Make Soft Puttu: ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮೃದುವಾದ ಪುಟ್ಟು

ಪುಟ್ಟು ತಯಾರಿಸಲು ಕೇವಲ ಬೆರಳೆಣಿಕೆಯಷ್ಟು ಪದಾರ್ಥಗಳು ಸಾಕಾಗುತ್ತದೆ. ಆದರೆ ಅದನ್ನು ಸರಿಯಾದ ವಿನ್ಯಾಸದಲ್ಲಿ ತಯಾರು ಮಾಡುವುದು ಸವಾಲಿನ ಕೆಲಸವಾಗಿದೆ.

Make Soft Puttu: ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮೃದುವಾದ ಪುಟ್ಟು
ಸಾಂದರ್ಭಿಕ ಚಿತ್ರ
Image Credit source: iStock
Updated By: ಅಕ್ಷತಾ ವರ್ಕಾಡಿ

Updated on: Jan 04, 2023 | 12:26 PM

ಪುಟ್ಟು(Puttu) ಕೇರಳದ ಜನಪ್ರಿಯ ಖಾದ್ಯ(Popular dish from Kerala)ಗಳಲ್ಲಿ ಒಂದು. ಇದನ್ನು ಮೂಲತಃ ಅಕ್ಕಿ ಹಿಟ್ಟು ಮತ್ತು ತುರಿದ ತೆಂಗಿನ ಕಾಯಿಯನ್ನು ಪುಟ್ಟು ಮೇಕರ್‌ನಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಈ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಖಾದ್ಯವನ್ನು ಕಡ್ಲೆ ಕರಿ, ಸಕ್ಕರೆ ಅಥವಾ ತೆಂಗಿನ ಕಾಯಿ ಚಟ್ನಿಯೊಂದಿಗೆ ಬೆಳಗ್ಗಿನ ಉಪಹಾರಕ್ಕಾಗಿ ನೀಡಲಾಗುತ್ತದೆ. ಪುಟ್ಟು ರುಚಿಕರವಾದದ್ದು ಮಾತ್ರವಲ್ಲದೆ ಆರೋಗ್ಯಕರ ಖಾದ್ಯವೂ ಹೌದು. ಇದನ್ನು ತಯಾರಿಸಲು ಬೆರಳೆಣಿಕೆಯಷ್ಟು ಪದಾರ್ಥಗಳು ಸಾಕಾದರೂ, ಸರಿಯಾದ ವಿನ್ಯಾಸದಲ್ಲಿ ತಯಾರಿಸುವುದು ಸವಾಲಿನ ಸಂಗತಿಯಾಗಿದೆ. ಆದ್ದರಿಂದ ನೀವು ಮನೆಯಲ್ಲಿಯೇ ಪುಟ್ಟು ಮಾಡಲು ಯೋಜಿಸುತ್ತಿದ್ದರೆ ಈ 5 ಸಲಹೆಗಳನ್ನು ಪಾಲಿಸಿ.

ಮನೆಯಲ್ಲಿ ಮೃದುವಾದ ಪುಟ್ಟು ಮಾಡಲು 5 ಸಲಹೆಗಳು

ಹಂತ ಹಂತವಾಗಿ ನೀರನ್ನು ಸೇರಿಸಿ:

ಪುಟ್ಟುವಿಗೆ ಮಿಶ್ರಣವನ್ನು ಮಾಡುವಾಗ, ಹೆಚ್ಚುವರಿ ನೀರು ಸೇರದಂತೆ ನೋಡಿಕೊಳ್ಳಿ. ಹಿಟ್ಟಿನ ಮಿಶ್ರಣಕ್ಕೆ ಒಮ್ಮೆಲೆ ಅಧಿಕ ಪ್ರಮಾಣದ ನೀರನ್ನು ಸುರಿಯುವ ಬದಲು ಹಂತ ಹಂತವಾಗಿ ಸ್ವಲ್ಪ ನೀರನ್ನು ಸೇರಿಸಬೇಕು. ಮೃದುವಾದ ಪುಟ್ಟು ಮಾಡಲು ಸರಿಯಾದ ವಿನ್ಯಾಸ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ಉತ್ತಮ ಗುಣಮಟ್ಟದ ಅಕ್ಕಿ ಹಿಟ್ಟನ್ನು ಬಳಸಿ:

ಮನೆಯಲ್ಲಿಯೇ ತಯಾರಿಸುವಂತಹ ಪುಟ್ಟು ಮೃದುವಾಗಲು ಅಕ್ಕಿ ಹಿಟ್ಟಿನ ಗುಣಮಟ್ಟ ಕೂಡಾ ಉತ್ತಮ ಪಾತ್ರವನ್ನು ವಹಿಸುತ್ತದೆ. ಇದನ್ನು ಸಾಮಾನ್ಯವಾಗಿ ಗೋಧಿ ಅಕ್ಕಿ ಹಿಟ್ಟು ಅಥವಾ ಕೆಂಪು ಅಕ್ಕಿ ಹಿಟ್ಟು ಬಳಸಿ ತಯಾರಿಸಲಾಗುತ್ತದೆ. ನೀವು ಬಳಸುವ ಅಕ್ಕಿ ಹಿಟ್ಟು ಉತ್ತಮ ಗುಣಮಟ್ಟದಾಗಿರಬೇಕು. ಇದರಿಂದ ಪುಟ್ಟು ಮೃದುವಾಗಿ ಬರುತ್ತದೆ.

ಇದನ್ನೂ ಓದಿ: ಕೇವಲ 15 ನಿಮಿಷಗಳಲ್ಲಿ ಸುಲಭವಾಗಿ ಅಕ್ಕಿ ಪಾಯಸ ತಯಾರಿಸಿ

ಹಿಟ್ಟಿನಲ್ಲಿ ಯಾವುದೇ ಉಂಡೆಗಳಿಲ್ಲದಂತೆ ನೋಡಿಕೊಳ್ಳಿ:

ನೀವು ಹಿಟ್ಟು ಬೆರೆಸಿದ ನಂತರ ಅದರಲ್ಲಿ ಯಾವುದೇ ಉಂಡೆಗಳಿರದಂತೆ ನೋಡಿಕೊಳ್ಳಿ. ಉಂಡೆಗಳು ಉಳಿದುಕೊಂಡಿದ್ದರೆ ಅದನ್ನು ಪುಡಿ ಮಾಡಿ ಮೃದುವಾದ ಹಿಟ್ಟು ತಯಾರಿಸಿಕೊಳ್ಳಿ.

ಪುಟ್ಟು ಮೇಕರ್‌ನ್ನು ಬಳಸಿ:

ಸಾಂಪ್ರದಾಯಿಕ ಪುಟ್ಟು ಮೇಕರ್‌ನ್ನು ಬಳಸುವುದರಿಂದ ಪುಟ್ಟುವಿಗೆ ಒಂದು ಒಳ್ಳೆಯ ಆಕಾರ ನೀಡಲು ಸಹಾಯ ಮಾಡುತ್ತದೆ. ಮತ್ತು ತಯಾರಿಸುವ ಪ್ರಕ್ರಿಯೆಯನ್ನು ಕೂಡಾ ಸುಲಭಗೊಳಿಸುತ್ತದೆ. ಪುಟ್ಟು ಮೇಕರ್ ಇಲ್ಲದಿದ್ದರೆ ಇಡ್ಲಿ ಪ್ಯಾನ್‌ಗೆ ಒದ್ದೆ ಮಸ್ಲಿನ್ ಬಟ್ಟೆಯನ್ನು ಸುತ್ತಿ ಅದರಲ್ಲಿ ಪುಟ್ಟುವನ್ನು ಹಬೆಗೆ ಇಡಬಹುದು.

ಜಾಸ್ತಿ ಸ್ಟೀಮ್ ಮಾಡಬೇಡಿ:

ಮನೆಯಲ್ಲಿ ಪುಟ್ಟು ತಯಾರಿಸುವಾಗ ಅತಿಯಾದ ಸ್ಟೀಮ್ ಮಾಡದಂತೆ ನೋಡಿಕೊಳ್ಳಿ. ದೀರ್ಘಕಾಲ ಹಬೆಯಾಡಿದರೆ ಅದು ಒಣಗಿ ತೇವಾಂಶ ಕಳೆದುಕೊಳ್ಳುತ್ತದೆ.ಹಾಗಾದರೆ ಮುಂದಿನ ಬಾರಿ ನೀವು ಮನೆಯಲ್ಲಿ ಪುಟ್ಟು ತಯಾರಿಸುವಾಗ ಈ ಸಲಹೆಗಳನ್ನು ನೆನಪಿನಲ್ಲಿಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 12:26 pm, Wed, 4 January 23