AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Statistics Day: ವಿಶ್ವ ಅಂಕಿ ಅಂಶ ದಿನದ ಇತಿಹಾಸ, ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ

ಪ್ರತಿ ಐದು ವರ್ಷಕ್ಕೊಮ್ಮೆ ಅಕ್ಟೋಬರ್‌ 20ರಂದು ವಿಶ್ವ ಅಂಕಿ ಅಂಶ ದಿನ ಎಂದು ಆಚರಣೆಯ ಮಾಡುತ್ತೇವೆ. 2010ರಲ್ಲಿ ಯುನೈಟೆಡ್‌ ನೇಷನ್ಸ್‌ ವಿಶ್ವ ಅಂಕಿ ಅಂಶ ದಿನವನ್ನು ಅಧಿಕೃತವಾಗಿ ಘೋಷಿಸಿತು.

World Statistics Day: ವಿಶ್ವ ಅಂಕಿ ಅಂಶ ದಿನದ ಇತಿಹಾಸ, ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ
world statistics day
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 20, 2022 | 1:07 PM

Share

ದಿನ ನಿತ್ಯದ ಜೀವನದಲ್ಲಿ, ದೇಶದ ಪ್ರಗತಿಯಲ್ಲಿ ಮಾಹಿತಿಯನ್ನು ನಮಗೆ ತಿಳಿದು ತಿಳಿಯದೆ ಅಂಕಿ ಅಂಶವನ್ನು ಬಳಕೆ ಮಾಡುತ್ತೇವೆ. ವಿಶ್ವ ಅಂಕಿ ಅಂಶ ದಿನದ ಇತಿಹಾಸ, ಅಂಕಿ ಅಂಶಗಳ ಪ್ರಕ್ರಿಯೆ, ಅಂಕಿ ಅಂಶದ ಬಳಕೆ ಮತ್ತು ಉಪಯೋಗ ಮತ್ತು ಭಾರತದಲ್ಲಿ ಅಂಕಿ ಅಂಶದ ದಿನಾಚರಣೆ ಬಗ್ಗೆ ಇಲ್ಲಿ ತಿಳಿಯೋಣ.

ವಿಶ್ವ ಅಂಕಿ ಅಂಶ ದಿನದ ಇತಿಹಾಸ:

ಪ್ರತಿ ಐದು ವರ್ಷಕ್ಕೊಮ್ಮೆ ಅಕ್ಟೋಬರ್‌ 20ರಂದು ವಿಶ್ವ ಅಂಕಿ ಅಂಶ ದಿನ ಎಂದು ಆಚರಣೆಯ ಮಾಡುತ್ತೇವೆ. 2010ರಲ್ಲಿ ಯುನೈಟೆಡ್‌ ನೇಷನ್ಸ್‌ ವಿಶ್ವ ಅಂಕಿ ಅಂಶ ದಿನವನ್ನು ಅಧಿಕೃತವಾಗಿ ಘೋಷಿಸಿತು. ನಂತರ ಪ್ರತಿ ಐದು ವರ್ಷಕ್ಕೊಮ್ಮೆ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2010 ಅಕ್ಟೋಬರ್‌ 20ರಂದು ಪ್ರಥಮ ಬಾರಿಗೆ ವಿಶ್ವ ಅಂಕಿ ಅಂಶ ದಿನವನ್ನು ಆಚರಿಸಲಾಯಿತು.

ಅಂಕಿ ಅಂಶಗಳ ಪ್ರಕ್ರಿಯೆ ಹೇಗೆ?

ಮೊದಲು ರಫ್ ಡೇಟಾ ಅಂಕಿ ಅಂಶದ ಮಾಹಿತಿಯನ್ನೂ ಸಂಗ್ರಹಿಸಿ, ನಂತರ ದೊರೆತ ಮಾಹಿತಿಯನ್ನು ಪರೀಕ್ಷಿಸಿ, ವಿಶ್ಲೇಷಣೆ ಮಾಡಿ ಕೊನೆಗೆ ಅಂಕಿ ಅಂಶದ ವರದಿ ಪ್ರಕಟಸಲಾಗುವುದು.

ಉದಾಹರಣೆ : ಮಧ್ಯಾಹ್ನ ಬಿಸಿ ಊಟದಲ್ಲಿ ಮೊಟ್ಟೆ ತಿನ್ನಲು ವಿದ್ಯಾರ್ಥಿಗಳಿಗೆ ಇಷ್ಟವೂ ಎಂಬುವ ಪ್ರಶ್ನೆ ಬಂದಾಗ. ಕೆಲ ಶಾಲೆಗಳಿಗೆ ಹೋಗಿ ಮಕ್ಕಳಿಗೆ ಕೇಳಿ, ವಿಶ್ಲೇಷಣೆ ಮಾಡಿದಾಗ ತಿಳಿದ ವಿಚಾರವೆಂದರೆ ಸರಿಸುಮಾರು 80ರಷ್ಟು ಮಕ್ಕಳು ಬಿಸಿ ಊಟದಲ್ಲಿ ಮೊಟ್ಟೆ ಬೇಕು ಎಂದರು. ಹೀಗೆ ಮಾಹಿತಿಯನ್ನು ಕೇವಲ ಹತ್ತು ಜನರಿಗೆ ಕೇಳಿ ಅಂಕಿ ಅಂಶವನ್ನು ಪ್ರಕಟ ಮಾಡುವುದಿಲ್ಲ. ಬದಲಿಗೆ ಸಾವಿರಾರು ಜನರ ಅಭಿಪ್ರಾಯವನ್ನು ಪಡೆದು ವಿಶ್ಲೇಷಿಸಿ ಕೊನೆಗೆ ಲಭ್ಯವಾಗುತ್ತದೆ.

ಅಂಕಿ ಅಂಶದ ಬಳಕೆ ಮತ್ತು ಉಪಯೋಗ?

ದಿನನಿತ್ಯದ ಜೀವನದಲ್ಲಿ ಶೇರುಪೇಟೆ ವಿಚಾರ, ಲಾಭ, ನಷ್ಟ, ರಿಯಲ್ ಎಸ್ಟೇಟ್, ಇತಿಹಾಸದ ಮಾಹಿತಿಯನ್ನು ನಮಗೆ ಸ್ಪಷ್ಟವಾಗಿ ಮಾಹಿತಿ ಸಿಗುವುದು ಅಂಕಿ ಅಂಶಗಳಿಂದ. ಇನ್ನೂ ದೇಶದ ಪ್ರಗತಿಗಾಗಿ ಆರೋಗ್ಯ ಕ್ಷೇತ್ರದಲ್ಲಿ, ರಕ್ಷಣಾ ಪಡೆ, ಸಾರಿಗೆ, ನಿರುದ್ಯೋಗ ಹೀಗೆ ಮುಂತಾದ ಅಂಕಿ ಅಂಶದ ಮಾಹಿತಿ ದೇಶದ ಪ್ರಗತಿಗೆ ಸಹಾಯವಾಗುತ್ತದೆ. ಸರ್ಕಾರದ ಯೋಜನೆಗಳನ್ನು ಎಷ್ಟು ಜನರಿಗೆ ಲಾಭವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಭಾರತದಲ್ಲಿ ಅಂಕಿ ಅಂಶದ ದಿನಾಚರಣೆ?

ಭಾರತದಲ್ಲಿ ಪ್ರತಿ ವರ್ಷ ಜೂನ್ 29 ರಂದು ರಾಷ್ಟ್ರೀಯ ಅಂಕಿ ಅಂಶ ದಿನವೆಂದು ಆಚರಿಸಲಾಗುತ್ತದೆ. ಭಾರತೀಯ ವಿಜ್ಞಾನಿ ಮತ್ತು ಸಂಖ್ಯಾಶಾಸ್ತ್ರಜ್ಞ ಪ್ರೊಫೆಸರ್. ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಜನ್ಮ ದಿನವನ್ನು ರಾಷ್ಟ್ರೀಯ ಅಂಕಿ ಅಂಶವೆಂದು ಆಚರಿಸಲಾಗುತ್ತದೆ.

– ಆನಂದ ಜೇವೂರ್, ಕಲಬುರಗಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ