Personality Test: ಎಲೆ, ತುಟಿ; ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ನಿಗೂಢ ಸ್ವಭಾವವನ್ನು ಬಹಿರಂಗ ಪಡಿಸುತ್ತೆ

ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ಗಳಿಗೆ ಸಂಬಂಧಿಸಿದ ಫೋಟೋಗಳು ಹರಿದಾಡುತ್ತಿರುತ್ತವೆ. ಅವುಗಳ ಮೂಲಕ ನೀವು ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ತುಟಿ ಅಥವಾ ಎಲೆ ಆ ಚಿತ್ರದಲ್ಲಿ ನೀವು ಮೊದಲು ಗಮನಿಸುವ ಅಂಶದ ಆಧಾರದ ಮೇಲೆ ನೀವು ಹಠಮಾರಿ ಸ್ವಭಾವದವರೇ ಅಥವಾ ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

Personality Test: ಎಲೆ, ತುಟಿ; ಈ ಚಿತ್ರದಲ್ಲಿ ನೀವು ಗಮನಿಸುವ ಮೊದಲ ಅಂಶ ನಿಮ್ಮ ನಿಗೂಢ ಸ್ವಭಾವವನ್ನು ಬಹಿರಂಗ ಪಡಿಸುತ್ತೆ
ವ್ಯಕ್ತಿತ್ವ ಪರೀಕ್ಷೆ
Image Credit source: Google

Updated on: Jun 12, 2025 | 4:59 PM

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ನಡವಳಿಕೆ, ಆತನ ರೀತಿ-ನೀತಿಯ ಮೂಲಕ ಆತನ ಗುಣ ಸ್ವಭಾವ, ವ್ಯಕ್ತಿತ್ವವನ್ನು (Personality) ಜನ ಅಳೆಯುತ್ತಾರೆ. ಇದೊಂದು ಕಡೆಯಾದರೆ, ಇನ್ನೊಂದೆಡೆ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷಿಸಿಕೊಳ್ಳಬಹುದು. ಅದರಲ್ಲಿ ಆಪ್ಟಿಕಲ್‌ ಚಿತ್ರವೂ (Optical illusion) ಒಂದು. ಕಣ್ಣಿಗೆ ಭ್ರಮೆ ಉಂಟು ಮಾಡುವ ಈ ಚಿತ್ರವು ಮೆದುಳಿಗೆ ಕೆಲಸವನ್ನು ನೀಡುವುದರ ಜೊತೆಗೆ ನಮ್ಮೊಳಗಿನ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಕೂಡ ತಿಳಿಸುತ್ತದೆ. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹದ್ದೇ ಫೋಟೋವೊಂದು ಇದೀಗ ವೈರಲ್‌ ಆಗಿದ್ದು, ತುಟಿ ಮತ್ತು ಎಲೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನೀವು ಹಠಮಾರಿ ಸ್ವಭಾವದವರೇ ಅಥವಾ ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಫೋಟೋದಲ್ಲಿ ತುಟಿ ಹಾಗೂ ಎಲೆ ಈ ಎರಡು ಅಂಶಗಳು ಅಡಗಿದ್ದು, ಇದರಲ್ಲಿ ನಿಮಗೆ ಯಾವ ಅಂಶ ಮೊದಲಿಗೆ ಕಾಣಿಸಿತು ಎಂಬುದರ ಮೇಲೆ ನೀವು ಹಠಮಾರಿ ಸ್ವಭಾವದವರೇ ಎಂಬುದನ್ನು ಪರೀಕ್ಷಿಸಿ.

ನೀವು ಮೊದಲು ಎಲೆಯನ್ನು ನೋಡಿದರೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಮೊದಲು ಎಲೆಯನ್ನು ನೋಡಿದರೆ ನೀವು ಹಠಮಾರಿ ಸ್ವಭಾವದವರೆಂದು ಅರ್ಥ. ನೀವು ಒಮ್ಮೆ ಏನನ್ನಾದರೂ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದರೆ, ಅದನ್ನು ಮಾಡಿಯೇ ತೀರುತ್ತೀರಿ. ಜೊತೆಗೆ ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ. ಅಷ್ಟು ಆಕರ್ಷಕ ವ್ಯಕ್ತಿತ್ವ ನಿಮ್ಮದು. ಇನ್ನೊಂದೇನೆಂದರೆ  ನೀವು ಎಷ್ಟೇ ಸ್ನೇಹಪರವಾಗಿದ್ದರೂ, ನಂಬಿಕೆಯ ವಿಚಾರದಲ್ಲಿ ನಿಮ್ಮ ಮನದಲ್ಲಿ ಹಲವು ಗೊಂದಲಗಳಿವೆ. ಈ ಮೊದಲು ನಂಬಿಕೆ ದ್ರೋಹದಿಂದ ನೋವುಂಡ ಕಾರಣ ನೀವು ಎಲ್ಲರನ್ನು ಅಷ್ಟು ಬೇಗ ನಂಬಲು ಹೋಗುವುದಿಲ್ಲ.

ಇದನ್ನೂ ಓದಿ
ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ಪರೀಕ್ಷಿಸಿ
ನೀವು ಹುಟ್ಟಿದ ತಿಂಗಳೇ ತಿಳಿಸುತ್ತೆ ನಿಮ್ಮ ಅದೃಷ್ಟದ ಬಣ್ಣ ಯಾವುದೆಂದು
ಈ ಚಿತ್ರದ ಮೂಲಕ ನೀವು ಯಾವ ರೀತಿಯ ವ್ಯಕ್ತಿ ಎಂಬುದನ್ನು ಕಂಡುಕೊಳ್ಳಿ
ನಿಮ್ಮ ಸ್ವಭಾವ ಹೇಗಿದೆಯೆಂದು ಹೇಳುತ್ತೆ ಈ ಚಿತ್ರ

ಇದನ್ನೂ ಓದಿ: ನೀವು ಆಶಾವಾದಿಯೇ ಎಂಬುದನ್ನು ತಿಳಿಸುತ್ತೆ ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ

ನೀವು ಮೊದಲು ತುಟಿಯನ್ನು ನೋಡಿದರೆ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ತುಟಿ ಕಾಣಿಸಿದರೆ ನೀವು ಸೂಕ್ಷ್ಮ ಮತ್ತು ಭಾವನಾತ್ಮಕ ವ್ಯಕ್ತಿಯೆಂದು ಅರ್ಥ. ಕ್ಷಮಾ ಗುಣವನ್ನು ಹೊಂದಿರುವ ನೀವು ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರಬೇಕು ಎನ್ನುವ ಸ್ವಭಾವವನ್ನು ಹೊಂದಿದವರಾಗಿದ್ದೀರಿ. ನೀವು ಎಲ್ಲವನ್ನು ಸಹಿಸುತ್ತೀರಿ ಆದರೆ ಬೆನ್ನ ಹಿಂದೆ ಮಾತನಾಡುವ ಸ್ವಭಾವನ್ನು ಹೊಂದಿರುವ ಜನರನ್ನು ಮಾತ್ರ ದ್ವೇಷಿಸುತ್ತೀರಿ. ಎರಡು ಮುಖದ ಜನರೆಂದರೆ ನಿಮಗೆ ಇಷ್ಟವಾಗುವುದಿಲ್ಲ.

ಈ ನಿರ್ದಿಷ್ಟ ವ್ಯಕ್ತಿತ್ವ ಪರೀಕ್ಷೆಯ ಫಲಿತಾಂಶ ನಿಮ್ಮ ವ್ಯಕ್ತಿತ್ವಕ್ಕೆ ಹೊಂದಿಕೆಯಾಗಿದ್ದರೆ, ಇದನ್ನು ಫ್ರೆಂಡ್ಸ್‌ ಜೊತೆಗೂ ಶೇರ್‌ ಮಾಡಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ