AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ನಂತರವೂ ಕೂದಲು ಮತ್ತು ಉಗುರುಗಳು ಬೆಳೆಯುತ್ತವೆ, ಇದಕ್ಕೆ ಕಾರಣವೇನು?

ಒಬ್ಬ ವ್ಯಕ್ತಿ ಸತ್ತ ನಂತರ ಆತನ ದೇಹದ ಎಲ್ಲ ಭಾಗಗಳು ನಿಷ್ಕಗೊಳ್ಳುತ್ತದೆ. ಮೆದುಳು, ಹೃದಯದ ಬಡಿತ, ಶ್ವಾಸಕೋಶದ ಚಲವಲನ ಎಲ್ಲವೂ ನಿಲ್ಲುತ್ತದೆ. ಆದರೆ ದೇಹದ ಕೆಲವೊಂದು ಭಾಗಗಳುಸಕ್ರಿಯವಾಗಿರುತ್ತದೆ. ಅವುಗಳು ಯಾವುವು? ಅವುಗಳ ಬೆಳವಣಿಗೆ ಹೇಗೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಾವಿನ ನಂತರವೂ ಕೂದಲು ಮತ್ತು ಉಗುರುಗಳು ಬೆಳೆಯುತ್ತವೆ, ಇದಕ್ಕೆ ಕಾರಣವೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 27, 2025 | 4:45 PM

ಸಾವಿನ ನಂತರ ಮನುಷ್ಯ ದೇಹದ ಎಲ್ಲ ಭಾಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಸತ್ತ ನಂತರ ದೇಹ ಒಣಗುತ್ತದೆ. ರಕ್ತ ಪರಿಚಲನೆ ಇಲ್ಲದೆ, ದೇಹವು ತಣಗಾಗುತ್ತದೆ. ಹೃದಯದ ಬಡಿತವು ನಿಂತಿರುತ್ತದೆ. ಮದುಳಿನ ಚಟುವಟಿಕೆ, ಶ್ವಾಸಕೋಶದ ಕೆಲಸ ಕೂಡ ಇರುವುದಿಲ್ಲ. ಆದರೆ ಸತ್ತ ಮೇಲೂ ಮನುಷ್ಯ ಉಗುರು ಹಾಗೂ ಕೂದಲು ಬೆಳಯುತ್ತದೆ ಎಂಬ ಅಚ್ಚರಿಯ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಸಂಶೋಧನೆ ಹೇಳೋದೇನು ಇಲ್ಲಿದೆ ನೋಡಿ. ಸೈನ್ಸ್ ಫೋಕಸ್ ವರದಿಯ ಪ್ರಕಾರ, ಸಾವಿನ ನಂತರ, ದೇಹದಲ್ಲಿನ ನೀರಿನ ನಷ್ಟದಿಂದಾಗಿ ಇಡೀ ದೇಹವು ಒಣಗುತ್ತದೆ ಹಾಗೂ ದೇಹದ ಚರ್ಮ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಬೆರಳುಗಳು ಕೂಡ ಬದಲಾವಣೆ ಆಗುತ್ತದೆ. ಆಗಾ ಉಗುರುಗಳು ಕಾಣಿಸುತ್ತದೆ.

ಅದೇ ರೀತಿ, ಕೂದಲು ಸ್ವಲ್ಪ ಉದ್ದವಾಗಿ ಕಾಣಿಸಬಹುದು. ಅಂದರೆ, ಉಗುರುಗಳು ಮತ್ತು ಕೂದಲು ವಾಸ್ತವವಾಗಿ ಬೆಳೆಯುವುದಿಲ್ಲ, ಆದರೆ ಚರ್ಮ ಒಣಗುವುದರಿಂದ ಅವು ಹೆಚ್ಚು ಗೋಚರಿಸುತ್ತವೆ.ಸಾವು ತಕ್ಷಣವೇ ಸಂಭವಿಸಿದರೂ, ದೇಹದೊಳಗಿನ ಪ್ರಕ್ರಿಯೆಗಳು ಸ್ವಲ್ಪ ಸಮಯದವರೆಗೆ ಇರುತ್ತದೆ. ಹೃದಯ ಬಡಿತ ನಿಂತಾಗ, ಮೆದುಳಿನ ಜೀವಕೋಶಗಳು ತಕ್ಷಣವೇ ಸಾಯುತ್ತವೆ, ಆದರೆ ದೇಹದ ಇತರ ಕೆಲವು ಜೀವಕೋಶಗಳು ಸ್ವಲ್ಪ ಸಮಯದವರೆಗೆ ಬದುಕುಳಿಯಬಹುದು ಮತ್ತು ದೇಹದಲ್ಲಿರುವ ಆಮ್ಲಜನಕವನ್ನು ಬಳಸಿಕೊಂಡು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು. ಆದ್ದರಿಂದ ಉಗುರುಗಳು ಮತ್ತು ಕೂದಲು ಸ್ವಲ್ಪ ಸಮಯದವರೆಗೆ ಉದ್ದವಾಗಿ ಬೆಳೆಯಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕುಡಿಯೋ ನೀರನ್ನು ಹೆಚ್ಚು ಹೊತ್ತು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡಬಾರದಂತೆ

ಹಾಗಾದರೆ ಕೂದಲು ಹಾಗೂ ಉಗುರುಗಳು ಸತ್ತ ನಂತರ ಬೆಳೆಯುತ್ತದ್ದೇ? ಈ ಬಗ್ಗೆ ಯಾವುದೇ ಉತ್ತರ ಇಲ್ಲ. ಕನಿಷ್ಠ ಸಮಯದ ವರೆಗೆ ಸತ್ತ ನಂತರವು ದೇಹದ ಕೆಲವೊಂದು ಪ್ರಕ್ರಿಯೆಗಳು ಇರುತ್ತದೆ. ಈ ಪ್ರಕ್ರಿಯೆಗಳು ಸ್ಥಗಿತಗೊಳ್ಳು ಸಮಯ ತೆಗೆದುಕೊಳ್ಳಬಹುದು. ಮೆದುಳು ನಿಷ್ಕ್ರಿಯಗೊಂಡ ನಂತರವೂ ಉಗುರುಗಳು ಮತ್ತು ಕೂದಲಿನ ಬೆಳವಣಿಗೆ ಸಾಮಾನ್ಯವಾಗಿರುತ್ತದೆ. ಇನ್ನು ಕಡೆಯಿಂದ ಸಾವಿನ ನಂತರ ಉಗುರುಗಳು ಮತ್ತು ಕೂದಲು ಬೆಳೆಯುವುದನ್ನು ಏಕೆ ನಿಲ್ಲಿಸುತ್ತದೆ. ಅದಕ್ಕೆ ಇಲ್ಲಿದೆ ಉತ್ತರ ನೋಡಿ. ವರದಿಗಳ ಪ್ರಕಾರ, ಉಗುರು ಮತ್ತು ಕೂದಲಿನ ಬೆಳವಣಿಗೆಗೆ ಹೊಸ ಕೋಶಗಳ ಉತ್ಪಾದನೆ ಅಗತ್ಯವಾಗಿದ್ದು, ಇದಕ್ಕೆ ಗ್ಲೂಕೋಸ್ ಅಗತ್ಯವಿದೆ. ಮರಣದ ನಂತರ ದೇಹದಲ್ಲಿ ಗ್ಲೂಕೋಸ್ ಲಭ್ಯವಿರುವುದಿಲ್ಲ, ಇದರಿಂದಾಗಿ ಉಗುರುಗಳು ಮತ್ತು ಕೂದಲು ಬೆಳೆಯುವುದನ್ನು ನಿಲ್ಲಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Sun, 27 April 25

ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ