Monsoon Food: ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಕಾಲೋಚಿತ ಹಣ್ಣುಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 18, 2023 | 6:56 PM

ಮಳೆಗಾಲದಲ್ಲಿ ಜನರು ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಹಾಗೂ ಸೋಂಕುಗಳಿಂದ ಉಂಟಾಗುವ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಹಣ್ಣುಗಳು ಸಹಕಾರಿಯಾಗಿದೆ. ಮಳೆಗಾಲದಲ್ಲಿ ನೀವು ಸೇವಿಸಬೇಕಾದ ಹಣ್ಣುಗಳ ಪಟ್ಟಿ ಇಲ್ಲಿದೆ.

Monsoon Food: ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ನೀವು ತಿನ್ನಲೇಬೇಕಾದ ಕಾಲೋಚಿತ ಹಣ್ಣುಗಳು
ಸಾಂದರ್ಭಿಕ ಚಿತ್ರ
Follow us on

ಮಳೆಗಾಲವು ನಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ತೊಡಕುಂಟುಮಾಡುವ ಅನಾರೋಗ್ಯದ ಸಮಯವಾಗಿದೆ. ಮಳೆಗಾಲದ ಸಮಯದಲ್ಲಿ ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ವಿಧಾನವೆಂದರೆ ಜಾಗರೂಕ ಆಹಾರ ಕ್ರಮವನ್ನು ಪಾಲಿಸುವುದು. ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯವನ್ನು ಹೆಚ್ಚಿಸುವ ಪೋಷಕಾಂಶಗಳಲ್ಲಿ ಸಮೃದ್ಧವವಾಗಿರುವ ಆಹಾರವನ್ನು ಸೇವಿಸುವುದರಿಂದ ಬಲವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ. ಮಳೆಗಾಲದಲ್ಲಿ ಉತ್ಪತ್ತಿಯಾಗುವ ಸೋಂಕುಗಳ ಕಾರಣದಿಂದಾಗಿ ಈ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವು ಹೆಚ್ಚಿರುತ್ತದೆ. ಹಾಗಾಗಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಶುದ್ಧ ನೀರನ್ನು ಕುಡಿಯುವುದು ಮತ್ತು ಉತ್ತಮ ರೋಗನಿರೋಧಕ ಶಕ್ತಿಗಾಗಿ ಅರೋಗ್ಯಕರ ಆಹಾರದ ಜೊತೆಗೆ ಕೆಲವೊಂದು ಹಣ್ಣುಗಳನ್ನು ಸೇವಿಸುವುದು ಅತ್ಯಗತ್ಯ.

ಮಳೆಗಾಲದ ಸಮಯದಲ್ಲಿ ನೀವು ತಿನ್ನಲೇಬೇಕಾದ ಹಣ್ಣುಗಳು:

ಪೀಚ್:

ಪೀಚ್ ಮಳೆಗಾಲದಲ್ಲಿ ತಿನ್ನಲು ಉತ್ತಮವಾದ ಹಣ್ಣಾಗಿದೆ. ಈ ಹಣ್ಣು ಜೀವಸತ್ವಗಳು, ಪೊಟ್ಯಾಸಿಯಂ, ಫೋಲೇಟ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿಂದ ತುಂಬಿದೆ. ಈ ಎಲ್ಲಾ ಪೋಷಕಾಂಶಗಳು ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪೀಚ್ ಕ್ಯಾರೋಟಿನಾಯ್ಡ್ ಗಳು ಮತ್ತು ಬೀಟಾ ಕ್ಯಾರೋಟಿನ್ ಗಳನ್ನು ಹೊಂದಿದೆ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಇದಲ್ಲದೆ ಈ ಹಣಿನಲ್ಲಿ ಆಸ್ಕೋರ್ಬಿನ್ ಆಮ್ಲ ಮತ್ತು ಸತುವು ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೀಚ್ ಗಳಲ್ಲಿ ಕಂಡುಬರುವ ವಿಟಮಿನ್ ಸಿ ಅಂಶ ನಮ್ಮ ದೇಹ ಋತುಮಾನದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಲಿಚಿ:

ಈ ಹಣ್ಣಿನಲ್ಲಿ ಉತ್ತಮ ಪ್ರಮಾಣ ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿವೆ. ಲಿಚಿಯಲ್ಲಿ ವಿಟಮಿನ್ ಸಿ ಮತ್ತು ಆಸ್ಕೋರ್ಬಿನ್ ಆಮ್ಲವಿದೆ. ಇದರಲ್ಲಿನ ವಿಟಮಿನ್ ಸಿ ಬಿಳಿ ರಕ್ತ ಕಣಗಳ ಸರಿಯಾದ ಉತ್ಪಾದನೆ ಸಹಾಯ ಮಾಡುತ್ತದೆ. ಹಾಗೂ ಈ ಹಣ್ಣಿನ ಸೇವನೆಯಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಬಹುದು. ಲಿಚಿಯ ಇತರ ಆರೋಗ್ಯ ಪ್ರಯೋಜನಗಳೆಂದರೆ, ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಲಿಚಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ.

ಪ್ಲಮ್:

ಪ್ಲಮ್ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಮತ್ತು ಮಾನ್ಸೂನ್ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದು. ಈ ಹಣ್ಣಿನಲ್ಲಿ ವಿಟಮಿನ್ ಸಿ, ಕೆ ಹಾಗೆಯೇ ಪೊಟ್ಯಾಸಿಯಂ, ಫೈಬರ್ ಅಂಶಗಳು ಹೇರಳವಾಗಿದ್ದು, ಅವುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಕಡ್ಡಾಯವಾಗಿ ಮಳೆಗಾಲದಲ್ಲಿ ಪ್ಲಮ್ ತಿನ್ನಬೇಕು.

ಇದನ್ನೂ ಓದಿ:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು

ಚೆರ‍್ರಿ:

ಇವು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದು, ಮಳೆಗಾಲದಲ್ಲಿ ತಿನ್ನಲು ಯೋಗ್ಯವಾದ ಹಣ್ಣು. ಮತ್ತು ಈ ಹಣ್ಣು ಉತ್ತಮ ಪ್ರಮಾಣದ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿದೆ. ಚೆರ‍್ರಿಗಳಲ್ಲಿ ಉತ್ತಮ ಪ್ರಮಾಣದ ಮೆಲಟೋನಿನ್ ಎಂಬ ಕಿಣ್ವವು ಕಂಡುಬರುತ್ತದೆ, ಇದು ದೇಹವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ವಿವಿಧ ಸೋಂಕುಗಳು ಮತ್ತು ಸೌಮ್ಯ ಕಾಯಿಲೆಗಳ ವಿರುದ್ಧ ನಮ್ಮನ್ನು ಕಾಪಾಡುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಚೆರ್ರಿ ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.

ನೇರಳೆ ಹಣ್ಣು:

ನೇರಳೆ ಹಣ್ಣು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿರುತ್ತದೆ ಮತ್ತು ಕಬ್ಬಿಣ, ಫೋಲೇಟ್ ಪೊಟ್ಯಾಸಿಯಂ ಮತ್ತು ವಿಟಮಿನ್​​​ಗಳಿಂದ ಸಮೃದ್ಧವಾಗಿದೆ. ಮಳೆಗಾಲದಲ್ಲಿ ಈ ಹಣ್ಣನ್ನು ಸೇವಿಸಬೇಕು. ಏಕೆಂದರೆ ಇದು ಸಾಮಾನ್ಯವಾಗಿ ಮಳೆಗಾಲದಲ್ಲಿ ಸಂಭವಿಸುವ ರೋಗಗಳು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.