
ಜನರು ಸಾಮಾನ್ಯವಾಗಿ ನಾವು ನಡೆದುಕೊಳ್ಳುವ ರೀತಿ, ನಮ್ಮ ಮಾತುಗಾರಿಕೆ, ನಡವಳಿಕೆಯ ಮೂಲಕ ನಮ್ಮ ವ್ಯಕ್ತಿತ್ವ (Personality) ಹೇಗಿದೆಯೆಂದು ಅಳೆಯುತ್ತಾರೆ. ಇತರರು ನಮ್ಮ ವ್ಯಕ್ತಿತ್ವವನ್ನು ಅಳೆಯುವಂತೆ, ನಮ್ಮೊಳಗಿನ ನಿಗೂಢ ಗುಣ ಸ್ವಭಾವವನ್ನು ನಾವೇ ತಿಳಿಯಬಹುದು. ಹೌದು ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ನಮ್ಮ ಸ್ವಭಾವ ಹೇಗಿದೆ, ಕೋಷಿಷ್ಠರೇ, ತಾಳ್ಮೆಯನ್ನು ಹೊಂದಿರುವವರೇ, ದಯಾಳು ಗುಣದವರೇ ಹೀಗೆ ನಮ್ಮೊಳಗೆ ಅಡಗಿರುವ ನಿಗೂಢ ಗುಣ ಸ್ವಭಾವವನ್ನು ನಾವೇ ಅಳೆಯಬಹುದು. ವ್ಯಕ್ತಿತ್ವ ಪರೀಕ್ಷೆಯ ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸಿತು ಎಂಬ ಆಧಾರದ ಮೇಲೆ ನೀವು ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ನೀವು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವವರೇ ಎಂಬುದನ್ನು ಪರೀಕ್ಷಿಸಿ.
ಈ ನಿರ್ದಿಷ್ಟ ವ್ಯಕ್ತಿತ್ವ ಪರೀಕ್ಷೆಯ ಚಿತ್ರದಲ್ಲಿ ಚಂದ್ರ, ದಂಪತಿ ಮತ್ತು ತಲೆ ಬುರುಡೆ ಈ ಮೂರು ಅಂಶಗಳಿದ್ದು, ಇದರಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನೀವು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದನ್ನು ಪರೀಕ್ಷಿಸಿ.
ಮೊದಲು ದಂಪತಿಯನ್ನು ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ದಂಪತಿಯನ್ನು ನೋಡಿದರೆ ನೀವು ತೆಗೆದುಕೊಳ್ಳುವ ನಿರ್ಧಾರವು ನಿಮ್ಮ ಸಂಬಂಧ, ಭಾವನೆಗಳು ಮತ್ತು ಸಾಮಾಜಿಕ ಚಲನಶೀಲತೆಯಿಂದ ಪ್ರಭಾವಿತವಾಗಿರುತ್ತದೆ ಎಂದರ್ಥ. ನೀವು ಪರಸ್ಪರ ಸಾರರಸ್ಯವನ್ನು ಗೌರವಿಸುವವರಾಗಿರುತ್ತೀರಿ. ನೀವು ನಿಮ್ಮ ಸುತ್ತಮುತ್ತಲಿನವರ ಭಾವನೆಗಳಿಗೆ ಆದ್ಯತೆ ನೀಡುತ್ತೀರಿ. ಈ ಸಹಾನುಭೂತಿಯ ಗುಣವು ಬಲವಾದ ಸಾಮಾಜಿಕ ಸಂಬಂಧವನ್ನು ಬೆಸೆಯಲು ಸಹಕಾರಿಯಾಗಿದೆ. ನೀವು ಯಾವುದೇ ಸಂದರ್ಭದಲ್ಲಿಯೂ ಸಂಘರ್ಷಗಳನ್ನು ತಪ್ಪಿಸಲು ಇಷ್ಟಪಡುತ್ತೀರಿ. ನೀವು ನಿಮ್ಮ ವೈಯಕ್ತಿಕ ಗುರಿಗಳನ್ನು ಸಾಧಿಸುವುದಕ್ಕಿಂತ ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷದಿಂದಿಡಲು ಬಯಸುವವರಾಗಿರುತ್ತೀರಿ.
ಮೊದಲು ತಲೆ ಬುರುಡೆ ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ತಲೆ ಬುರುಡೆಯನ್ನು ನೋಡಿದರೆ ನೀವು ಸಂಭಾವ್ಯ ಬೆದರಿಕೆಗಳು ಅಥವಾ ನಕಾರಾತ್ಮಕ ಫಲಿತಾಂಶಗಳಿಗೆ ಹೆಚ್ಚು ಆದ್ಯತೆ ನೀಡುವ ಪ್ರವೃತ್ತಿಯನ್ನು ಹೊಂದಿದ್ದೀರಿ ಎಂದು ಅರ್ಥ. ಇದು ಅತಿಯಾದ ಎಚ್ಚರಿಕೆ ಮತ್ತು ನಿರಾಶಾವಾದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಕೆಲವೊಮ್ಮೆ ನೀವು ಕಳಪೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದ ಮೂಲಕ ನೀವು ಭಾವನೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ಪರೀಕ್ಷಿಸಿ
ಮೊದಲು ಚಂದ್ರನನ್ನು ನೋಡಿದರೆ: ಈ ಚಿತ್ರದಲ್ಲಿ ನಿಮಗೆ ಮೊದಲು ಚಂದ್ರ ಕಂಡರೆ, ನೀವು ಸ್ವಾಭಾವಿಕವಾಗಿ ಆಶಾವಾದಿ ದೃಷ್ಟಿಕೋನವನ್ನು ಹೊಂದಿರುವವರು ಎಂಬುದನ್ನು ಸೂಚಿಸುತ್ತದೆ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಕಾರಾತ್ಮಕ ಅಂಶಗಳನ್ನು ಎತ್ತಿ ಹಿಡಿಯುತ್ತೀರಿ. ಈ ಪ್ರಕಾಶಮಾನವಾದ ದೃಷ್ಟಿಕೋನವು ಮಹಾತ್ವಾಕಾಂಕ್ಷೆ ಮತ್ತು ಸೃಜನಶೀಲ ಚಿಂತನೆಯನ್ನು ಉತ್ತೇಜಿಸುತ್ತದೆ. ಆದರೆ ಇದು ಸವಾಲುಗಳು ಕ್ಷುಲ್ಲಕ ಎಂದು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೀವು ಉತ್ಸಾಹದಿಂದ ತೆಗೆದುಕೊಳ್ಳುವ ನಿರ್ಧಾರಗಳು ಮುಂಬರುವ ಅಪಾಯಗಳನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Mon, 16 June 25