Beauty Tips: ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ಹಣ್ಣಿನಿಂದ ನೈಸರ್ಗಿಕ ಸ್ಕ್ರಬ್ ತಯಾರಿಸಿಕೊಳ್ಳಿ

ನೀವು ಎಷ್ಟೇ ಸುಂದರವಾಗಿದ್ದರೂ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಅವು ನಿಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಮುಖವನ್ನು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಹರಸಾಹಸ ಪಡುವವರು ಮನೆಯಲ್ಲಿಯೇ ದಾಳಿಂಬೆ ಸಿಪ್ಪೆಯಿಂದ ತಯಾರಿಸಿಕೊಳ್ಳಬಹುದಾದ ಸರಳವಾದ ಸ್ಕ್ರಬ್ ಮೂಲಕ ಮುಖದ ಅಂದವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಹಾಗಾದರೆ ಈ ಹಣ್ಣನ್ನು ಬಳಕೆ ಮಾಡುವುದು ಹೇಗೆ? ಯಾವ ರೀತಿ ಸ್ಕ್ರಬ್ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

Beauty Tips: ಮುಖದ ಅಂದ ಹೆಚ್ಚಿಸಿಕೊಳ್ಳಲು ಈ ಹಣ್ಣಿನಿಂದ ನೈಸರ್ಗಿಕ ಸ್ಕ್ರಬ್ ತಯಾರಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2025 | 5:12 PM

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲ ಇದು ನಿಮ್ಮ ಸೌಂದರ್ಯ ಹೆಚ್ಚಿಸಲು ಕೂಡ ಬಳಕೆಯಾಗುತ್ತದೆ ಎಂದರೆ ನಂಬುತ್ತೀರಾ? ಹೌದು. ಇದು ತಿನ್ನಲು ಮಾತ್ರವಲ್ಲ, ಮುಖಕ್ಕೆ ಸ್ಕ್ರಬ್ ಆಗಿ ಬಳಸುವುದರಿಂದ ಉತ್ತಮ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ. ದಾಳಿಂಬೆ ಹಣ್ಣಿನಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿದ್ದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಹಣ್ಣು ಮಾತ್ರವಲ್ಲ ಅದರ ಸಿಪ್ಪೆ, ತೊಗಟೆ, ಹೂವು ಇತ್ಯಾದಿ, ಎಲ್ಲಾ ಭಾಗದಲ್ಲಿಯೂ ಪೌಷ್ಠಿಕಾಂಶದ ಜೊತೆಗೆ ಔಷಧೀಯ ಮೌಲ್ಯಗಳನ್ನು ಹೊಂದಿವೆ. ಇವುಗಳನ್ನು ಸರಿಯಾದ ವಿಧಾನಗಳಲ್ಲಿ ಬಳಸಿದರೆ, ಚರ್ಮ ಕಾಂತಿಯುತವಾಗುವುದಲ್ಲದೆ ಮುಖದ ಮೇಲಿನ ಕಲೆಗಳು ಕೂಡ ಕಡಿಮೆಯಾಗುತ್ತವೆ. ಹಾಗಾದರೆ ಈ ಹಣ್ಣನ್ನು ಬಳಕೆ ಮಾಡುವುದು ಹೇಗೆ? ಯಾವ ರೀತಿ ಸ್ಕ್ರಬ್ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ನೀವು ಎಷ್ಟೇ ಸುಂದರವಾಗಿದ್ದರೂ ನಿಮ್ಮ ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ಅವು ನಿಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತವೆ. ಹಾಗಾಗಿ ಮುಖವನ್ನು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಹರಸಾಹಸ ಪಡುವವರು ಮನೆಯಲ್ಲಿಯೇ ದಾಳಿಂಬೆ ಸಿಪ್ಪೆಯಿಂದ ತಯಾರಿಸಿಕೊಳ್ಳಬಹುದಾದ ಸರಳವಾದ ಸ್ಕ್ರಬ್ ಮೂಲಕ ಮುಖದ ಅಂದವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಈ ಸ್ಕ್ರಬ್ ಅನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಕಪ್ಪು ಕಲೆಗಳನ್ನು ಕಡಿಮೆ ಮಾಡಬಹುದು. ಜೊತೆಗೆ ಇದು ಚರ್ಮದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ರೀತಿ ಮಾಡುವುದರಿಂದ ಕಪ್ಪು ಕಲೆಗಳು ಮತ್ತು ಬಿಳಿ ಕಲೆಗಳು ಕಡಿಮೆಯಾಗಿ, ಮುಖವು ಸ್ವಚ್ಛ ಮತ್ತು ಕಾಂತಿಯುತವಾಗುತ್ತದೆ.

ದಾಳಿಂಬೆ ಸಿಪ್ಪೆಯಿಂದ ತಯಾರಿಸಿದ ಸ್ಕ್ರಬ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಮೇಲಿನ ಸತ್ತ ಕೋಶಗಳು ನಿವಾರಣೆಯಾಗುತ್ತದೆ. ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳಲು ಈ ಸತ್ತ ಕೋಶಗಳೇ ಕಾರಣ. ಹಾಗಾಗಿ ಅವುಗಳನ್ನು ಸರಿಯಾಗಿ ತೆಗೆದು ಹಾಕಿದರೆ, ಚರ್ಮವು ತಾಜಾತನದಿಂದ ಹೊಳೆಯುತ್ತದೆ. ಅದಕ್ಕಾಗಿಯೇ ದಾಳಿಂಬೆ ಸಿಪ್ಪೆಯನ್ನು ಸರಿಯಾಗಿ ಬಳಸಿದರೆ, ಚರ್ಮವು ಮೃದು ಮತ್ತು ಕಾಂತಿಯುತವಾಗುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ
ಹೊಟ್ಟೆ ಎಷ್ಟೇ ದಪ್ಪವಿದ್ದರೂ ಕರಗಿಸಲು ಇಲ್ಲಿದೆ ಸರಳ ಉಪಾಯ
ಈ ಒಣಹಣ್ಣನ್ನು ನೆನೆಸಿಟ್ಟು ತಿಂದರೆ ತೂಕ ಇಳಿಯೋದು ಗ್ಯಾರಂಟಿ
ನೀರು ಕುಡಿದರೆ ತೂಕ ಕಡಿಮೆ ಆಗುತ್ತಾ? ತಜ್ಞರು ಹೇಳುವುದೇನು?
ಮಕ್ಕಳಲ್ಲಿ ‘ಬೊಜ್ಜು’ ಬರುಲು ಪೋಷಕರೇ ಕಾರಣ, ಅದು ಹೇಗೆ?

ದಾಳಿಂಬೆ ಸಿಪ್ಪೆಯಿಂದ ಸ್ಕ್ರಬ್ ತಯಾರಿಸುವುದು ಹೇಗೆ?

ನಮ್ಮ ಚರ್ಮದ ಆರೋಗ್ಯದ ಜೊತೆಗೆ ಮುಖದ ಕಾಂತಿ ಹೆಚ್ಚಿಸಲು, ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಸಂಜೆಯ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಂಡು ಅದನ್ನು ಮೃದುವಾಗಿ ಪುಡಿ ಮಾಡಿಕೊಳ್ಳಬೇಕು. ಈ ಪುಡಿಯ ಬಳಕೆಯು ಮುಖಕ್ಕೆ ಒಳ್ಳೆಯ ಫಲಿತಾಂಶ ನೀಡುವುದಲ್ಲದೆ ಇದನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡು ಅಗತ್ಯಕ್ಕೆ ಅನುಗುಣವಾಗಿ ಬಳಸಬಹುದು. ದಾಳಿಂಬೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಒಂದು ಚಮಚ ಸಕ್ಕರೆ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಆವಕಾಡೊ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮೂರು ಪದಾರ್ಥಗಳನ್ನು ಒಟ್ಟುಗೂಡಿಸಿದಾಗ ಒಳ್ಳೆಯ ಸ್ಕ್ರಬ್ ತಯಾರಾಗುತ್ತದೆ. ಈ ಮಿಶ್ರಣವನ್ನು ಪೇಸ್ಟ್ ನಂತೆ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡರೆ ಚರ್ಮವು ಕಾಂತಿಯುತವಾಗುತ್ತದೆ.

ಸ್ಕ್ರಬ್ ಹಚ್ಚುವ ಮೊದಲು, ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಈ ಸ್ಕ್ರಬ್ ಅನ್ನು ಮುಖದ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ನಿಮ್ಮ ಕೈಗಳಿಂದ ಮಸಾಜ್ ಮಾಡಿ ಮತ್ತು ಚರ್ಮಕ್ಕೆ ನಿಧಾನವಾಗಿ ಹಚ್ಚಿರಿ. ಮಸಾಜ್ ಮಾಡಿ 10- 15 ನಿಮಿಷಗಳ ಕಾಲ ಬಿಡಿ ಬಳಿಕ ನೀರಿನಿಂದ ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಚರ್ಮ ಮೃದುವಾಗುವುದಲ್ಲದೆ ಕಾಂತಿಯುತವಾಗುತ್ತದೆ.

ಇದನ್ನೂ ಓದಿ: ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನುತ್ತೀರಾ? ಇದು ವಿಷಕ್ಕೆ ಸಮ ಎನ್ನುತ್ತಾರೆ ತಜ್ಞರು

ದಾಳಿಂಬೆ ಸಿಪ್ಪೆಯ ಸ್ಕ್ರಬ್ ಒಳ್ಳೆಯದು ಏಕೆ?

ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ ಮತ್ತು ಚರ್ಮಕ್ಕೆ ಒಳ್ಳೆಯ ಫಲಿತಾಂಶಗಳನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಬಳಕೆ ಮಾಡಿದರೆ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. ನೆರಿಗೆಗಳು ಬರದಂತೆ ತಡೆಯುತ್ತದೆ. ಪ್ರತಿ ಬಾರಿ ಈ ಸ್ಕ್ರಬ್ ಬಳಸಿದಾಗ, ಚರ್ಮ ಕಾಂತಿಯುತವಾಗಿ ಕಾಣುತ್ತದೆ. ಅದರಲ್ಲಿಯೂ ದಾಳಿಂಬೆಯಿಂದ ಮಾಡಿದ ಈ ಸ್ಕ್ರಬ್ ನೈಸರ್ಗಿಕವಾಗಿರುವುದರಿಂದ ತುರಿಕೆ ಮತ್ತು ಅಲರ್ಜಿಯಂತಹ ಯಾವುದೇ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡುಬರುವುದಿಲ್ಲ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ