ಹೆಣ್ಣು ಮಕ್ಕಳಿಗೆ ಮುಖದ ಮೇಲೆ ಒಂದೋ ಎರಡೋ ಮೊಡವೆಗಳು ಕಾಣಿಸಿಕೊಂಡರೆ ಆಕಾಶವೇ ತಲೆ ಮೇಲೆ ಬಿದ್ದವರಂತೆ ವರ್ತಿಸುತ್ತಾರೆ. ಬೆನ್ನ ಮೇಲೆ ಮೊಡವೆಗಳು ಕಾಣಿಸಿಕೊಂಡರೆ, ಬೆನ್ನ ಮೇಲಿನ ಮೊಡವೆಗಳು ತುರಿಕೆ ಹಾಗೂ ಉರಿಯಂತಹ ಸಮಸ್ಯೆಯನ್ನು ಉಂಟು ಮಾಡಬಹುದು. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಬೆನ್ನ ಮೇಲಿನ ಮೊಡವೆಯನ್ನು ತೊಡೆದು ಹಾಕಲು ಈ ಮನೆ ಮದ್ದುಗಳನ್ನು ಬಳಸಬಹುದು.
ಬೆನ್ನ ಮೇಲಿನ ಮೊಡವೆ ನಿವಾರಣೆಗೆ ಮನೆಮದ್ದುಗಳಿವು:
- ಟೊಮೆಟೊವನ್ನು ಅರ್ಧದಷ್ಟು ಕತ್ತರಿಸಿ, ಅದನ್ನು ಬೆನ್ನಿನ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಬಿಡಬೇಕು. ಆ ಬಳಿಕ ತಣ್ಣೀರಿನಿಂದ ತೊಳೆದರೆ ಬೆನ್ನಿನ ಮೇಲಿನ ಮೊಡವೆ ಹಾಗೂ ಕಲೆಗಳು ಕಡಿಮೆಯಾಗುತ್ತದೆ.
- ನಿಂಬೆ ರಸ ಮತ್ತು ರೋಸ್ ವಾಟರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಬೆನ್ನಿನ ಮೇಲೆ ಹಚ್ಚಿ 30 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯುವುದು ಪರಿಣಾಮಕಾರಿಯಾಗಿದೆ.
- ಅಲೋವೆರಾ ಜೆಲ್ ಚರ್ಮಕ್ಕೆ ಒಳ್ಳೆಯದು. ಹೀಗಾಗಿ ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಫ್ರಿಜ್ನಲ್ಲಿಡಿ. ತಣ್ಣಗಾದ ಈ ಜೆಲ್ ಅನ್ನು ಮೊಡವೆ ಇರುವ ಜಾಗಕ್ಕೆ ಅನ್ವಯಿಸಿ ಅರ್ಧ ಘಂಟೆಯ ನಂತರ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
- ಜೇನುತುಪ್ಪ ಮತ್ತು ದಾಲ್ಚಿನ್ನಿ ಮಿಶ್ರಣದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ಒಂದು ಚಮಚ ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಮೊಡವೆಗಳ ಮೇಲೆ ಹಚ್ಚಬೇಕು. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ತೊಳೆದರೆ ಸಾಕು ಬೆನ್ನ ಮೇಲಿನ ಮೊಡವೆಗಳು ಕಡಿಮೆಯಾಗುತ್ತದೆ.
- ತ್ವಚೆಯ ಆರೈಕೆಯಲ್ಲಿ ಗ್ರೀನ್ ಟೀ ಕೂಡ ಉಪಯುಕ್ತವಾಗಿದೆ. ಒಂದು ಲೋಟ ಗ್ರೀನ್ ಟೀ ತಯಾರಿಸಿ, ಅದರಲ್ಲಿ ಹತ್ತಿಯನ್ನು ಅದ್ದಿ ಬೆನ್ನ ಮೇಲಿನ ಮೊಡವೆಗಳ ಮೇಲೆ ಹಚ್ಚಿದರೆ ಈ ಸಮಸ್ಯೆಯೂ ಶಮನವಾಗುತ್ತದೆ.
ಈ ಮನೆ ಮದ್ದನ್ನೊಮ್ಮೆ ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆಯುವುದು ಉತ್ತಮ.
ಇದನ್ನೂ ಓದಿ: ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ, ಈ ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಲೇಬೇಡಿ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: