Personality Test
ಈ ಹೆಸರಿ(Name) ನಲ್ಲಿ ಏನಿದೆ ಎಂದು ಎಲ್ಲರೂ ಅಂದುಕೊಳ್ಳಬಹುದು, ಆದರೆ ಈ ಹೆಸರಿನಿಂದ ನೀವು ಇಂತಹ ವ್ಯಕ್ತಿಯೆಂದು ಗುರುತಿಸಿಕೊಳ್ಳುವುದು. ಹೊಸಬರ ಪರಿಚಯವಾದಾಗ ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವುದೇ ಈ ಹೆಸರಿನಿಂದ. ಹೀಗಾಗಿ ನಿಮ್ಮ ಸುಂದರ ಹೆಸರಿನಿಂದ ನಿಮ್ಮ ವ್ಯಕ್ತಿತ್ವ (Personality) ಹಾಗೂ ನಿಮ್ಮ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಹೌದು, ಒಬ್ಬ ವ್ಯಕ್ತಿಯ ಹೆಸರಿನ ಕೊನೆಯ ಅಕ್ಷರ (Letter) ಆತನ ವ್ಯಕ್ತಿತ್ವವನ್ನು ಹೇಳುತ್ತದೆ. ಆ ವ್ಯಕ್ತಿಯ ಹವ್ಯಾಸಗಳು, ಅಭಿರುಚಿ ಹಾಗೂ ವರ್ತನೆಗಳನ್ನು ಬಹಿರಂಗ ಪಡಿಸುತ್ತದೆ. ಹೀಗಾಗಿ ನಿಮ್ಮ ಹೆಸರಿನ ಕೊನೆಯ ಅಕ್ಷರ ಏನು ಹೇಳುತ್ತದೆ? ನಿಮ್ಮ ವ್ಯಕ್ತಿತ್ವ ಹೇಗಿದೆ? ಎಂದು ತಿಳಿದುಕೊಳ್ಳಬಹುದಾಗಿದೆ.
- ಕೊನೆಯ ಅಕ್ಷರ A ಆಗಿದ್ದರೆ: ಯಾವ ವ್ಯಕ್ತಿಯ ಹೆಸರು ಎ ಅಕ್ಷರದಲ್ಲಿ ಕೊನೆಯಾಗುತ್ತದೆ ಆ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಅತ್ಯುತ್ತಮ ನಾಯಕತ್ವ ಗುಣವನ್ನು ಹೊಂದಿದ್ದು, ಇತರರ ಅಭಿಪ್ರಾಯಗಳಿಮದ ಪ್ರಭಾವಿತರಾಗುವುದಿಲ್ಲ. ಅಷ್ಟೇ ಅಲ್ಲದೇ ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬೀಳುವುದಿಲ್ಲ..ಆದರೆ ತಮ್ಮ ಜೀವನಸಂಗಾತಿಯನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ವಿಶೇಷ ಕಾಳಜಿ ತೋರುತ್ತಾರೆ. ಇವರಿಗೆ ತನ್ನ ಕುಟುಂಬವೇ ಮೊದಲ ಆದ್ಯತೆಯಾಗಿರುತ್ತದೆ.
- E ಅಕ್ಷರದಿಂದ ಹೆಸರು ಕೊನೆಗೊಳ್ಳುತ್ತಿದ್ದರೆ: ಹೆಸರಿನ ಕೊನೆಯ ಅಕ್ಷರ ಇ ಆಗಿದ್ದರೆ ಈ ವ್ಯಕ್ತಿಗಳು ಸೌಮ್ಯಸ್ವಭಾವ ಹೊಂದಿದ್ದು, ಆಶಾವಾದಿಗಳಾಗಿರುತ್ತಾರೆ. ವಯಸ್ಸಿನಲ್ಲಿ ಚಿಕ್ಕವರಾಗಿದ್ದು ಆದರೆ ಪ್ರೌಢ ಬುದ್ಧಿಯನ್ನು ಹೊಂದಿರುತ್ತಾರೆ. ಜೀವನದಲ್ಲಿ ಏನೇ ಬದಲಾದರೂ ಆ ಬದಲಾವಣೆಗಳಿಗೆ ಒಗ್ಗಿಕೊಂಡು ಜೀವನ ನಡೆಸುತ್ತಾರೆ. ಈ ವ್ಯಕ್ತಿಗಳಿಗೆ ನಾಟಕ ಮಾಡುವವರನ್ನು ಕಂಡರೆ ಆಗುವುದಿಲ್ಲ. ಇತರ ಮಾತು ಹಾಗೂ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಲ್ಲದೇ ಯಾರ ಆಕರ್ಷಣೆಗೂ ಒಳಗಾದ ತಮ್ಮ ಪಾಡಿಗೆ ತಾವು ಇರಲು ಇಷ್ಟ ಪಡುತ್ತಾರೆ.
- ಹೆಸರಿನ ಕೊನೆಯ ಅಕ್ಷರ L ಅಥವಾ H ಆಗಿದ್ದರೆ: ಈ ರೀತಿ ವ್ಯಕ್ತಿಗಳು ನಿಷ್ಠಾವಂತರು. ಈ ವ್ಯಕ್ತಿಗಳು ತಮ್ಮ ಎಲ್ಲಾ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತೋರಿಕೆಗಾಗಿ ಹಾಗೂ ಎಲ್ಲರನ್ನು ಮೆಚ್ಚಿಸಲು ಬದುಕುವುದಿಲ್ಲ. ತಾವು ಯಾರಿಗಾದರೂ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುವವರೆಗೆ ಬಿಡುವುದಿಲ್ಲ. ಇವರಲ್ಲಿರುವ ಈ ಕೆಲವು ಗುಣಗಳಿಂದಲೇ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ.
- O ಅಕ್ಷರದಿಂದ ಮುಕ್ತಾಯಗೊಳ್ಳುವ ಹೆಸರು: ಈ ವ್ಯಕ್ತಿಗಳು ಅಧ್ಯಯನ ಹಾಗೂ ಕಲಿಕೆಯಲ್ಲಿ ಸದಾ ಮುಂದೆ ಇರುತ್ತಾರೆ. ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಹೊಸ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿಪುಣರು. ಹೊಂದಿಕೊಳ್ಳುವ ಗುಣವಿದ್ದು ಎಲ್ಲದಕ್ಕೂ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಪರಿಸ್ಥಿತಿ ಹೇಗೆ ಇದ್ದರೂ ಎಲ್ಲವನ್ನು ಸಮಾಧಾನದಿಂದಲೇ ನಿಭಾಯಿಸಿಕೊಂಡು ಹೋಗುತ್ತಾರೆ.
- ಹೆಸರಿನ ಕೊನೆಯ ಅಕ್ಷರ N ಅಥವಾ M ಆಗಿದ್ದರೆ: ಈ ವ್ಯಕ್ತಿಗಳು ಸೊಗಸಾದ ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತದೆ. ಈ ಜನರು ಶಿಸ್ತುಬದ್ಧವಾಗಿ ಜೀವನ ನಡೆಸುತ್ತಾರೆ. ಸಮಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ, ಹೀಗಾಗಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ತಮ್ಮ ಆಕರ್ಷಕ ವ್ಯಕ್ತಿತ್ವದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆಯುತ್ತಾರೆ.
- R ಅಥವಾ S ಅಕ್ಷರದಿಂದ ಹೆಸರು ಮುಕ್ತಾಯಗೊಂಡರೆ: ಹೆಸರಿನ ಕೊನೆಯ ಅಕ್ಷರ ಆರ್ ಅಥವಾ ಎಸ್ ಆಗಿದ್ದರೆ ಈ ಜನರು ಎಲ್ಲರಿಗೂ ಮಾದರಿಯಾಗಿರುತ್ತಾರೆ. ಉಡುಗೆ ತೊಡುಗೆಗಳಿಗೆ ಹೆಚ್ಚು ಆದ್ಯತೆ ನೀಡುವ ಈ ವ್ಯಕ್ತಿಗಳು ಫ್ಯಾಷನ್ ಪ್ರಿಯರಾಗಿರುತ್ತಾರೆ. ಕೆಲಸದ ಬಗ್ಗೆ ಹೆಚ್ಚು ಶ್ರದ್ಧೆ ಹೊಂದಿದ್ದು, ಸಹೋದ್ಯೋಗಿಗಳು ಇವರ ಕೆಲಸ ಕಂಡು ಅಸೂಯೆ ಪಡುತ್ತಾರೆ.
- Y ಅಥವಾ T ಅಕ್ಷರದಿಂದ ಹೆಸರು ಮುಕ್ತಾಯಗೊಂಡರೆ: ಈ ವ್ಯಕ್ತಿಗಳು ಪಟ ಪಟ ಮಾಡುವ ಈ ಜನರಿಗೆ ಸಂವಹನ ಕಲೆಯೂ ಒಲಿದಿರುತ್ತಿರುತ್ತದೆ. ಹೀಗಾಗಿ ಮಾತಿನಿಂದ ಮೋಡಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಈ ವ್ಯಕ್ತಿಗಳ ವರ್ತನೆಗಳು, ಮಾತು ಅರ್ಥಗರ್ಭಿತವಾಗಿದ್ದು, ಬೇರೆಯವರ ತಪ್ಪನ್ನು ಹುಡುಕುವುದರಲ್ಲಿ ನಿಸ್ಸಿಮರು. ಮೋಸ ಮಾಡಿದವರನ್ನು ಸುಲಭವಾಗಿ ಕ್ಷಮಿಸುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ