AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯೋ ನೀರನ್ನು ಇದಕ್ಕಿಂತ ಹೆಚ್ಚು ಹೊತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಾರದಂತೆ; ಏಕೆ ಗೊತ್ತಾ?

ಬೇಸಿಗೆಯಲ್ಲಿ ಹೆಚ್ಚಿನ ಸೆಕೆ ತಾಳಲಾರದೆ ಫ್ರಿಡ್ಜ್‌ ನೀರನ್ನೇ ಕುಡಿತಾರೆ. ಕೆಲವರಂತೂ ವಾರಗಳ ತನಕ ಆಗುತ್ತೇ ಅಂತ ಒಂದೇ ಬಾರಿಗೆ 4 ರಿಂದ 6 ಬಾಟಲ್‌ಗಳಲ್ಲಿ ನೀರು ತುಂಬಿಸಿ ಅದನ್ನು ಫ್ರಿಡ್ಜ್‌ನೊಳಗೆ ಇಟ್ಟು ಬಿಡ್ತಾರೆ. ಹೀಗೆ ಕುಡಿಯುವ ನೀರನ್ನು ಫ್ರಿಡ್ಜ್‌ನಲ್ಲಿ ವಾರಗಟ್ಟಲೇ ಇಡಬಹುದೇ? ಇದರಿಂದ ಆರೋಗ್ಯಕ್ಕೆ ಏನಾದ್ರೂ ತೊಂದರೆ ಇದ್ಯಾ? ಎಷ್ಟು ಹೊತ್ತುಗಳ ಕಾಲ ಕುಡಿಯುವ ನೀರನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಹುದು? ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕುಡಿಯೋ ನೀರನ್ನು ಇದಕ್ಕಿಂತ ಹೆಚ್ಚು ಹೊತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಾರದಂತೆ; ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: Apr 26, 2025 | 6:19 PM

Share

ಈ ಸುಡು ಬೇಸಿಗೆಯಲ್ಲಿ (Summer) ತಣ್ಣನೆಯ ಆಹಾರದ ಜೊತೆಗೆ ಫ್ರಿಡ್ಜ್‌ನಲ್ಲಿರುವ (fridge) ಕೋಲ್ಡ್‌ ನೀರನ್ನು (cold water) ಕುಡಿಯುವುದು ಸಾಮಾನ್ಯ. ಶಾಖದಿಂದ ಮುಕ್ತಿ ಪಡೆಯಲು ನಾರ್ಮಲ್‌ ನೀರಿನ ಬದಲು ಹೆಚ್ಚಿನವರು ರೆಫ್ರಿಜರೇಟರ್‌ನಲ್ಲಿರುವ ಕೋಲ್ಡ್‌ ನೀರನ್ನೇ ಕುಡಿಯಲು ಇಷ್ಟ ಪಡ್ತಾರೆ.  ಅದರಲ್ಲೂ ಕೆಲವರಂತೂ ವಾರಗಳ ತನಕ ಉಪಯೋಗಕ್ಕೆ ಬರುತ್ತೇ ಅಂತ ಒಂದೇ ಬಾರಿಗೆ 5 ರಿಂದ 8 ಬಾಟಲ್‌ಗಳಲ್ಲಿ ನೀರನ್ನು ತುಂಬಿಸಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಹಿಂದೆಲ್ಲಾ ನೀರನ್ನು ತಂಪಾಗಿಡಲು ಮಣ್ಣಿನ ಮಡಕೆಗಳನ್ನು ಬಳಕೆ ಮಾಡ್ತಿದ್ರು. ಆದ್ರೆ ಈಗಂತೂ ಜನ ಫ್ರಿಡ್ಜ್‌ ನೀರನ್ನೇ ಕುಡಿತಾರೆ. ಸುಲಭ ಆಗುತ್ತೇ ಅಂತ ನೀವು ಕೂಡಾ ವಾರಗಟ್ಟಲೇ ನೀರನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತೀದ್ದೀರಾ? ಹೀಗೆ ದೀರ್ಘ ಕಾಲ ಕುಡಿಯುವ ನೀರನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟರೆ ಏನಾಗುತ್ತದೆ?  ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಎಂಬುದನ್ನು ತಿಳಿಯಿರಿ.

ಎಷ್ಟು ಹೊತ್ತುಗಳ ಕಾಲ ಕುಡಿಯೋ ನೀರನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಹುದು:

ಈಗೆಲ್ಲಾ ಮಣ್ಣಿನ ಮಡಕೆ ಬದಲು ಜನ ಫ್ರಿಡ್ಜ್‌ನಲ್ಲೇ ನೀರನ್ನು ಸಂಗ್ರಹಿಸಿಡುತ್ತಾರೆ. ಈ ಕುಡಿಯೋ ನೀರನ್ನು ಎಷ್ಟು ಹೊತ್ತುಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬಹುದು ಗೊತ್ತಾ?  ತಜ್ಞರ ಪ್ರಕಾರ,  ಕುಡಿಯುವ ನೀರನ್ನು ರೆಫ್ರಿಜರೇಟರ್‌ನಲ್ಲಿ ಕೇವಲ 24 ಗಂಟೆಗಳ ಕಾಲ ಮಾತ್ರ ಇಡಬಹುದಂತೆ. 24 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿಡಬಾರದು. ಅಂದರೆ ನೀರನ್ನು ಬದಲಾಯಿಸುತ್ತಿರಬೇಕು.

ಇದನ್ನೂ ಓದಿ: ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ! ಈ ತಿಂಗಳಿನಲ್ಲಿ ಮಾತ್ರ ಯಾಕೆ?

ಇದನ್ನೂ ಓದಿ
Image
ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ!
Image
ಸಿಕ್ಕಾಪಟ್ಟೆ ಟೇಸ್ಟು ಹಲಸಿನ ಹಣ್ಣಿನ ಈ ಸಿಹಿ ಕಡುಬು
Image
ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಇದು ಹೃದಯಾಘಾತದ ಎಚ್ಚರಿಕೆ
Image
ಮರಗಳು, ಬೇರುಗಳು ಅಥವಾ ತುಟಿ ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು?

 ಇದರ ಹಿಂದಿನ ಕಾರಣ:

ಕುಡಿಯುವ ನೀರನ್ನು ರೆಫ್ರಿಜರೇಟರ್‌ನಲ್ಲಿ ದೀರ್ಘಕಾಲದವರೆಗೆ ಇಟ್ಟರೆ, ಆ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಬಹುದು. ಹಾಗಾಗಿ  ಬ್ಯಾಕ್ಟೀರಿಯಾದ ಚಟುವಟಿಕೆಯನ್ನು ತಡೆಗಟ್ಟಲು ಹಾಗೂ ಆರೋಗ್ಯದ ದೃಷ್ಟಿಯಿಂದ 24 ಗಂಟೆಗಳಿಗೊಮ್ಮೆ ಕುಡಿಯುವ ನೀರನ್ನು ಬದಲಾಯಿಸುವುದು ಸೂಕ್ತ. ಜೊತೆಗೆ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರನ್ನು ಸಂಗ್ರಹಿಸಿಡುವುದನ್ನು ತಪ್ಪಿಸುವುದು ಒಳ್ಳೆಯದು.

ಇನ್ನೊಂದು ಮಖ್ಯವಾದ ಸಂಗತಿ ಏನೆಂದ್ರೆ, ಫ್ರಿಡ್ಜ್‌ನಿಂದ ಬಾಟಲಿ ಹೊರಗೆ ತೆಗೆದ ತಕ್ಷಣ ನೀರನ್ನು ಕುಡಿಯಬಾರದು. ಅದರ ಕೋಲ್ಡ್‌ ಅಂಶ  ಕಡಿಮೆಯಾದ ನಂತರವೇ ಕುಡಿಯಬೇಕು. ಹೀಗಿರುವಾಗ ಫ್ರಿಡ್ಜ್‌ ನೀರು ಕುಡಿಯುವ ಬದಲು ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದು ಸೂಕ್ತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ