AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಹಸ್ತದಲ್ಲಿನ ಈ ಚಿಹ್ನೆಗಳೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ

ಪ್ರತಿಯೊಬ್ಬರ ಜೀವನವು ಒಂದೇ ರೀತಿ ಇರುವುದಿಲ್ಲ. ಅದಲ್ಲದೇ ಗುಣಸ್ವಭಾವದಲ್ಲಿ ಸಾಕಷ್ಟು ಭಿನ್ನತೆಯಿರುತ್ತದೆ. ಹೀಗಾಗಿ ನಿಮ್ಮ ಜೊತೆಗೆ ಇರುವ ವ್ಯಕ್ತಿಗಳು ಹೇಗೆ ಎಂದು ತಿಳಿದುಕೊಳ್ಳಬಹುದು. ಆದರೆ ಹಸ್ತದಲ್ಲಿಯೂ ಅರ್ಥವಾಗದ ಹಲವಾರು ಚಿಹ್ನೆಗಳಿದ್ದು, ಅವುಗಳಿಂದಲೂ ಜೀವನಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಿಳಿಯಬಹುದು. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ ಎನ್ನಲಾಗಿದೆ. ಹಾಗಾದ್ರೆ ನಿಮ್ಮ ಹಸ್ತದಲ್ಲಿ ಯಾವೆಲ್ಲಾ ಚಿಹ್ನೆಗಳಿವೆಯೇ ಎಂದು ನೋಡಿ ನಿಮ್ಮ ಗುಣಸ್ವಭಾವವನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಹಸ್ತದಲ್ಲಿನ ಈ ಚಿಹ್ನೆಗಳೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 21, 2025 | 4:36 PM

Share

ಒಬ್ಬ ವ್ಯಕ್ತಿಯ ಕಣ್ಣು, ಮೂಗು, ಕಿವಿ, ಹಣೆ ಹಾಗೂ ಬೆರಳುಗಳ ಆಕಾರದಿಂದ ವ್ಯಕ್ತಿತ್ವವನ್ನು ನಿರ್ಣಯಿಸಬಹುದು. ಅದೇ ರೀತಿ ಮಾನವನ ಶರೀರದ ಮೇಲಿರುವ ಹಲವು ಚಿಹ್ನೆಗಳು ಜೀವನದ ಹಲವು ವಿಷಯಗಳು ಹಾಗೂ ಗುಣಸ್ವಭಾವವನ್ನು ಬಹಿರಂಗ ಪಡಿಸುತ್ತದೆ. ಹೌದು, ಶರೀರದ ಮೇಲಿರುವ ಚಿಹ್ನೆಗಳಿಂದ ವ್ಯಕ್ತಿಯ ಭೂತ, ಭವಿಷ್ಯ ಮತ್ತು ವರ್ತಮಾನದ ಹಲವು ಸಂಗತಿಗಳನ್ನು ಅರಿತುಕೊಳ್ಳಬಹುದಾಗಿದೆ. ಹಾಗಾದ್ರೆ ನಿಮ್ಮ ಹಸ್ತದಲ್ಲಿ ಯಾವ ಚಿಹ್ನೆಗಳಿವೆಯೇ ಎಂದು ಗಮನಿಸಿ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ.

  • ಬೆರಳಿನಲ್ಲಿರುವ ಚಕ್ರ ಚಿಹ್ನೆ : ಕೈ ಬೆರಳುಗಳಲ್ಲಿ ಚಕ್ರ ಆಕಾರದ ಚಿಹ್ನೆಯಿರುವವರು ಜೀವನದಲ್ಲಿ ಎಲ್ಲವನ್ನು ಪಡೆಯುವ ಸಾಮರ್ಥ್ಯವು ಈ ವ್ಯಕ್ತಿಗಳಲ್ಲಿ ಇರುತ್ತದೆ. ಯಾವ ವ್ಯಕ್ತಿಯ ಹತ್ತು ಕೈ ಬೆರಳುಗಳ ತುದಿಯಲ್ಲಿ ಚಕ್ರದ ಚಿಹ್ನೆ ಇರುತ್ತದೆಯೋ ಆ ವ್ಯಕ್ತಿಗಳ ಜೀವನದಲ್ಲಿ ಹಣದ ಸಮಸ್ಯೆಯೂ ಕಾಡುವುದಿಲ್ಲ. ರಾಜರಂತೆ ಬದುಕುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಖ್ಯಾತಿ ಪಡೆಯುತ್ತಾರೆ. ಈ ವ್ಯಕ್ತಿಗಳು ಮನಸ್ಸಲ್ಲಿ ಅಂದುಕೊಂಡ ಕೆಲಸಗಳೆಲ್ಲವೂ ಪೂರ್ಣವಾಗುತ್ತದೆ. ಈ ರೀತಿ ಚಿಹ್ನೆ ಹೊಂದಿದವರು ಬುದ್ಧಿವಂತರು ಮತ್ತು ವಿವೇಕವುಳ್ಳವರಾಗಿದ್ದು, ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ಗುಣ ಇವರಲ್ಲಿ ಅಧಿಕವಾಗಿರುತ್ತದೆ.
  • ಕಮಲದ ಹೂವಿನ ಚಿಹ್ನೆ : ವಿಷ್ಣುವಿನ ಪ್ರಿಯವಾದ ಕಮಲದ ಹೂವಿನ ಚಿಹ್ನೆಯನ್ನು ಹಸ್ತದಲ್ಲಿ ಹೊಂದಿದ್ದರೆ ಆ ವ್ಯಕ್ತಿಗಳು ಅದೃಷ್ಟವಂತರು ಹಾಗೂ ಭಾಗ್ಯಶಾಲಿಗಳಾಗಿರುತ್ತಾರೆ. ಪರಿಶ್ರಮಿಗಳಾಗಿದ್ದು, ಕಷ್ಟ ಪಟ್ಟು ದುಡಿದು ಜೀವನದಲ್ಲಿ ಮುಂದೆ ಬರುತ್ತಾರೆ. ಈ ವ್ಯಕ್ತಿಗಳಿಗೆ ಆರ್ಥಿಕ ಸ್ಥಿತಿ ಚೆನ್ನಾಗಿದ್ದು, ಮನೆ-ಧನ ಸಂಪತ್ತು ಹೇರಳವಾಗಿರುತ್ತದೆ. ಅದಲ್ಲದೇ ಹೆಚ್ಚೆಚ್ಚು ಯಶಸ್ಸು ಹಾಗೂ ಖ್ಯಾತಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಾರೆ.
  • ವಿ ಆಕಾರದ ಚಿಹ್ನೆ : ಯಾರ ಹಸ್ತದಲ್ಲಿ ವಿ ಆಕಾರದ ಚಿಹ್ನೆಯಿರುತ್ತದೆಯೋ ಆ ವ್ಯಕ್ತಿಗಳು ಉತ್ತಮ ಜೀವನವನ್ನು ಹೊಂದಿರುತ್ತಾರೆ. ವಿಷ್ಣುವಿನ ಸಂಕೇತವಾದ ಈ ಚಿಹ್ನೆಯನ್ನು ಹೊಂದಿದ ವ್ಯಕ್ತಿಗಳು ಜೀವನದಲ್ಲಿ ಎಂದೂ ಸೋಲನ್ನು ಅನುಭವಿಸುವುದಿಲ್ಲ. ಪ್ರತಿ ಹೆಜ್ಜೆಯಲ್ಲಿ ಯಶಸ್ಸು ಕಾಣುತ್ತಾರೆ.
  • ಕೈ ಬೆರಳುಗಳ ತುದಿಯಲ್ಲಿ ಶಂಖದ ಚಿಹ್ನೆ : ಕೈ ಬೆರಳುಗಳ ತುದಿಯಲ್ಲಿ ಶಂಖದ ಚಿಹ್ನೆ ಹೊಂದಿದ್ದರೆ ಅಂತಹ ವ್ಯಕ್ತಿಗಳು ಬುದ್ಧಿವಂತರು ಹಾಗೂ ಜ್ಞಾನಿಗಳಾಗಿರುತ್ತಾರೆ. ಜೀವನದಲ್ಲಿ ಅದೃಷ್ಟ, ಧನ-ಧಾನ್ಯ, ಯಶಸ್ಸನ್ನು ಸಲೀಸಾಗಿ ಪಡೆಯುತ್ತಾರೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಇವರಿಗೆ ಸೋಲು ಎನ್ನುವುದು ದೂರದ ಮಾತಾಗಿರುತ್ತದೆ.
  • ಕೈಯಲ್ಲಿ ಮೀನಿನ ಚಿಹ್ನೆ :ಕೈಯಲ್ಲಿ ಮತ್ಸ್ಯದ ಚಿಹ್ನೆ ಹೊಂದಿದ್ದರೆ ಇವರಷ್ಟು ಅದೃಷ್ಟವಂತರು ಯಾರು ಇಲ್ಲ. ಈ ವ್ಯಕ್ತಿಗಳ ಮೇಲೆ ವಿಷ್ಣುವಿನ ಕೃಪೆ ಸದಾ ಇರುತ್ತದೆ. ಇತರರಿಗೆ ಸಹಾಯ ಮಾಡುವ ಗುಣ ಇವರಲ್ಲಿ ಹೆಚ್ಚಿದ್ದು, ಜೀವನದಲ್ಲಿ ಸಫಲತೆಯನ್ನು ಹೊಂದುತ್ತಾರೆ. ಯಾರಿಗೂ ಕೂಡ ಕೇಡು ಬಯಸದೆ ಎಲ್ಲರನ್ನು ಹುರಿದುಂಬಿಸುತ್ತ ತಾವು ಕೂಡ ಮುನ್ನಡೆಯುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ