ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸೋದು ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಹೇಳುವುದು ಏನು?

ಇವಾಗೆಲ್ಲಾ ಮಸಾಲೆಗಳನ್ನು ರುಬ್ಬಲು ಪ್ರತಿಯೊಬ್ಬರ ಮನೆಯಲ್ಲೂ ಹೆಚ್ಚಾಗಿ ಮಿಕ್ಸರ್‌ ಗ್ರೈಂಡರ್‌ಗಳನ್ನೇ ಬಳಸಲಾಗುತ್ತದೆ. ಮಿಕ್ಸಿಯಲ್ಲಿ ರುಬ್ಬುವ ಸಂದರ್ಭದಲ್ಲಿ ಅದರಿಂದ ಬರುವ ಸದ್ದು ಅನೇಕರಿಗೆ ಕಿರಿಕಿರಿಯನ್ನು ಸಹ ಉಂಟು ಮಾಡುತ್ತಾರೆ. ಹಾಗಿರುವಾಗ ಗರ್ಭಿಣಿಯರು ಮಿಕ್ಸರ್‌ ಗ್ರೈಂಡರ್‌ ಬಳಸಬಹುದೇ, ಮಿಕ್ಸಿ ಸದ್ದು ಹೊಟ್ಟೆಯೊಳಗಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತಾ? ಈ ಕುರಿತು ತಜ್ಞರು ಏನು ಹೇಳುತ್ತಾರೆ ನೋಡಿ.

ಗರ್ಭಿಣಿಯರು  ಮಿಕ್ಸರ್ ಗ್ರೈಂಡರ್ ಬಳಸೋದು  ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಹೇಳುವುದು ಏನು?
ಸಾಂದರ್ಭಿಕ ಚಿತ್ರ
Edited By:

Updated on: Apr 16, 2025 | 5:05 PM

ಗರ್ಭಿಣಿ ಮಹಿಳೆಯ (Pregnant Women) ಆರೋಗ್ಯ (health) ತುಂಬಾ ಸೂಕ್ಷ್ಮ ಎಂದು ಪರಿಗಣಿಸಲಾಗುತ್ತದೆ.  ಹೀಗಾಗಿ ಗರ್ಭಾವಸ್ಥೆಯ (pregnancy) ಸಂದರ್ಭದಲ್ಲಿ ಮಹಿಳೆಯರು (ladies) ಎಷ್ಟು ಜಾಗರೂಕರಾಗಿದ್ದರೂ ಕಡಿಮೆಯೇ. ಗರ್ಭಾವಸ್ಥೆಯಲ್ಲಿ ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯೊಳಗಿರುವ ಮಗುವಿನ (Baby)  ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆಹಾರ ಪದ್ಧತಿಯ ಜೊತೆಗೆ ದೇಹಾರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಕೆಲ ಮಹಿಳೆಯರು ಅಡುಗೆ, ನೆಲ ಒರೆಸುವಂತಹದ್ದು, ಗುಡಿಸುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ. ವಿಶೇಷವಾಗಿ ಅಡುಗೆ ಕೆಲಸ ಮಾಡುವಾಗ ಮಸಾಲೆಗಳನ್ನು ಮಿಕ್ಸಿಯಲ್ಲಿ ರುಬ್ಬುತ್ತಾರೆ. ಇದರ ಸೌಂಡ್  ಜೋರಾಗಿ ಇರುವ ಕಾರಣ ಗರ್ಭಿಣಿಯರು ಮಿಕ್ಸರ್‌ ಗ್ರೈಂಡರ್‌ (mixer grinder) ಬಳಸೋದು ಎಷ್ಟು ಸೇಫ್‌ ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ನಿಜಕ್ಕೂ ಗರ್ಭಿಣಿಯರು  ಮಿಕ್ಸರ್ ಗ್ರೈಂಡರ್ ಬಳಸೋದು  ಅಪಾಯಕಾರಿಯೇ?, ಇದು ಹೊಟ್ಟೆಯೊಳಗಿನ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಈ ಬಗ್ಗೆ ಸ್ತ್ರೀರೋಗ ತಜ್ಞೆ  (Gynecologist) ಡಾ. ತನುಜ್ ಲಾವಾನಿಯಾ ರೈ (Dr. Tanuj Lawania Rai) ಏನು ಹೇಳುತ್ತಾರೆ ನೋಡಿ.

ಗರ್ಭಿಣಿ ಮಹಿಳೆಯರು ಮಿಕ್ಸರ್‌ ಗ್ರೈಂಡರ್‌ ಬಳಸೋದು ಸೇಫ್‌ ಅಲ್ವಾ?

ಹೊಟ್ಟೆಯಲ್ಲಿರುವ ಮಗುವಿನ ಕಿವಿಗಳು 12 ವಾರಗಳನ್ನು ತಲುಪುವ ಹೊತ್ತಿಗೆ ಬೆಳವಣಿಗೆಯಾಗುವುದರಿಂದ ಹೆಚ್ಚು ಸದ್ದು ಗದ್ದಲ ಕೇಳಿಸುವ ಸ್ಥಳದಲ್ಲಿ ಗರ್ಭಿಣಿಯರು ಕೂರಬಾರದು ಎಂದು ಹೇಳುತ್ತಾರೆ. ಹೀಗಿರುವಾಗ ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಿಕ್ಸರ್ ಗ್ರೈಂಡರ್ ಬಳಸುವುದು ಸುರಕ್ಷಿತವೇ ಅಥವಾ ಅದರ ಸೌಂಡ್ ಮಗುವಿಗೆ ಹಾನಿ ಮಾಡಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.  ಈ ಬಗ್ಗೆ ಸ್ತ್ರೀರೋಗ ತಜ್ಞೆ ಡಾ. ತನುಜ್ ಲಾವಾನಿಯಾ ರೈ (the_womb_doctor) ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ಪ್ರಶ್ನೆಗೆ ಉತ್ತರವನ್ನು  ನೀಡಿದ್ದಾರೆ.

ಇದನ್ನೂ ಓದಿ
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್​​ ಪಾತ್ರೆಗಳಲ್ಲಿ ಬಿಸಿ ಅನ್ನ ಸಂಗ್ರಹಿಸಬಾರದು
ಯುವ ಜನರೇ… ಮದುವೆ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ಕೇಳಿ
ಪ್ರತಿದಿನ ಊಟಕ್ಕೆ ಹಪ್ಪಳ ಸವಿಯುತ್ತೀರಾ?
ಶಿವನ ಯಾವ ರೂಪ ಇಷ್ಟ ಅನ್ನೋದ್ರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್​​ ಪಾತ್ರೆಗಳಲ್ಲಿ ಬಿಸಿ ಅನ್ನ ಸಂಗ್ರಹಿಸಬಾರದು, ಯಾಕೆ ಗೊತ್ತಾ?

ವಿಡಿಯೋ ಇಲ್ಲಿದೆ ನೋಡಿ: 

ಮಿಕ್ಸರ್ ಗ್ರೈಂಡರ್ ಬಳಸುವುದರಿಂದ ಮಗುವಿಗೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ತ್ರೀರೋಗ ತಜ್ಞ ಡಾ. ತನುಜ್ ಲಾವಾನಿಯಾ ರೈ ಹೇಳುತ್ತಾರೆ. ಅದರಿಂದ ಹೊರಹೊಮ್ಮುವ ಶಬ್ದ ನಮಗೆ ಮೇಲ್ನೋಟಕ್ಕೆ ಕೇಳಿಸುತ್ತವೆ ವಿನಃ ಅದು ಗರ್ಭದೊಳಗಿರುವ ಮಗುವಿಗೆ ಕೇಳಿಸುವುದಿಲ್ಲ. ಜೊತೆಗೆ ಮಿಕ್ಸಿ ಸೌಂಡ್‌ ಗರ್ಭಕೋಶ ಅಥವಾ ಮಗುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಗರ್ಭಾಶಯದೊಳಗಿನ ಆಮ್ನಿಯೋಟಿಕ್ ದ್ರವದಿಂದ ಮಗು ರಕ್ಷಿಸಲ್ಪಟ್ಟಿರುತ್ತದೆ ಇದರಿಂದಾಗಿ ಮಿಕ್ಸಿ ಸೌಂಡ್ ಮಗುವನ್ನು ತಲುಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ  ಗೃಹೋಪಯೋಗಿ ಉಪಕರಣಗಳಿಂದ ಹೊರ ಹೊಮ್ಮುವ ಕಡಿಮೆ ತೀವ್ರತೆಯ ಶಬ್ದಗಳು ಭ್ರೂಣದ ಆರೋಗ್ಯ ಅಥವಾ ಬೆಳವಣಿಗೆಯ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ.

ಇನ್ನೂ ಯಾವುದೇ ಮನೆ ಕೆಲಸಗಳನ್ನು ಮಾಡುವಾಗ ಗರ್ಭಿಣಿ ಮಹಿಳೆಯರು ಬೆನ್ನಿನ ಮೇಲೆ ಅನಗತ್ಯ ಒತ್ತಡ ಹೇರಬಾರದು. ಆರಾಮದಾಯಕವಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡಬೇಕು. ಜೊತೆಗೆ ಸುಸ್ತು ಅಥವಾ ದಣುವಾದಾಗ ವಿಶ್ರಾಂತ್ರಿಯನ್ನು ಸಹ ಪಡೆಯಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ