಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.
ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು 2012 ರ ಹಾರ್ವರ್ಡ್ ಅಧ್ಯಯನವು ಒಂಟಿತನದಿಂದ ಉಂಟಾಗುವ ಒತ್ತಡವನ್ನು ನಿಭಾಯಿಸುವ ಮಧ್ಯವಯಸ್ಕರು ಭವಿಷ್ಯದಲ್ಲಿ ಹೃದ್ರೋಗದಿಂದ ಸಾಯುವ ಅಪಾಯವನ್ನು ಶೇ.24 ರಷ್ಟು ಹೆಚ್ಚಿಸುತ್ತಾರೆ ಎಂದು ಸೂಚಿಸುತ್ತದೆ. ಒತ್ತಡದ ಹಾರ್ಮೋನ್‌ಗಳ ಹೆಚ್ಚಿದ ಮಟ್ಟವು ಹೃದಯದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯನ್ನು ಹೆಚ್ಚಿಸುತ್ತದೆ.
ಅಷ್ಟೇ ಅಲ್ಲ, ಒಂಟಿತನವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಹೃದಯ ಸ್ನಾಯು ಇನ್ನಷ್ಟು ಗಟ್ಟಿಯಾಗಿ ಕೆಲಸ ಮಾಡಬೇಕಾಗುತ್ತದೆ, ಇದರಿಂದಾಗಿ ರಕ್ತಪರಿಚಲನಾ ವ್ಯವಸ್ಥೆಯು ನಿಧಾನಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ರಚಿಸಲಾದ ರಕ್ತದ ಹರಿವು ರಕ್ತನಾಳಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
ಒಂಟಿತನದಿಂದ ಖಿನ್ನತೆ ಚಿಕಾಗೋ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯ ಪ್ರಕಾರ ನೀವು ಒಂಟಿತನವನ್ನು ಅನುಭವಿಸಿದಾಗ, ನೀವು ಕೂಡ ಖಿನ್ನತೆಗೆ ಒಳಗಾಗುತ್ತೀರಿ. ಏಕಾಂಗಿಯಾಗಿರುವವರಲ್ಲಿ ಕಾರ್ಟಿಸೋಲ್ ಮತ್ತು ಇತರ ಒತ್ತಡ-ಸಂಬಂಧಿತ ಹಾರ್ಮೋನುಗಳು ಸಕ್ರಿಯಗೊಳ್ಳುತ್ತವೆ ಮತ್ತು ಖಿನ್ನತೆಯನ್ನು ಉಂಟುಮಾಡುತ್ತವೆ. ಇದರಿಂದ ರೋಗನಿರೋಧಕ ಶಕ್ತಿಯೂ ದುರ್ಬಲವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ