ಗೆಳೆತನದಲ್ಲಿ ಹೀಗಾಗುತ್ತಿದೆಯೇ? ಹಾಗಾದರೆ ಅಂತಹ ಫ್ರೆಂಡ್​ಶಿಪ್​ಗೆ ಬೈ ಬೈ ಹೇಳುವುದು ಒಳ್ಳೆಯದು!

| Updated By: shivaprasad.hs

Updated on: Apr 08, 2022 | 6:00 AM

Friendship: ಎಷ್ಟೋ ಜನರಿಗೆ ಹೀಗೆ ಗೆಳೆತನವು ಸರಿಹೊಂದುತ್ತಿಲ್ಲ ಎನ್ನುವುದು ಮೊದಮೊದಲಿಗೆ ತಿಳಿಯುವುದೇ ಇಲ್ಲ. ಅವರು ಸಾಕಷ್ಟು ಸಮಯಗಳ ಕಾಲ ಮಾನಸಿಕ ತೊಳಲಾಟ ಅನುಭವಿಸುತ್ತಾರೆ. ಆದ್ದರಿಂದ ನಿಮ್ಮ ಗೆಳೆತನ/ ಸ್ನೇಹ ಯಾಕೋ ಸರಿಹಾದಿಯಲ್ಲಿ ಇಲ್ಲ ಎಂದು ಗೊಂದಲವಾಗುತ್ತಿರುವವರಿಗೆ ಟಿಪ್ಸ್ ಇಲ್ಲಿದೆ.

ಗೆಳೆತನದಲ್ಲಿ ಹೀಗಾಗುತ್ತಿದೆಯೇ? ಹಾಗಾದರೆ ಅಂತಹ ಫ್ರೆಂಡ್​ಶಿಪ್​ಗೆ ಬೈ ಬೈ ಹೇಳುವುದು ಒಳ್ಳೆಯದು!
ಪ್ರಾತಿನಿಧಿಕ ಚಿತ್ರ
Follow us on

ಎಲ್ಲಾ ಗೆಳೆತನಗಳು (Friendship) ಜೀವಮಾನವಿಡೀ ಉಳಿಯುವಂಥದ್ದಲ್ಲ. ಕೆಲವೇ ಕೆಲವು ಮಾತ್ರ ಜೀವನುದುದ್ದಕ್ಕೂ ಮುಂದುವರೆಯುತ್ತವೆ. ಪ್ರತಿ ದಿನವೂ ನಾವು ಹಲವರನ್ನು ಭೇಟಿಯಾಗುತ್ತೇವೆ. ಅದರಲ್ಲಿ ಕೆಲವರು ಮಾತ್ರ ನಮಗೆ ಪರಿಷಯವಾಗುತ್ತಾರೆ. ಅದರಲ್ಲಿ ಕೆಲವರು ಆಪ್ತರಾಗುತ್ತಾರೆ. ಅದರಲ್ಲಿ ಬೆರಳಣಿಕೆಯಷ್ಟು ಜನ ಜೀವಮಾನವಿಡೀ ಸ್ನೇಹಿತರಾಗಿ ನಮ್ಮ ಜತೆ ಉಳಿಯುತ್ತಾರೆ. ಎಷ್ಟೋ ಬಾರಿ ನಮಗೆ ಸ್ನೇಹದ ಬಗ್ಗೆ ಗೊಂದಲ ಮೂಡುತ್ತದೆ. ಮತ್ತೋರ್ವ ವ್ಯಕ್ತಿಯೊಂದಿಗೆ ನಮ್ಮ ಬಂಧ ಸರಿಹೊಂದುತ್ತಿಲ್ಲ ಎನಿಸುತ್ತದೆ. ಅಥವಾ ಈ ಸ್ನೇಹ ಯಾಕೋ ಕೂಡಿ ಬರುತ್ತಿಲ್ಲ ಎನಿಸುತ್ತದೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಎಷ್ಟೋ ಜನರಿಗೆ ಹೀಗೆ ಗೆಳೆತನವು ಸರಿಹೊಂದುತ್ತಿಲ್ಲ ಎನ್ನುವುದು ಮೊದಮೊದಲಿಗೆ ತಿಳಿಯುವುದೇ ಇಲ್ಲ. ಅವರು ಸಾಕಷ್ಟು ಸಮಯಗಳ ಕಾಲ ಮಾನಸಿಕ ತೊಳಲಾಟ ಅನುಭವಿಸುತ್ತಾರೆ. ಆದ್ದರಿಂದ ನಿಮ್ಮ ಗೆಳೆತನ/ ಸ್ನೇಹ ಯಾಕೋ ಸರಿಹಾದಿಯಲ್ಲಿ ಇಲ್ಲ ಎಂದು ಗೊಂದಲವಾಗುತ್ತಿರುವವರಿಗೆ ಟಿಪ್ಸ್ ಇಲ್ಲಿದೆ. ಇದನ್ನು ಓದಿ, ನಿಮ್ಮ ಗೆಳೆತನದ ಬಗ್ಗೆ ನಿರ್ಧಾರ ಕೈಗೊಳ್ಳಬಹುದು.

  1. ನೀವು ನಿಮ್ಮ ಸ್ನೇಹಿತನೊಂದಿಗೆ ಸಮಯ ಕಳೆಯಲು ನೀವು ಹಿಂದೆ ಸರಿಯುತ್ತೀರಿ ಅಥವಾ ನಿಮ್ಮ ಸ್ನೇಹಿತನೊಂದಿಗೆ ಇದ್ದಾಗ ನಿಮಗೆ ಕಿರಿಕಿರಿಯಾಗುತ್ತಿದೆ ಎಂದಾದಾಗ ನಿಮ್ಮ ಗೆಳೆತನದಲ್ಲಿ ಏನೋ ಸಮಸ್ಯೆಯಾಗಿದೆ ಎಂದರ್ಥ. ಜತೆಗೆ ಮೊದಲಿನಂತೆ ನಿಮಗೆ ಗೆಳೆಯರೊಂದಿಗೆ ಏನನ್ನೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಾದಾಗ ಸ್ನೇಹ ಕೊನೆಯ ಹಂತಕ್ಕೆ ಬಂದಿದೆ ಎನ್ನಬಹುದು.
  2. ಸ್ನೇಹಿತರ ಜತೆಯಿದ್ದಾಗ ಮನಸ್ಸಿಗೆ ಕಸಿವಿಸಿ: ಸ್ನೇಹಿತರ ಸಾಮೀಪ್ಯ ಬಹಳ ಮುಖ್ಯವಾಗುತ್ತದೆ. ಆದರೆ ನಿಮಗೆ ನಿಮ್ಮ ಸ್ನೇಹಿತರ ಸಂಘದಲ್ಲಿ ಕಿರಿಕಿರಿ ಅನ್ನಿಸಿದರೆ ಅಥವಾ ನಿಮ್ಮ ಸ್ನೇಹಿತರ ಮಾತುಗಳು ಲವಲವಿಕೆ ಮೂಡಿಸುವುದಕ್ಕಿಂತ ಕೋಪ ಉಂಟುಮಾಡುತ್ತಿದ್ದರೆ ಸ್ನೇಹ ಬಿರುಕು ಮೂಡಿದೆ ಎಂದರ್ಥ.
  3. ನೀವು ಬದಲಾಗಿದ್ದೀರಿ, ಹಳೆಯ ಗೆಳೆತನ ಹೊಂದಿಕೆಯಾಗುತ್ತಿಲ್ಲ: ನಮ್ಮ ಜೀವನದುದ್ದಕ್ಕೂ ನಾವು ವಿಕಸನಗೊಳ್ಳುತ್ತಲೇ ಇರುತ್ತೇವೆ. ಈ ಪ್ರಕ್ರಿಯೆಯಲ್ಲಿ ಕೆಲವು ಜನರಿಂದ ದೂರ ಸರಿಯಬೇಕಾಗುವ ಸಂದರ್ಭ ಬರಬಹುದು. ಈ ಹಿನ್ನೆಲೆಯಲ್ಲಿ ಹೊಂದಾಣಿಕೆ ಕಷ್ಟಸಾಧ್ಯವಾಗಬಹುದು.
  4. ನಿಮ್ಮ ಸ್ನೇಹಿತರ ಕರೆಗಳು ಮತ್ತು ಮೆಸೇಜ್​ಗಳನ್ನು ನೀವು ತಪ್ಪಿಸುತ್ತೀರಿ: ನಿಮಗೆ ಗೆಳೆತನ ಹೊಂದಾಣಿಕೆಯಾಗದಿದ್ದಾಗ ನೀವು ಅವರನ್ನು ತಪ್ಪಿಸಲು ಆರಂಭಿಸುತ್ತೀರಿ. ಫೋನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ಮೆಸೇಜ್​ಗಳಿಗೆ ಉತ್ತರಿಸುವುದಿಲ್ಲ.
  5. ವಿಷಯಗಳನ್ನು ಹಂಚಿಕೊಳ್ಳಲು ಯೋಚಿಸುತ್ತೀರಿ: ನೀವು ಯಾವುದೇ ಒಳ್ಳೆಯ ಸುದ್ದಿ ಅಥವಾ ಸಾಮಾನ್ಯವಾಗಿ ಯಾವುದೇ ಹೊಸ ಸುದ್ದಿಯನ್ನು ಅವರೊಂದಿಗೆ ಹಂಚಿಕೊಳ್ಳಲು ಹಿಂಜರಿಯುತ್ತೀರಿ.
  6. ಅಭಿರುಚಿ ಭಿನ್ನವಾಗುತ್ತವೆ: ಕಾಲ ಸರಿದಂತೆ ನಮ್ಮ ಅಭಿರುಚಿ ಬದಲಾಗುತ್ತದೆ. ಇದೇ ಕಾರಣಕ್ಕೆ ಗೆಳೆಯರ ಸಹವಾಸ ಹಳತು ಎನ್ನಿಸಬಹುದು. ಜತೆಗೆ ಯಾವುದೇ ಸಮಾನ ಆಸಕ್ತಿ ಇರದಿದ್ದಾಗ ಮಾತುಗಳು ಕಡಿಮೆಯಾಗುತ್ತವೆ.
  7. ಸ್ನೇಹಿತರಿಗೆ ಅಗೌರವ: ನೀವು ನಿಮ್ಮ ಸ್ನೇಹಿತರನ್ನು ಅಗೌರವಿಸಲು ಆರಂಭಿಸಿದ್ದೀರಿ ಎಂದಾದರೆ ಅದು ಸ್ನೇಹದಲ್ಲಿ ಮೂಡಿರುವ ಬಿರುಕನ್ನು ಢಾಳಾಗಿ ತೋರಿಸುತ್ತದೆ.
  8. ಪರಸ್ಪರ ಪೂರಕವಾಗಿಲ್ಲದಿರುವುದು: ಸ್ನೇಹದಲ್ಲಿ ಯಾವುದೇ ನಿರೀಕ್ಷೆಗಳಿರಬಾರದು. ಆದರೆ ಸಹಕಾರ ಅತ್ಯಂತ ಮುಖ್ಯವಾಗಿರುತ್ತದೆ. ಕೇವಲ ನಿಮ್ಮ ಕಡೆಯಿಂದ ಮಾತ್ರ ಸಹಕಾರ ನೀಡಲಾಗುತ್ತಿದ್ದರೆ, ಸ್ನೇಹಿತರು ಉಪಕಾರ ಪಡೆದ ನಂತರ ಮರೆಯಾಗುತ್ತಾರೆ ಎಂದಾದರೆ ನಿಮಗೆ ಬೇಸರವಾಗಿರುತ್ತದೆ. ಅಂತಹ ಗೆಳೆಯರಿಂದ ದೂರ ಸರಿಯುವುದು ವೈಯಕ್ತಿಕ ಬೆಳವಣಿಗೆಗೆ ಒಳ್ಳೆಯದು.

ಇದನ್ನೂ ಓದಿ:

Pushpa Movie: ನಾನು ಬರೆಯೋದಿಲ್ಲ!; ವಿದ್ಯಾರ್ಥಿಯ ಉತ್ತರ ಪತ್ರಿಕೆಯಲ್ಲಿ ಪುಷ್ಪ ಸಿನಿಮಾದ ಡೈಲಾಗ್ ನೋಡಿ ಶಿಕ್ಷಕರು ಕಂಗಾಲು

World Health Day 2022: ವಿಶ್ವ ಆರೋಗ್ಯ ದಿನದ ವಿಶೇಷತೆ ಏನು? ಉತ್ತಮ ಆರೋಗ್ಯಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ