AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ancient Monuments: ಪ್ರಾಚೀನ ರೋಮನ್ ಸ್ಮಾರಕಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ಕಾರಣ, ಸಂಶೋಧನೆ ಹೇಳುವುದೇನು?

ಹಳೆಯ ಕಾಂಕ್ರೀಟ್ ರಚನೆಗಳ ಕಟ್ಟಡ ಬಿಡಿ, ಸಾಮಾನ್ಯವಾಗಿ ಹುಲ್ಲು ಮತ್ತು ಕಡ್ಡಿಗಳಿಂದ ನಿರ್ಮಿಸಿದ ಗುಡಿಸಲುಗಳಲ್ಲಿಯೇ ಜನರು ಸಾವಿರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಗಿನ ಕಾಲದ ಅವರ ಕ್ರಿಯಾತ್ಮಕ ಆಲೋಚನೆಗಳೇ ಅದಕ್ಕೆ ಮೂಲ ಕಾರಣ.

Ancient Monuments: ಪ್ರಾಚೀನ ರೋಮನ್ ಸ್ಮಾರಕಗಳು ಇನ್ನೂ ಗಟ್ಟಿಯಾಗಿ ಉಳಿದುಕೊಳ್ಳಲು ಕಾರಣ, ಸಂಶೋಧನೆ ಹೇಳುವುದೇನು?
ಸಾಂದರ್ಭಿಕ ಚಿತ್ರImage Credit source: Getty Images
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jan 13, 2023 | 2:49 PM

Share

ರೋಮನ್ ಸ್ಮಾರಕ(Roman Monuments)ಗಳ ವಾಸ್ತು ಶೈಲಿಗಳು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದ್ದು ಈಗಾಲೂ ಕೂಡ ಗಟ್ಟಿಯಾಗಿ ನಿಂತಿದೆ. ಇಂದು ನಿರ್ಮಿಸಲಾಗುವ ಆಧುನಿಕ ಕಾಂಕ್ರೀಟ್ ರಚನೆಗಳ ಕಟ್ಟಡಗಳು ಕೆಲವೇ ವರ್ಷಗಳಲ್ಲಿ ಬಿರುಕುಗಳಲ್ಲಿ ಉಂಟಾಗಿ ಸಾಕಷ್ಟು ಪ್ರಾಣ ಹಾನಿಯುಂಟಾಗಿರುವ ಅದೆಷ್ಟೋ ನಿದರ್ಶನಗಳನ್ನು ಕಂಡಿದ್ದೇವೆ. ಆದರೆ ಹಳೆಯ ಕಾಂಕ್ರೀಟ್ ರಚನೆಗಳ ಕಟ್ಟಡ ಬಿಡಿ, ಸಾಮಾನ್ಯವಾಗಿ ಹುಲ್ಲು ಮತ್ತು ಕಡ್ಡಿಗಳಿಂದ ನಿರ್ಮಿಸಿದ ಗುಡಿಸಲುಗಳಲ್ಲಿಯೇ ಜನರು ಸಾವಿರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆಗಿನ ಕಾಲದ ಅವರ ಕ್ರಿಯಾತ್ಮಕ ಆಲೋಚನೆಗಳೇ ಅದಕ್ಕೆ ಮೂಲ ಕಾರಣ.

ರೋಮನ್ ಸ್ಮಾರಕಗಳು ಇಂದಿನ ವರೆಗೂ ಅಷ್ಟೇ ಗಟ್ಟಿಯಾಗಿ ನಿಲ್ಲಲು ಕಾರಣವೇನು ಎಂಬುದಕ್ಕೆ ಅನೇಕ ಸಂಶೋಧನೆಗಳು ನಡೆದಿದೆ. ಪ್ರಾಚೀನ ರೋಮನ್ ಸ್ಮಾರಕಗಳ ಶ್ರೀಮಂತ ವಾಸ್ತು ಶೈಲಿಯೂ ಪ್ರತಿಯೊಬ್ಬರನ್ನು ಆಶ್ಚರ್ಯಚಕಿತರಾನ್ನಾಗಿ ಮಾಡುತ್ತದೆ. ಅಂದಿನ ರೋಮನ್ ಫೋರಂನ  ಪೂರ್ವದಲ್ಲಿ ಇರುವ ಕೊಲೊಸಿಯಮ್ ಎಂದು ಕರೆಯಲ್ಪಡುವ ಬೃಹತ್ ಕಲ್ಲಿನ ಆಂಫಿಥಿಯೇಟರ್ ಕ್ರಿಸ್ತಶಕ 70-72ರ ಸುಮಾರಿಗೆ ಫ್ಲೇವಿಯನ್ ರಾಜವಂಶದ ಚಕ್ರವರ್ತಿ ವೆಸ್ಪಾಸಿಯನ್ ಅವರು ರೋಮನ್ ಜನರಿಗೆ ಬಳುವಳಿಯಾಗಿ ನಿರ್ಮಿಸಿದರು. ಇದು ಈಗಲೂ ಕೂಡ ಗಟ್ಟಿಯಾಗಿ ನಿಂತಿದ್ದು , ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರೋಮನ್ ಸ್ಮಾರಕಗಳ ರಚನೆಯಲ್ಲಿ ಆ ಕಾಲದಲ್ಲಿ ಬಳಸುತ್ತಿದ್ದ ಕ್ರಿಯಾತ್ಮಕ ತಂತ್ರಗಳ ಬಗ್ಗೆ ಸಂಶೋಧಕರು ಸಂಶೋಧನೆಯಲ್ಲಿ ತೊಡಗಿದ್ದು, ಇದೀಗಾ ಉತ್ತರವನ್ನು ಕಂಡು ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಾವಿರಾರು ವರ್ಷಗಳ ವರೆಗಿನ ಕಟ್ಟಡಗಳು ಉಳಿಯಲು ಪೊಝೋಲಾನಿಕ್ ವಸ್ತು ಅಥವಾ ಜ್ವಾಲಾಮುಖಿಯ ಬೂದಿಗಳನ್ನು ಬಳಸಲಾಗುತ್ತಿತ್ತು ಎಂದು ಸಂಶೋಧಕರು ಗುರುತಿಸಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿಗೆ ನೀವು ಭೇಟಿ ನೀಡಬಹುದಾದ ಪ್ರದೇಶಗಳಿವು

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(MIT) ಸಂಸ್ಥೆಯ ಸಂಶೋಧಕರ ನೇತೃತ್ವದ ತಂಡವು ನಡೆಸಿದ ಅಧ್ಯಯನದ ಪ್ರಕಾರ ಪ್ರಾಚೀನ ಕಾಲದ ಕಾಂಕ್ರೀಟ್​​ಗಳಲ್ಲಿ ಬಿಳಿ ಖನಿಜ, ಸುಣ್ಣದ ಕ್ಲಾಸ್ಟ್‌ಗಳು ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಬಳಸಲಾಗುತ್ತಿದ್ದ ಖನಿಜಗಳ ಶಕ್ತಿ:

ಅಧ್ಯಯನದ ಪ್ರಕಾರ ಅಲ್ಯೂಮಿನಿಯಸ್ ಟೋಬರ್ಮೊರೈಟ್ನ ಹರಳುಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಇದು ಬಹುಪದರದ ಕ್ಯಾಲ್ಸಿಯಂ ಸಿಲಿಕೇಟ್ ಹೈಡ್ರೇಟ್ ಖನಿಜ. ಸಮುದ್ರದ ನೀರು ಜ್ವಾಲಾಮುಖಿಯ ಬೂದಿಯನ್ನು ಕರಗಿಸುವುದರಿಂದ ಈ ಹರಳು ರೂಪುಗೊಳ್ಳುತ್ತದೆ ಮತ್ತು ಕಾಂಕ್ರೀಟ್​​ನ್ನು ಸಾವಿರಾರು ವರ್ಷಗಳ ವರೆಗೆ ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಸ್ಲೇಕಿಂಗ್ ಎಂದು ಕರೆಯಲ್ಲಡುವ ಅಂದರೆ ಸುಣ್ಣವನ್ನು ರೋಮನ್ ಕಾಂಕ್ರೀಟ್‌ಗೆ ಸೇರಿಸಿ, ನೀರಿನೊಂದಿಗೆ ಸಂಯೋಜಿಸಿ ಪೇಸ್ಟ್ ತಯಾರಿಸುವುದು ಎಂದು ಹೇಳಲಾಗುತ್ತಿತ್ತು, ಆದರೆ ಇವರ ಎಮ್ ಐ ಟಿ ಸಂಶೋಧನೆಯ ಪ್ರಕಾರ ವಿವಿಧ ರೀತಿಯ ಕ್ಯಾಲ್ಸಿಯಂ ಕಾರ್ಬೋನೇಟ್‌ನಿಂದ ಬಿಳಿ ಸೇರ್ಪಡೆಗಳನ್ನು ಮಾಡಲಾಗಿದೆ ಮತ್ತು ತೀವ್ರ ತಾಪಮಾನದಲ್ಲಿ ರೂಪುಗೊಂಡಿದೆ ಎಂದು ತಂಡವು ಈಗ ನಿರ್ಧರಿಸಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: