Personality Test : ನೀವು ಕೈ ಕಟ್ಟಿ ನಿಲ್ಲುವ ಭಂಗಿ ಹೇಳುತ್ತೆ ನಿಮ್ಮ ವ್ಯಕ್ತಿತ್ವ ರಹಸ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 06, 2025 | 3:21 PM

ಒಬ್ಬರ ಗುಣ ಸ್ವಭಾವ ಹಾಗೂ ವ್ಯಕ್ತಿತ್ವವು ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಆದರೆ ನಾವು ಹೇಗೆ ಕುಳಿತುಕೊಳ್ಳುತ್ತೇವೆ, ಹೇಗೆ ನಡೆಯುತ್ತೇವೆ, ಮಾತನಾಡುತ್ತೇವೆ, ತಿನ್ನುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಆದರೆ, ಸಂಭಾಷಣೆಯ ವೇಳೆ ಕೈಗಳನ್ನು ಹೇಗೆ ಹಿಡಿದುಕೊಳ್ಳುವಿರಿ ಎಂಬುದು ವ್ಯಕ್ತಿತ್ವ ರಿವೀಲ್ ಮಾಡುತ್ತೆ. ಹಾಗಾದ್ರೆ ಕೈ ಕಟ್ಟಿಕೊಳ್ಳುವ ನಿಲ್ಲುವ ಭಂಗಿಯು ರಿವೀಲ್ ಮಾಡುವ ವ್ಯಕ್ತಿತ್ವದ ಕುರಿತಾದ ಮಾಹಿತಿ ಮಾಹಿತಿ ಇಲ್ಲಿದೆ.

Personality Test : ನೀವು ಕೈ ಕಟ್ಟಿ ನಿಲ್ಲುವ ಭಂಗಿ ಹೇಳುತ್ತೆ ನಿಮ್ಮ ವ್ಯಕ್ತಿತ್ವ ರಹಸ್ಯ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ನಿಲ್ಲುವುದು, ಕುಳಿತುಕೊಳ್ಳುವುದು ಹಾಗೂ ನಡೆಯುವ ಭಂಗಿಯು ರಹಸ್ಯಮಯ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತೆ ಎನ್ನುವುದು ತಿಳಿದಿರುವ ವಿಚಾರ. ಆದರೆ ಯಾವ ರೀತಿ ಕೈ ಕಟ್ಟಿ ನಿಲ್ಲುತ್ತೀರಿ ಎನ್ನುವುದರ ಮೇಲೆ ರಹಸ್ಯಮಯ ವ್ಯಕ್ತಿತ್ವವನ್ನು ತಿಳಿಯಬಹುದು. ಸಂಭಾಷಣೆಯ ವೇಳೆ ಕೆಲವರಿಗೆ ಕೈ ಕಟ್ಟಿ ನಿಲ್ಲುವ ಅಭ್ಯಾಸವಿರುತ್ತದೆ. ಆದರೆ ನೀವು ಯಾವ ರೀತಿ ಕೈ ಕಟ್ಟಿ ನಿಲ್ಲುವಿರಿ ಎನ್ನುವುದು ನಿಮ್ಮ ನಿಜವಾದ ವ್ಯಕ್ತಿತ್ವ ರಿವೀಲ್ ಮಾಡುತ್ತೆ. ಹಾಗಾದ್ರೆ ನಿಮ್ಮ ನಿಗೂಢ ವ್ಯಕ್ತಿತ್ವವೇನು ಎನ್ನುವುದನ್ನು ತಿಳಿದುಕೊಳ್ಳಿ.

  • ಮೊದಲನೇ ಚಿತ್ರದಲ್ಲಿ ತೋರಿಸಿದಂತೆ ಕಟ್ಟಿ ನಿಂತಾಗ ನಿಮ್ಮ ಬಲಭಾಗದ ತೋಳಿನ ಮೇಲೆ ಎಡಗೈ ಇರಿಸಿದರೆ ಈ ವ್ಯಕ್ತಿಗಳು ತುಂಬಾನೇ ಬುದ್ಧಿವಂತರು. ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಹೀಗಾಗಿ ಈ ವ್ಯಕ್ತಿಗಳಿಗೆ ಭಾವನೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಹೀಗಾಗಿ ಸುತ್ತಲಿನ ಜನರು ಈ ವ್ಯಕ್ತಿಗಳಿಂದಲೇ ಅಧಿಕ ಲಾಭವನ್ನು ಪಡೆದುಕೊಳ್ಳುತ್ತಾರೆ. ಸೃಜನಶೀಲರಾಗಿದ್ದು, ವಿಭಿನ್ನ ರೀತಿಯ ಕೆಲಸವನ್ನು ಆನಂದಿಸುತ್ತಾರೆ. ಈ ವ್ಯಕ್ತಿಗಳು ನೃತ್ಯ, ಚಿತ್ರಕಲೆ, ಹಾಡುಗಾರಿಕೆ ಸೇರಿದಂತೆ ಮುಂತಾದ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈ ರೀತಿ ಕೈ ಕಟ್ಟಿಕೊಳ್ಳುವಾಗ ಬಲ ತೋಳಿನ ಮೇಲೆ ಎಡಗೈ ಇರಿಸುವ ವ್ಯಕ್ತಿಗಳು ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಳ್ಳುತ್ತಾರೆ.
  • ಎರಡನೇ ಚಿತ್ರದಲ್ಲಿ ತೋರಿಸಿರುವಂತೆ ಎಡಭಾಗದ ತೋಳಿನ ಮೇಲೆ ಬಲಗೈ ಇರಿಸಿದರೆ ಅಂತಹ ಜನರು ಸಮತೋಲಿತ ವ್ಯಕ್ತಿಗಳಾಗಿರುತ್ತಾರೆ. ಎಂತಹ ಸಂದರ್ಭದಲ್ಲಿ ತಮ್ಮ ಭಾವನೆಗಳನ್ನು ತೋರ್ಪಡಿಸುವುದಿಲ್ಲ. ಈ ವ್ಯಕ್ತಿಗಳು ತುಂಬಾನೇ ಶ್ರಮಜೀವಿಗಳು. ಜೀವನದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ನಾಯಕತ್ವ ಗುಣವನ್ನು ಹೊಂದಿದ್ದು ಎಲ್ಲಾ ಕೆಲಸವನ್ನು ಚೆನ್ನಾಗಿ ಮಾಡಿ ಮುಗಿಸುತ್ತಾರೆ. ಉತ್ತಮ ವಿವೇಚನಾ ಶಕ್ತಿ ಹೊಂದಿದ್ದು, ತಮ್ಮ ಗುರಿಯತ್ತ ಕೇಂದ್ರೀಕರಿಸುತ್ತಾರೆ. ತಮ್ಮ ಜೀವನವನ್ನು ಯಶಸ್ವಿಯಾಗಿ ನಡೆಸುತ್ತಾರೆ.
  • ಮೂರನೇ ಚಿತ್ರದಲ್ಲಿ ಎರಡೂ ಕೈಗಳು ವಿರುದ್ಧ ತೋಳುಗಳ ಮೇಲೆ ಇರಿಸಿದ್ದರೆ ಈ ವ್ಯಕ್ತಿಗಳ ಮೆದುಳಿನ ತಾರ್ಕಿಕ ಶಕ್ತಿ ಉತ್ತಮವಾಗಿರುತ್ತದೆ. ಈ ಜನರು ಭಾವನಾತ್ಮಕವಾಗಿ ಬಲಶಾಲಿಯಾಗಿರುವುದಿಲ್ಲ. ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಸೃಜನಶೀಲರು, ಚಿಂತನಶೀಲರಾಗಿದ್ದು, ಆತ್ಮವಿಶ್ವಾಸವು ಹೆಚ್ಚು ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ