ಒಲೆಯಲ್ಲಿ ಬದನೆಕಾಯಿ ಸುಟ್ಟು ಖಾರ ಖಾರ ಚಟ್ನಿ ಮಾಡಿ; ವಿಧಾನ ಹೀಗಿದೆ

| Updated By: Digi Tech Desk

Updated on: Dec 17, 2021 | 10:35 AM

ಬೇರೆ ಸಾಂಬಾರು ಬೇಕು ಅಂತ ಹಠ ಮಾಡುವವರೆ ಜಾಸ್ತಿ. ಆದರೆ ನಾವು ತಿಳಿಸಿದ ವಿಧಾನವನ್ನು ಅನುಸರಿಸಿ ಖಾರ ಖಾರ ಬದನೆಕಾಯಿ ಚಟ್ನಿ ಮಾಡಿ.

ಒಲೆಯಲ್ಲಿ ಬದನೆಕಾಯಿ ಸುಟ್ಟು ಖಾರ ಖಾರ ಚಟ್ನಿ ಮಾಡಿ; ವಿಧಾನ ಹೀಗಿದೆ
ಬದನೆಕಾಯಿ ಚಣ್ನಿ
Follow us on

ಬಹಳಷ್ಟು ಮಂದಿಗೆ ಖಾರ ಅಂದರೆ ತುಂಬಾ ಇಷ್ಟ. ಅದರಲ್ಲೂ ಚಟ್ನಿ ಖಾರವಾಗಿದ್ದರೆ ಊಟದ ಮಜವೇ ಬೇರೆ. ಸಾಮಾನ್ಯವಾಗಿ ಬದನೆಕಾಯಿ ಅಂದರೆ ಮುಖ ಹಿಂಡುತ್ತಾರೆ. ಮನೆಯಲ್ಲಿ ಬದನೆಕಾಯಿ ಸಾಂಬಾರು ಮಾಡಿದರೆ ಅಯ್ಯೋ ನನಗೆ ಈ ಸಾಂಬಾರು ಬೇಡ! ಬೇರೆ ಸಾಂಬಾರು ಬೇಕು ಅಂತ ಹಠ ಮಾಡುವವರೆ ಜಾಸ್ತಿ. ಆದರೆ ನಾವು ತಿಳಿಸಿದ ವಿಧಾನವನ್ನು ಅನುಸರಿಸಿ ಖಾರ ಖಾರ ಬದನೆಕಾಯಿ ಚಟ್ನಿ ಮಾಡಿ. ಈ ಚಟ್ನಿ ಅಕ್ಕಿ ರೊಟ್ಟಿ, ಕಡುಬಿಗೆ ತುಂಬಾ ಒಳ್ಳೆಯ ಕಾಂಬಿನೇಷನ್ ನೀಡುತ್ತದೆ. ಬದನೆಕಾಯಿ ಚಟ್ನಿ ಮಾಡುವ ವಿಧಾನ ಕೂಡ ತುಂಬಾ ಸುಲಭವಾಗಿದೆ.

ಬೇಕಾಗುವ ಸಾಮಾಗ್ರಿಗಳು
ಎರಡು ಬದನೆಕಾಯಿ
ಹಸಿಮೆಣಸಿನಕಾಯಿ
ಈರುಳ್ಳಿ
ಮೊಸರು
ಉಪ್ಪು
ಬೆಳ್ಳುಳ್ಳಿ
ಹುಣಸೆ ಹುಳಿ
ಶುಂಠಿ
ಕೊತ್ತಂಬರಿ ಸೊಪ್ಪು

* ಮೊದಲು ಖಾರವಾದ 4ರಿಂದ 5 ಹಸಿಮೆಣಸಿನಕಾಯಿ, ಕತ್ತರಿಸಿಕೊಂಡ ಸಣ್ಣ ಗಾತ್ರದ ಈರುಳ್ಳಿ (ಅರ್ಧ ಭಾಗಕ್ಕಿಂದ ಕಡಿಮೆ ಇರಬೇಕು) ಮತ್ತು ಮೂರು ಬೇಳೆ ಬೆಳ್ಳುಳ್ಳಿಯನ್ನು ಒಂದು ಚಮಚ ಎಣ್ಣೆಯೊಂದಿಗೆ ಬಾಣಲೆಯಲ್ಲಿ ಫ್ರೈ ಮಾಡಿಕೊಳ್ಳಿ. ಬದನೆಕಾಯಿಯನ್ನು ಕಟ್ಟಿಗೆ ಒಲೆಯ ಕೆಂಡದಲ್ಲಿ 10ರಿಂದ 15 ನಿಮಿಷಗಳ ಕಾಲ ಸುಡಬೇಕು. ಕಟ್ಟಿಗೆ ಒಲೆ ಇಲ್ಲದವರು ಗ್ಯಾಸ್ ಮೇಲೆ ಇಟ್ಟು ಸುಡಬಹುದು. ಒಲೆಯಲ್ಲಿ ಸುಟ್ಟರೆ ರುಚಿ ಹೆಚ್ಚಾಗಿರುತ್ತದೆ.

* ಬದನೆಕಾಯಿ ಬೆಂದ ನಂತರ ಅದನ್ನು ಹೊರಗೆ ತೆಗೆದು ನೀರಿನಲ್ಲಿ ಹಾಕಿ. ಬಿಸಿ ತಣ್ಣಗಾದ ಬಳಿಕ ಮೇಲಿನ ಸಿಪ್ಪೆ ತೆಗೆಯಿರಿ.

* ಫ್ರೈ ಮಾಡಿದ ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿ ಜೊತೆಗೆ ತೆಂಗಿನಕಾಯಿ (ಸಣ್ಣ ಗಾತ್ರದ ಒಂದು ಕಾಯಿ ಬೇಕಾಗುತ್ತದೆ) ತುರಿ ಹಾಕಿ. ಸ್ವಲ್ಪ ಹುಣಸೆ ಹುಳಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಸ್ವಲ್ಪ ಶುಂಠಿ ಹಾಕಿ ರುಬ್ಬಿ. ಸಾಮಾನ್ಯವಾಗಿ ಬೇರೆ ಚಟ್ನಿ ರುಬ್ಬುವಷ್ಟು ರುಬ್ಬಿ. ನಂತರ ಬೇಯಿಸಿದ ಬದನೆಕಾಯಿ ಹಾಕಿ. ಬದನೆಕಾಯಿ ಹಾಕಿ ಮಿಕ್ಸಿಯಲ್ಲಿ ಕೇವಲ ಎರಡು ಸೆಕೆಂಡ್ ಮಾತ್ರ ರುಬ್ಬಬೇಕು.

* ಮಿಕ್ಸಿ ಜಾರಿನಿಂದ ರುಬ್ಬಿದ ಚಣ್ನಿಯನ್ನು ಒಂದು ಬೌಲ್​ಗೆ ಹಾಕಿ. ಅದಕ್ಕೆ ಅರ್ಧ ಕಪ್ ಮೊಸರು, ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಸೇರಿಸಿ.

ಇದನ್ನೂ ಓದಿ

Health Tips: ಒಡೆದ ಹಿಮ್ಮಡಿಯಿಂದ ಕಂಗೆಟ್ಟಿದ್ದೀರಾ?; ನಿಮ್ಮ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ

Winter Health Tips: ಚಳಿಗಾಲದಲ್ಲಿ ಎದುರಾಗಲಿದೆಯೇ ಶೀತ, ಜ್ವರ? 5 ಆಹಾರ ಪದಾರ್ಥಗಳಲ್ಲಿದೆ ಸಮಸ್ಯೆಗೆ ಪರಿಹಾರ

Published On - 8:30 am, Fri, 17 December 21