Sawan Dutta: ಬೆಂಗಳೂರಿನ ಬಿಸಿ ಬೇಳೆಬಾತ್ ರೆಸಿಪಿ ಸಾಂಗ್ ಈಗ ಸಖತ್ತ್ ವೈರಲ್

2016 ರಲ್ಲಿ ಸಣ್ಣದಾಗಿ 'ದಿ ಮೆಟ್ರೊನೊಮ್' ಯುಟ್ಯೂಬ್ ಚಾನೆಲ್ ಪ್ರಾರಂಭಿಸಿದೆ, ಇದು ವಿಶ್ವಾದ್ಯಂತ ಜನಪ್ರಿಯವಾಗುತ್ತದೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ" ಎಂದು ದತ್ತಾ ಹೇಳುತ್ತಾರೆ.

Sawan Dutta: ಬೆಂಗಳೂರಿನ ಬಿಸಿ ಬೇಳೆಬಾತ್ ರೆಸಿಪಿ ಸಾಂಗ್ ಈಗ ಸಖತ್ತ್ ವೈರಲ್
ಸಾವನ್​ ದತ್ತ್Image Credit source: Telegraph India
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 24, 2022 | 4:05 PM

ವಿವಿಧ ರೀತಿಯ ರೆಸಿಪಿಗಳನ್ನು ತಮ್ಮ ಕ್ರಿಯೇಟಿವ್ ಹಾಡಿನ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಸಾವನ್ ದತ್ತ್, ಇದೀಗ ಬೆಂಗಳೂರಿನ ಪಾರಂಪರಿಕ ಬಿಸಿ ಬೇಳೆಬಾತ್ ರೆಸಿಪಿ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಪ್ರಾರಂಭದಲ್ಲಿ ಬೆಂಗಾಲಿ ಮೂಲದ ಆಹಾರಗಳ ಹಾಡುನ್ನು ಮಾಡುತ್ತಿದ್ದರು. ಆದರೆ ಇತ್ತೀಚೆಗೆ ವೈಯಕ್ತಿಕ ಕಾರಣಗಳಿಗಾಗಿ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಇದೀಗ ಕರ್ನಾಟಕದ ಕೆಲವೊಂದಿಷ್ಟು ಪಾರಂಪರಿಕ ರೆಸಿಪಿಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಏನಿದು ಬಿಸಿ ಬೇಳೆಬಾತ್ ಸಾಂಗ್? ಕರ್ನಾಟಕದ, ಅದರಲ್ಲೂ ಬೆಂಗಳೂರಿನ ಸಾಕಷ್ಟು ಜನರ ಬೆಳಗಿನ ಉಪಹಾರ ಎಂದರೆ ಮೊದಲಿಗೆ ಬರುವ ಹೆಸರೇ ಬಿಸಿ ಬೇಳೆಬಾತ್. ಈ ಬಿಸಿ ಬೇಳೆಬಾತ್ ಮಾಡುವ ವಿಧಾನದ ಕುರಿತು ಬಂದಿರುವ ಹಾಡೇ ಈ ಬಿಸಿ ಬೇಳೆಬಾತ್ ಸಾಂಗ್. ಇದು ಈಗ ಸಖತ್ತ್ ಫೇಮಸ್ ಆಗ್ತಾ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಶೈಲಿಯಲ್ಲಿ ವಿಭಿನ್ನ ರೀತಿಯ ಹಾಡುಗಳ ಮೂಲಕ ಜನ ಮೆಚ್ಚುಗೆ ಪಡೆದುರುವ ಸಾವನ್ ದತ್ತ್, ಇದೀಗಾ ತಮ್ಮ ದಿ ಮೆಟ್ರೊನೊಮ್ ಯುಟ್ಯೂಬ್ ಚಾನೆಲ್(THE METRONOME) ನಲ್ಲಿ ನವೆಂಬರ್ 17ರಂದು ಬಿಸಿ ಬೇಳೆಬಾತ್ ರೆಸಿಪಿ ಹಾಡು(BISI BELE BATH RECIPE SONG) ಬಿಡುಗಡೆ ಮಾಡಿದ್ದಾರೆ.

ಸಾವನ್ ದತ್ತ್ ಹಾಡಿನ ಮೂಲಕ ಬೆಂಗಳೂರಿನ ಬಿಸಿ ಬೇಳೆಬಾತ್ ರೆಸಿಪಿಯನ್ನು ವಿವರಿಸಿದ್ದಾರೆ. ಅದು ಈ ಕೆಳಗಿನಂತಿದೆ:

ಬೇಕಾಗುವ ಸಾಮಾಗ್ರಿಗಳು: ಬಿಸಿಬೇಳೆ ಬಾತ್ ಪುಡಿ 3 ಚಮಚ, ಹುಣಸೆ ರಸ 3 ಚಮಚ, ಬೆಲ್ಲ 1.5 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅನ್ನ 1/2 ಕಪ್, ಸೊಪ್ಪು 1/2 ಕಪ್, ಅರಿಶಿನ 1/4 ಚಮಚ, ತುಪ್ಪ 1 ಚಮಚ, ಕ್ಯಾರೆಟ್ 1/2 ಕಪ್, ಬಟಾಣಿ ಸಿಪ್ಪೆ 1/2 ಕಪ್, ಬೀನ್ಸ್ ಕತ್ತರಿಸಿದ 1/2 ಕಪ್, ಆಲೂಗಡ್ಡೆ 1, ಟೊಮೆಟೊ 1, ಸಾಸಿವೆ 1 ಟೀಸ್ಪೂನ್, ಒಣ ಕೆಂಪು ಮೆಣಸಿನಕಾಯಿ 2, ಕರಿಬೇವಿನ ಎಲೆಗಳು 1 ಚಿಗುರು, , ಗೋಡಂಬಿ 1 ಚಮಚ.

ಬಿಸಿ ಬೇಳೆ ಬಾತ್ ಪೌಡರ್ ಸಾಮಾಗ್ರಿಗಳು: ಬೇಳೆ ಕಾಳು 1 ಚಮಚ, ಉದ್ದಿನ ಬೇಳೆ 1 ಚಮಚ, ಒಣ ಕೆಂಪು ಮೆಣಸಿನಕಾಯಿಗಳು – ರುಚಿಗೆ, ಕೊತ್ತಂಬರಿ ಬೀಜಗಳು ಅರ್ಧ ಚಮಚ, ಮೆಂತ್ಯ ಬೀಜಗಳು 2 ಚಿಟಿಕೆ, ಜೀರಿಗೆ 1 ಚಮಚ, ದಾಲ್ಚಿನ್ನಿ 2 ಇಂಚು, ಲವಂಗ 3, ಲವಂಗ 3 ಚಮಚ , ಅರಿಶಿನ 1/4 ಚಮಚ.

ಬಿಸಿ ಬೇಳೆ ಬಾತ್ ಮಾಡುವ ವಿಧಾನ: ಬೇಳೆ ಕಾಳು, ಮೆಣಸಿನಕಾಯಿ, ಕೊತ್ತಂಬರಿ, ಮೆಂತ್ಯ, ಜೀರಿಗೆ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಗಸಗಸೆ ಹುರಿಯಿರಿ. ಸ್ವಲ್ಪ ಹೊತ್ತು ಅದನ್ನು ತಣ್ಣಗಾಗಿಸಿ. ನಂತರ ಇಂಗು, ಅರಿಶಿನ ಸೇರಿಸಿ ಚೆನ್ನಾಗಿ ರುಬ್ಬಿ. ಇದಲ್ಲದೇ ಸಿದ್ಧ ಮಿಶ್ರಣವನ್ನು (ಬಿಸಿಬೇಳೆ ಬಾತ್ ಪುಡಿ) ಖರೀದಿಸಬಹುದು. ನಂತರ ಈರುಳ್ಳಿ, ಕ್ಯಾರೆಟ್, ಬಟಾಣಿ, ಬೀನ್ಸ್, ಆಲೂಗಡ್ಡೆ, ಟೊಮೆಟೊ ಚೆನ್ನಾಗಿ ಕತ್ತರಿಸಿ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಫ್ರೈ ಮಾಡಿ ಹಾಗೂ ಅದಕ್ಕೆ ನೀರು ಸೇರಿಸಿ. ಜೊತೆಗೆ ತೊಳೆದಿಟ್ಟ ಬೇಳೆ ಕಾಳು ಮತ್ತು ಅಕ್ಕಿ ಸೇರಿಸಿ. ಇದಕ್ಕೆ ಅರಿಶಿನ, ಹುಣಸೆ ಹಣ್ಣಿನ ರಸ, ಬೆಲ್ಲ ಮತ್ತು ಉಪ್ಪಿ ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ಮೆಣಸಿನಕಾಯಿ, ಸಾಸಿವೆ, ಕರಿಬೇವಿನ ಎಲೆ, ಗೋಡಂಬಿಯನ್ನು ತುಪ್ಪದಲ್ಲಿ ಹುರಿಯಿರಿ. ನಿಮ್ಮ ಬಿಸಿ ಬೇಳೆ ಬಾತ್ ನಿಮಗಾಗಿ ಸಿದ್ಧವಾಗಿದೆ.

ಇದನ್ನು ಓದಿ: ಈ ಚಳಿಗಾಲದಲ್ಲಿ ನಿಮ್ಮ ಸಂಜೆಯ ಕಾಫಿಗೆ ಪನ್ನೀರ್ ಬಳಸಿ ಮಾಡಿದ ಐದು ರೆಸಿಪಿ ಇಲ್ಲಿದೆ

2016 ರಲ್ಲಿ ದಿ ಮೆಟ್ರೊನೊಮ್ ಯುಟ್ಯೂಬ್ ಚಾನೆಲ್ ಪ್ರಾರಂಭಿಸಿದೆ. ಇದು ವಿಶ್ವಾದ್ಯಂತ ಜನಪ್ರಿಯವಾಗುತ್ತದೆ ಎಂದು ನಾನು ಕನಸು ಕಂಡಿರಲಿಲ್ಲ” ಎಂದು ದತ್ತಾ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 4:04 pm, Thu, 24 November 22