Beauty Tips in Kannada : ಹೊಳಪುಳ್ಳ ತ್ವಚೆ ನಿಮ್ಮದಾಗಬೇಕೇ? ಹೀಗೆ ಮಾಡಿ

ಸೌಂದರ್ಯ ಎಂದರೆ ಮೊದಲು ನೆನಪಾಗುವುದೇ ಹೆಂಗಳೆಯರು. ಸಹಜವಾಗಿ ಹೆಣ್ಣು ಮಕ್ಕಳು ಮುಖದ ಅಂದದ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಎಲ್ಲರಿಗೂ ಕೂಡ ಸಿಲ್ಕಿ ಸ್ಕಿನ್ ನನ್ನು ಹೊಂದಬೇಕು ಎನ್ನುವ ಆಸೆಯಿರುತ್ತದೆ. ಹೀಗಾಗಿ ರೇಷ್ಮೆಯಂತಹ ತ್ವಚೆಯನ್ನು ಪಡೆಯಲು ನಾನಾ ರೀತಿಯ ಸೌಂದರ್ಯ ವರ್ಧಕ ಗಳನ್ನು ಬಳಕೆ ಮಾಡುವವರೇ ಹೆಚ್ಚು. ಆದರೆ ಹಾಲಿಗೆ ಈ ವಸ್ತುಗಳನ್ನು ಬೆರೆಸಿ ನೈಸರ್ಗಿಕವಾದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿದರೆ ಮುಖದ ಹೊಳಪನ್ನು ಹೆಚ್ಚಿಸಬಹುದು.

Beauty Tips in Kannada : ಹೊಳಪುಳ್ಳ ತ್ವಚೆ ನಿಮ್ಮದಾಗಬೇಕೇ? ಹೀಗೆ ಮಾಡಿ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 17, 2024 | 4:46 PM

ಇಂದಿನ ಬದಲಾದ ಜೀವನ ಶೈಲಿ ಹಾಗೂ ಒತ್ತಡ ಭರಿತ ಜೀವನದಿಂದಾಗಿ ಸೌಂದರ್ಯವೆನ್ನುವುದು ಬೇಗನೇ ಮಾಸಿ ಹೋಗುತ್ತಿದೆ. ವಯಸ್ಸಾದಂತೆ, ಚರ್ಮದಲ್ಲಿ ಕಾಲಜನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಇದರಿಂದಾಗಿ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತದೆ. ಮುಖದ ಮೇಲಿನ ಸುಕ್ಕುಗಳನ್ನು ಹೋಗಲಾಡಿಸಲು ಹಾಲನ್ನು ಈ ರೀತಿಯಾಗಿ ಬಳಸಿದರೆ ನಿಮ್ಮ ಸೌಂದರ್ಯವು ಇಮ್ಮಡಿಯಾಗುವುದು ಖಂಡಿತ.

ಹಾಲಿನಿಂದ ತಯಾರಿಸಬಹುದಾದ ಫೇಸ್ ಫ್ಯಾಕ್ ಗಳು:

* ಹಸಿ ಹಾಲು : ಒಂದು ಬಟ್ಟಲಿನಲ್ಲಿ ಹಸಿ ಹಾಲನ್ನು ತೆಗೆದುಕೊಂಡು, ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಂಡು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಂಡು ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಹತ್ತು ನಿಮಿಷಗಳ ನಂತರ ನಿಮ್ಮ ಮುಖವನ್ನು ತೊಳೆದರೆ ಮುಖದಲ್ಲಿರುವ ಕೊಳೆ ಮತ್ತು ಸತ್ತ ಜೀವಕೋಶಗಳು ಮಾಯಾವಾಗಿ ತ್ವಚೆಯ ಚರ್ಮವು ಹೊಳೆಯುತ್ತದೆ.

* ಆಲೋವೆರಾ ಜೆಲ್ ಹಾಗೂ ಹಸಿ ಹಾಲು : ಒಂದು ಬಟ್ಟಲಿನಲ್ಲಿ ಆಲೋವೆರಾ ಜೆಲ್ ಮತ್ತು ಹಸಿ ಹಾಲನ್ನು ತೆಗೆದುಕೊಂಡು, ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಕುತ್ತಿಗೆ, ಕೈ, ಮುಖಕ್ಕೆ ಹಚ್ಚಿಕೊಂಡು, ಮಸಾಜ್ ಮಾಡಿ. 15 ನಿಮಿಷಗಳ ಕಾಲ ಬಿಟ್ಟು ತ್ವಚೆ ತೊಳೆದರೆ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

* ಬಾಳೆಹಣ್ಣು ಹಾಗೂ ಹಾಲು : ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಒಂದು ಬಟ್ಟಲಿನಲ್ಲಿ ಹಾಕಿ, ಅದಕ್ಕೆ ಹಸಿ ಹಾಲು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ, ಕುತ್ತಿಗೆ ಮತ್ತು ಕೈಗಳಿಗೆ ಅನ್ವಯಿಸಿ, 10-15 ನಿಮಿಷಗಳ ನಂತರ ಮುಖವನ್ನು ತೊಳೆದರೆ ಮುಖದ ಕಾಂತಿಯೂ ಹೆಚ್ಚಾಗುತ್ತದೆ.

ಇದನ್ನೂ ಓದಿ: ಬಿಸಿಲಲ್ಲಿ ಸೆಖೆ ತಾಳಲಾರದೆ ಐಸ್ ನೀರು ಕುಡಿಯುತ್ತೀರಾ?

* ಹಸಿಹಾಲು ಹಾಗೂ ಜೇನುತುಪ್ಪ : ಒಂದು ಬಟ್ಟಲಿನಲ್ಲಿ ಹಸಿ ಹಾಲು ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿಕೊಳ್ಳಬೇಕು. 10 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ರೇಷ್ಮೆಯಂತಹ ತ್ವಚೆ ನಿಮ್ಮದಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್