Personality Test: ನೀವು ನಿಂತುಕೊಳ್ಳುವ ರೀತಿಯೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
ಪ್ರತಿಯೊಬ್ಬರು ಕೂಡ ನಡೆಯುವುದು, ಕುಳಿತುಕೊಳ್ಳುವುದು, ಮಲಗುವುದು ಹೀಗೆ ಎಲ್ಲಾ ಭಂಗಿಯಲ್ಲಿ ವ್ಯತ್ಯಾಸವಿರುತ್ತದೆ. ಆದರೆ ನಿಂತುಕೊಳ್ಳುವ ಭಂಗಿಯಿಂದಲೂ ವ್ಯಕ್ತಿತ್ವ ನಿರ್ಣಯಿಸಬಹುದು ಎನ್ನಲಾಗಿದೆ. ನೀವು ಹೆಚ್ಚಾಗಿ ಹೇಗೆ ನಿಂತುಕೊಳ್ಳುತ್ತೀರಿ, ಆ ಭಂಗಿಯಿಂದ ನಿಮ್ಮ ನಿಗೂಢ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ ನೀವು ನಿಂತುಕೊಳ್ಳುವ ಭಂಗಿ ಯಾವುದು ಎನ್ನುವ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ. ಈ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಹೋಲಿಸಿದರೆ ಆತನ ಗುಣಸ್ವಭಾವವು ಭಿನ್ನವಾಗಿರುತ್ತದೆ. ಕಣ್ಣು, ಅಂಗೈ, ಹಸ್ತರೇಖೆ ನೋಡಿ ಆ ವ್ಯಕ್ತಿ ಹೇಗೆ ಎನ್ನುವ ನಿರ್ಣಯಕ್ಕೆ ಬರಬಹುದು. ಆದರೆ ನಿಂತುಕೊಳ್ಳುವ ಭಂಗಿಯಲ್ಲೂ ನಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಂತೆ. ನಡೆಯುವ, ಕುಳಿತುಕೊಳ್ಳುವ, ಮಾತನಾಡುವ ಶೈಲಿ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿರುವಂತೆ ನಿಂತುಕೊಳ್ಳುವ ರೀತಿಯಲ್ಲಿ ಭಿನ್ನತೆ ಕಾಣಬಹುದು. ಕೆಲವರು ನೇರವಾಗಿ ನಿಲ್ಲುತ್ತಾರೆ. ಇನ್ನು ಕೆಲವರು ಒಂದು ಕಾಲನ್ನು ಮುಂದಕ್ಕೆ ಚಾಚಿ ನಿಂತುಕೊಳ್ಳುತ್ತಾರೆ, ಹೀಗೆ ನಿಂತುಕೊಳ್ಳುವ ಭಂಗಿಯು ವಿಭಿನ್ನವಾಗಿರುತ್ತದೆ. ಹಾಗಾದ್ರೆ ನೀವು ನಿಲ್ಲುವ ಭಂಗಿ ಯಾವುದು ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ.
- ನಿಂತಾಗ ಕಾಲುಗಳನ್ನು ಪರಸ್ಪರ ಸಮಾನಾಂತರವಾಗಿರಿಸುವುದು : ವ್ಯಕ್ತಿಯು ನಿಂತುಕೊಂಡಾಗ ಎರಡು ಕಾಲುಗಳು ಪರಸ್ಪರ ಸಮಾನಾಂತರವಾಗಿದ್ದರೆ, ವಿಧೇಯತೆ ಅಥವಾ ಅಧಿಕಾರದ ಗೌರವವನ್ನು ತೋರಿಸುತ್ತದೆ. ಈ ವ್ಯಕ್ತಿಗಳು ಉತ್ತಮ ಕೇಳುಗರಾಗಿದ್ದು, ಎಲ್ಲಾ ವಿಷಯವನ್ನು ಒಪ್ಪಿಕೊಳ್ಳುತ್ತಾರೆ. ಸಂವಹನದಲ್ಲಿ ತೊಡಗಿಸಿಕೊಂಡಾಗ ಜಾಣ್ಮೆಯನ್ನು ತೋರಿಸುತ್ತದೆ. ಈ ಭಂಗಿಯಲ್ಲಿ ನಿಂತುಕೊಂಡರೆ ಅತಿಯಾದ ಉದ್ರೇಕ, ಭಯವನ್ನು ಅನುಭವಿಸುವಾಗ ಶಾಂತಗೊಳಿಸಲು ಸಹಾಯ ಮಾಡುತ್ತದೆ. ತಟಸ್ಥ ನಿಲುವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಅಷ್ಟು ಸುಲಭವಾಗಿ ತಲೆ ಬಾಗುವುದಿಲ್ಲ.
- ನಿಂತಾಗ ಎರಡು ಕಾಲುಗಳನ್ನು ಸ್ವಲ್ಪ ಅಗಲಿಸಿರುವುದು : ಎರಡು ಕಾಲುಗಳನ್ನು ಅಗಲಿಸಿ ನಿಂತುಕೊಂಡಿರುವ ವ್ಯಕ್ತಿಯು ಅಧಿಕಾರಯುತ ಹಾಗೂ ಆಜ್ಞೆ ಮಾಡುವ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಈ ಜನರು ಅತಿಯಾದ ಆತ್ಮವಿಶ್ವಾಸ ಮತ್ತು ದೃಢ ನಿರ್ಧಾರ ಹೊಂದಿರುತ್ತಾರೆ. ಆತ್ಮವಿಶ್ವಾಸದಿಂದ ಮಾತನಾಡುವ ತಮ್ಮ ನಿಲುವನ್ನು ತೋರ್ಪಡಿಸುವ ಸ್ವಭಾವ ಹೊಂದಿದ್ದು, ಈ ವ್ಯಕ್ತಿಗಳನ್ನು ತನ್ನ ಸುತ್ತಮುತ್ತಲಿನವರನ್ನು ಬಹಳ ವೇಗವಾಗಿ ತನ್ನತ್ತ ಸೆಳೆಯುತ್ತಾರೆ.
- ನಿಂತಾಗ ಒಂದು ಕಾಲನ್ನು ಮುಂದಕ್ಕೆ ಇಟ್ಟು ನಿಲ್ಲುವುದು : ಕೆಲವರು ನಿಂತುಕೊಳ್ಳುವಾಗ ಒಂದು ಕಾಲನ್ನು ಮುಂದೆ ಇಟ್ಟುಕೊಳ್ಳುತ್ತಾರೆ. ಈ ರೀತಿ ಭಂಗಿಯಲ್ಲಿ ನಿಂತುಕೊಳ್ಳುವ ವ್ಯಕ್ತಿಗಳು ತನ್ನ ಸುತ್ತಮುತ್ತಲಿನವರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿರುತ್ತಾರೆ. ಎಲ್ಲರೊಂದಿಗೆ ಆರಾಮದಾಯಕ ಹಾಗೂ ಸಂತೃಪ್ತಿಯಿಂದ ಇರಲು ಬಯಸುತ್ತಾರೆ. ತಮ್ಮ ಭಾವನೆಗಳನ್ನು ಬಹಿರಂಗವಾಗಿ ತೋರ್ಪಡಿಸುವ ಗುಣ ಹೊಂದಿರುತ್ತಾರೆ. ಪ್ರಾಮಾಣಿಕರಾಗಿದ್ದು ಮಾತಿನಲ್ಲಿ ನೇರವಾಗಿರಲು ಬಯಸುತ್ತಾರೆ. ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವ ಗುಣ ಸ್ವಭಾವ ಇವರಾದ್ದಾಗಿರುತ್ತದೆ.
- ನಿಂತಾಗ ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಳ್ಳುವುದು : ನಿಂತಾಗ ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಳ್ಳುವ ವ್ಯಕ್ತಿಗಳು ಎಲ್ಲರೊಂದಿಗೆ ಬೆರೆಯುವ ಬದಲು ಒಂಟಿಯಾಗಿರಲು ಇಷ್ಟ ಪಡುತ್ತಾರೆ. ಶಾಂತ ಹಾಗೂ ವಿಧೇಯರಾಗಿದ್ದು ತಮ್ಮ ಭಾವನೆಗಳ ಬಗ್ಗೆ ತುಂಬಾನೇ ರಕ್ಷಣಾತ್ಮಕವಾಗಿರುತ್ತಾರೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಆತ್ಮವಿಶ್ವಾಸದ ಕೊರತೆ ಇವರಲ್ಲಿ ಕಾಡುತ್ತದೆ. ಅಪರಿಚಿತರೊಂದಿಗೆ ಕೂಡ ಅಷ್ಟು ಬೇಗನೆ ಬೆರೆಯುವುದಿಲ್ಲ. ಹೊಸ ಜನರ ಪರಿಚಯ ಹಾಗೂ ಹೊಸ ಹೊಸ ಅನುಭವಗಳಿಗೆ ಸಿದ್ಧರಿಲ್ಲ ಎನ್ನುವ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




