AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಬಣ್ಣದ ಆಧಾರದ ಮೇಲೆ ಬಣ್ಣ ಬಣ್ಣದ ನಿಮ್ಮ ವ್ಯಕ್ತಿತ್ವವನ್ನು ಅರಿಯಿರಿ!

ಕಪ್ಪು ಬಣ್ಣವನ್ನು ಇಷ್ಟಪಡುವ ಜನರು ಪ್ರತಿಷ್ಠೆ ಮತ್ತು ಅಧಿಕಾರವನ್ನು ಬಯಸುತ್ತಾರೆ. ಅವರು ಬಲವಾದ ಇಚ್ಛಾಶಕ್ತಿಯುಳ್ಳವರು. ಈ ಜನರು ತಮ್ಮ ಕೀಳರಿಮೆಯನ್ನು ಇತರರಿಗೆ ಹೇಳುವುದಿಲ್ಲ.

Personality Test: ಬಣ್ಣದ ಆಧಾರದ ಮೇಲೆ ಬಣ್ಣ ಬಣ್ಣದ ನಿಮ್ಮ ವ್ಯಕ್ತಿತ್ವವನ್ನು ಅರಿಯಿರಿ!
ಬಣ್ಣದ ಆಧಾರದ ಮೇಲೆ ಬಣ್ಣದ ಬಣ್ಣದ ನಿಮ್ಮ ವ್ಯಕ್ತಿತ್ವವನ್ನು ಅರಿಯಿರಿ!
Follow us
ಸಾಧು ಶ್ರೀನಾಥ್​
|

Updated on: Jul 29, 2023 | 7:03 PM

ಒಬ್ಬೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಒಂದೊಂದು ಬಣ್ಣವನ್ನು (Color) ನೋಡಿದಾಗ ಒಂದೊಂದು ರೀತಿಯ ಭಾವನೆ ಮೂಡುತ್ತದೆ. ಅದಲ್ಲದೆ, ನಾವು ಇಷ್ಟಪಡುವ ಬಣ್ಣವು ನಾವು ಯಾರೆಂದು ಹೇಳುತ್ತದೆ ಎಂದು ಸಂಶೋಧನೆ ತೋರಿಸಿದೆ. ಆದರೆ ಯಾವ ಬಣ್ಣ ಯಾರಿಗೆ ಇಷ್ಟವೋ, ಯಾವ ಸ್ವಭಾವವೋ ಮತ್ತು ನಿಮ್ಮ ನೆಚ್ಚಿನ ಬಣ್ಣ ಯಾವುದು ಎಂದು ನೋಡುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಪರಿಶೀಲಿಸಿ (Personality Test). ಬಣ್ಣಾ ನನ್ನ ಒಲವಿನ ಬಣ್ಣ!?

ಕೆಂಪು: ಕೆಂಪು ಬಣ್ಣವನ್ನು ಇಷ್ಟಪಡುವ ಜನರು ಯಾವಾಗಲೂ ಆಳವಾದ ಜ್ಞಾನವನ್ನು ಪಡೆಯಲು ಬಯಸುತ್ತಾರೆ. ಈ ಬಣ್ಣವನ್ನು ಇಷ್ಟಪಡುವವರು ಸ್ವಲ್ಪ ಅಹಂಕಾರಿಗಳು. ಆದರೆ ಈ ರೀತಿಯ ಜನರಿಗೆ ಸ್ವಲ್ಪ ಹಠ ಜಾಸ್ತಿ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಶಕ್ತಿ ಅವರಲ್ಲಿರುತ್ತದೆ.

ನೀಲಿ: ನೀಲಿ ಬಣ್ಣದ ಪ್ರಿಯರು ಆಳವಾದ ಚಿಂತಕರು. ಅಲ್ಲದೆ, ಅವರು ಅನೇಕ ವಿಷಯಗಳಲ್ಲಿ ಪ್ರವೀಣರು. ಅಲ್ಲದೆ ಅವರು ಆತುರಪಡುವುದಿಲ್ಲ. ಕೆಲಸ ಮಾಡಲು ಬೇಕಾದ ಸಮಯವನ್ನು ಮಾತ್ರ ತೆಗೆದುಕೊಳ್ಳುತ್ತದೆ. ಈ ಬಣ್ಣದ ಪ್ರೇಮಿಗಳು ಸತ್ಯವನ್ನು ಹೇಳಲು ಒಲವು ತೋರುತ್ತಾರೆ.

ಹಳದಿ: ಈ ಬಣ್ಣವನ್ನು ಇಷ್ಟಪಡುವವರು ತಮ್ಮ ವೈಯಕ್ತಿಕ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಅಲ್ಲದೆ ಅವರಲ್ಲಿ ಆತ್ಮವಿಶ್ವಾಸ, ಉತ್ಸಾಹ ಹೆಚ್ಚಾಗಿರುತ್ತದೆ. ಅವರು ಚಿಂತಕರು. ಅವರು ಆಲೋಚನೆಗಳನ್ನು ನಿಗ್ರಹಿಸಲು ಬಯಸುವುದಿಲ್ಲ.

ಕಪ್ಪು: ಕಪ್ಪು ಬಣ್ಣವನ್ನು ಇಷ್ಟಪಡುವ ಜನರು ಪ್ರತಿಷ್ಠೆ ಮತ್ತು ಅಧಿಕಾರವನ್ನು ಬಯಸುತ್ತಾರೆ. ಅವರು ಬಲವಾದ ಇಚ್ಛಾಶಕ್ತಿಯುಳ್ಳವರು. ಈ ಜನರು ತಮ್ಮ ಕೀಳರಿಮೆಯನ್ನು ಇತರರಿಗೆ ಹೇಳುವುದಿಲ್ಲ. ಇತರರ ಮುಂದೆ ತಾವು ಕೀಳು ಎಂಬಂತೆ ನಡೆದುಕೊಳ್ಳುವುದೂ ಇಲ್ಲ.

ಹಸಿರು: ಹಸಿರು ಬಣ್ಣವನ್ನು ಇಷ್ಟಪಡುವ ಜನರು ಯಾವಾಗಲೂ ಶಾಂತವಾಗಿ, ಪ್ರಸನ್ನವದನರಾಗಿ, ಪ್ರಶಾಂತರಾಗಿ ಮತ್ತು ತಾಳ್ಮೆಯಿಂದಿರುತ್ತಾರೆ. ಹಸಿರು ಪ್ರೇಮಿಗಳು ಯಾವಾಗಲೂ ಉತ್ತಮ ವ್ಯಕ್ತಿಗಳು.

ಬಿಳಿ: ಈ ಬಣ್ಣವನ್ನು ಇಷ್ಟಪಡುವವರು ಶಾಂತವಾಗಿರುತ್ತಾರೆ. ಸರಳತೆ ಮತ್ತು ಶಾಂತತೆಯನ್ನು ವ್ಯಕ್ತಪಡಿಸುತ್ತಾರೆ. ಈ ಬಣ್ಣದ ಪ್ರೇಮಿಗಳು ಯಾವಾಗಲೂ ಶಾಂತ ಮತ್ತು ಸಮತೋಲಿತರಾಗಿದ್ದಾರೆ. ಆತ್ಮ ವಿಶ್ವಾಸದೊಂದಿಗೆ ಅವರು ದೃಢವಾಗಿ ಮತ್ತು ಬುದ್ಧಿವಂತಿಕೆಯಿಂದ ವರ್ತಿಸುತ್ತಾರೆ.