Blackheads: ಕಿವಿಗಳಲ್ಲಿರುವ ಬ್ಲ್ಯಾಕ್ ಹೆಡ್ ನಿವಾರಣೆ ಮಾಡಲು ಇಲ್ಲಿವೆ ಸರಳ ಸಲಹೆಗಳು!
ಕಿವಿಗಳಲ್ಲಿರುವ ಬ್ಲ್ಯಾಕ್ ಹೆಡ್ ತೆಗೆಯುವುದು ಸುಲಭವಲ್ಲ. ಹಾಗಾಗಿ ಅದನ್ನು ನಿವಾರಣೆ ಮಾಡಲು ಸರಿಯಾದ ಮಾರ್ಗಗಳು ಮತ್ತು ಕೆಲವು ಸಲಹೆಗಳ ಬಗ್ಗೆ ತಿಳಿದುಕೊಂಡು, ಆದಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಕಿವಿಗಳು ಸೇರಿದಂತೆ ನಿಮ್ಮ ಮುಖ ಮತ್ತು ದೇಹದ ವಿವಿಧ ಭಾಗಗಳಲ್ಲಿ ನೀವು ಬ್ಲ್ಯಾಕ್ ಹೆಡ್ ಅಥವಾ ಕಪ್ಪು ಚುಕ್ಕೆಗಳ ರೀತಿಯಲ್ಲಿ ಕಂಡು ಬರುತ್ತದೆ. ಜೊತೆಗೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಕಿವಿಗಳಲ್ಲಿರುವ ಬ್ಲ್ಯಾಕ್ ಹೆಡ್ ನಿವಾರಣೆ ಮಾಡುವುದು ಸುಲಭವಲ್ಲ. ಏಕೆಂದರೆ ಕಿವಿಯು ಸೂಕ್ಷ್ಮ ಆಂತರಿಕ ರಚನೆಗಳಲ್ಲಿ ಇದು ಒಂದಾಗಿರುವುದರಿಂದ, ಬ್ಲ್ಯಾಕ್ಹೆಡ್ಗಳನ್ನು ನಿವಾರಣೆ ಮಾಡಲು ಸರಿಯಾದ ಮಾರ್ಗಗಳು ಮತ್ತು ಕೆಲವು ಸಲಹೆಗಳ ಬಗ್ಗೆ ತಿಳಿದುಕೊಂಡು, ಆದಷ್ಟು ಎಚ್ಚರಿಕೆ ವಹಿಸಬೇಕಾಗಿದೆ. ಬ್ಲ್ಯಾಕ್ಹೆಡ್ಸ್ ದೇಹದ ಎಲ್ಲಿಯಾದರೂ ರೂಪುಗೊಳ್ಳಬಹುದು, ವಿಶೇಷವಾಗಿ ನೀವು ಎಣ್ಣೆಯುಕ್ತ ಚರ್ಮದವರಾಗಿದ್ದರೆ ಅವು ಸಾಮಾನ್ಯ. ಹೆಚ್ಚಾಗಿ ಮೂಗು ಮತ್ತು ಹಣೆಯ ಮೇಲೆ ಕಂಡುಬರುತ್ತವೆ. ಜೊತೆಗೆ ನಿಮ್ಮ ಕಿವಿಗಳು ಇದಕ್ಕೆ ಹೊರತಾಗಿಲ್ಲ.
ಕಿವಿಯಲ್ಲಿ ಬ್ಲ್ಯಾಕ್ ಹೆಡ್ ಏಕೆ ಹುಟ್ಟುತ್ತದೆ?
ಚರ್ಮರೋಗ ತಜ್ಞ ಡಾ. ರಾಬಿನ್ ಇವಾನ್ಸ್ ಅವರ ಪ್ರಕಾರ, ಮೊಡವೆ ಹೆಚ್ಚಾಗಿ ಕಂಡು ಬರುವ ಚರ್ಮದವರಲ್ಲಿ, ಬ್ಲ್ಯಾಕ್ಹೆಡ್ಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಮುಖದ ಇತರ ಭಾಗಗಳಲ್ಲಿ ಬ್ಲ್ಯಾಕ್ ಹೆಡ್ ಗಳನ್ನು ಹೊಂದಿರುವವರಲ್ಲಿ ಇದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ. ಆನುವಂಶಿಕ ಅಂಶಗಳು, ಹಾರ್ಮೋನು ಏರಿಳಿತಗಳು ಮತ್ತು ಒತ್ತಡವು ಇದಕ್ಕೆ ಕಾರಣ ಎಂಬುದು ಮೇಲು ನೋಟಕ್ಕೆ ಕಂಡು ಬಂದರೂ ಇದನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.
ನಿಮ್ಮ ಮುಖದಿಂದ ಬ್ಲ್ಯಾಕ್ ಹೆಡ್ ಗಳನ್ನು ಹೇಗೆ ತೆಗೆದುಹಾಕುವುದು ಎಂದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರಬಹುದು. ಆದರೆ, ನಿಮ್ಮ ಕಿವಿಗಳಲ್ಲಿರುವ ಬ್ಲ್ಯಾಕ್ ಹೆಡ್ ನಿವಾರಣೆ ತಿಳಿದಿದೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ.
1. ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಿ:
ಕೊಳೆ, ಹೆಚ್ಚುವರಿ ಎಣ್ಣೆ ಮತ್ತು ಇತರ ಕಲ್ಮಶಗಳನ್ನು ತೆಗೆದು ಹಾಕಲು ನಿಮ್ಮ ಕಿವಿಗಳನ್ನು ಪ್ರತಿದಿನ ತೊಳೆಯಿರಿ. ನಿಮಗೆ ಬೇಕಾದಲ್ಲಿ ಕ್ಲೆನ್ಸರ್ ಬಳಸಬಹುದು. ಅದರಲ್ಲಿ ನೆನೆಸಿದ ಹತ್ತಿ ಉಂಡೆಯಿಂದ ನಿಮ್ಮ ಕಿವಿಗಳನ್ನು ಉಜ್ಜಿಕೊಳ್ಳಿ. ಬಳಿಕ ಸ್ವಚ್ಛವಾದ ಹತ್ತಿ ಉಂಡೆಯಿಂದ ಅದನ್ನು ಮತ್ತೆ ಒರೆಸಿ, ಕಿವಿಗಳನ್ನು ತೊಳೆದುಕೊಳ್ಳಿ.
2. ನಿಮ್ಮ ಕಿವಿಗಳನ್ನು ಎಕ್ಸ್ಫೋಲಿಯೇಟ್ ಮಾಡಿ:
ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಎಕ್ಸ್ಫೋಲಿಯೇಷನ್ ನಿಮಗೆ ಸಹಾಯ ಮಾಡುತ್ತದೆ. ಸ್ಯಾಲಿಸಿಲಿಕ್ ಆಮ್ಲ, ಗ್ಲೈಕೋಲಿಕ್ ಆಮ್ಲ, ಅಥವಾ ಆಲ್ಫಾ ಹೈಡ್ರಾಕ್ಸಿ ಆಮ್ಲಗಳನ್ನು ಹೊಂದಿರುವ ಎಕ್ಸ್ಫೋಲಿಯೇಟರ್ಗಳು ಮೊಡವೆ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಾಮಕಾರಿಯಾಗಿವೆ. ನಿಮ್ಮ ಬೆರಳಿಗೆ ಸ್ವಲ್ಪ ಎಕ್ಸ್ಫೋಲಿಯಂಟ್ ತೆಗೆದುಕೊಂಡು ಅದನ್ನು ನಿಮ್ಮ ಕಿವಿಯಲ್ಲಿರುವ ಬ್ಲ್ಯಾಕ್ಹೆಡ್ಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. 2 ರಿಂದ 3 ನಿಮಿಷಗಳ ಕಾಲ ಹಾಗೇ ಬಿಡಿ. ಸ್ವಚ್ಛವಾದ ಹತ್ತಿ ಉಂಡೆ ಅಥವಾ ಮೃದುವಾದ ಬಟ್ಟೆಯಿಂದ ಅದನ್ನು ಒರೆಸಿ. ವಾರಕ್ಕೊಮ್ಮೆ ನಿಮ್ಮ ಕಿವಿಗಳನ್ನು ಎಕ್ಸ್ ಫೋಲಿಯೇಟ್ ಮಾಡಿ. ಆದರೆ ಅತಿಯಾದ ಕಿವಿ ಎಕ್ಸ್ ಫೋಲಿಯೇಷನ್ ಮಾಡುವುದರಿಂದ ಕೆಂಪು ಮತ್ತು ತುರಿಕೆಗೆ ಕಾರಣವಾಗಬಹುದು.
3. ಮೊಡವೆಗೆ ಬಳಸಬಹುದಾದ ಔಷಧಗಳನ್ನು ಬಳಸಿ:
ಬ್ಲ್ಯಾಕ್ ಹೆಡ್ ನಿವಾರಣೆಗೆ ಮೊಡವೆಗಳಿಗೆ ಬಳಸುವ ಔಷಧಿಗಳು ಅಥವಾ ರೆಟಿನಾಯ್ಡ್ಗಳು ಮತ್ತು ಅಡಾಪಲೀನ್ ನಂತಹ ಸಮಕಾಲೀನ ಔಷಧಿಗಳನ್ನು ಬಳಸಿ. ರಾತ್ರಿಯಿಡೀ ನಿಮ್ಮ ಕಿವಿಗಳಲ್ಲಿನ ಬ್ಲ್ಯಾಕ್ಹೆಡ್ಗಳನ್ನು ನಿವಾರಣೆ ಮಾಡಲು ನೀವು ಓವರ್- ದಿ- ಕೌಂಟರ್ ಔಷಧಿಗಳನ್ನು ಸಹ ಬಳಸಬಹುದು. ಸ್ಯಾಲಿಸಿಲಿಕ್ ಆಮ್ಲ, ಗ್ಲೈಕೋಲಿಕ್ ಆಮ್ಲ ಅಥವಾ ಆಲ್ಫಾ ಹೈಡ್ರಾಕ್ಸಿ ಆಮ್ಲಗಳಂತಹ ಪದಾರ್ಥಗಳನ್ನು ಹೊಂದಿರುವ ಔಷಧಿಗಳು ರಂಧ್ರಗಳನ್ನು ಮುಚ್ಚಲು ಮತ್ತು ಬ್ಲ್ಯಾಕ್ಹೆಡ್ಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ನೀವು ಯಾವುದೇ ಚರ್ಮದ ಸಮಸ್ಯೆಗಳನ್ನು ಹೊಂದಿದ್ದರೆ, ಇಂತಹ ಮೊಡವೆ ಔಷಧಿಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೊತೆಗೆ ಮತ್ತೊಂದು ವಿಧಾನವೆಂದರೆ ಹಸ್ತಚಾಲಿತ ಎಂಬ ಪ್ರಕ್ರಿಯೆ, ಇದನ್ನು ನೀವು ಮನೆಯಲ್ಲಿಯೇ ಮಾಡುವುದು ಕಷ್ಟ. ಅದರ ಬದಲು ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ.
4. ಬ್ಲ್ಯಾಕ್ಹೆಡ್ಗಳನ್ನು ಹೊರತೆಗೆಯಿರಿ:
ಮೇಲಿನ ಯಾವ ವಿಧಾನಗಳು ಕೆಲಸ ಮಾಡದಿದ್ದರೆ ಹಸ್ತಚಾಲಿತ ಎಂಬ ಪ್ರಕ್ರಿಯೆಯಿಂದ ಬ್ಲ್ಯಾಕ್ಹೆಡ್ಗಳನ್ನು ತೆಗೆದು ಹಾಕುವಲ್ಲಿ ನಿಮಗೆ ಸಹಕಾರಿಯಾಗಲಿದೆ. ಇದೊಂದು ಉತ್ತಮ ಆಯ್ಕೆಯಾಗಿದೆ. ಆದರೆ ಇದನ್ನು ನೀವೇ ಮನೆಯಲ್ಲಿ ಮಾಡುವುದು ತುಂಬಾ ಕಷ್ಟ. ಡಾ. ಇವಾನ್ಸ್ ಹೇಳುವ ಪ್ರಕಾರ, ಅನುಭವಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ ಈ ಬಗ್ಗೆ ಸಲಹೆ ಪಡೆದುಕೊಳ್ಳುವುದು ಉತ್ತಮ. ಚರ್ಮದ ಮೇಲೆ ಎಷ್ಟು ಒತ್ತಡ ನೀಡಬೇಕು, ಯಾವ ಕೋನದಲ್ಲಿ ಅದನ್ನು ತೆಗೆಯ ಬೇಕು ಎಂಬ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವೃತ್ತಿಪರರು ತಿಳಿದಿರುತ್ತಾರೆ. ಹಾಗಾಗಿ ನುರಿತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: