Love Tips : ನೀವೆಷ್ಟೇ ಇಂಪ್ರೆಸ್ ಮಾಡಿದ್ರು ಹುಡುಗಿಯೂ ಬೀಳ್ತಿಲ್ವಾ? ಇಲ್ಲಿದೆ ಸಿಂಪಲ್ ಟಿಪ್ಸ್
ಏನು ಗುರು ನಮಗೆಲ್ಲಾ ಯಾವ ಹುಡುಗಿ ಬೀಳ್ತಾರೆ ಎಂದು ಹೇಳುವ ಹುಡುಗರನ್ನು ನೋಡಿರಬಹುದು. ಈ ಹುಡುಗಿಯರು ಅಷ್ಟು ಸುಲಭವಾಗಿ ಯಾವುದೇ ಹುಡುಗನ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಹುಡುಗರಲ್ಲಿರುವ ಈ ಕೆಲವು ಗುಣಗಳು ಹುಡುಗಿಯರು ಪ್ರೀತಿಯಲ್ಲಿ ಬೀಳಲು ಕಾರಣವಾಗುತ್ತದೆ. ಒಂದು ವೇಳೆ ಹುಡುಗಿಯನ್ನು ಇಂಪ್ರೆಸ್ ಮಾಡಿ ಬೇಸೆತ್ತು ಹೋಗಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.
ತಾನು ಇಷ್ಟ ಪಡುವ ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗನು ನಾನಾ ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಬ್ರಾಂಡೆಡ್ ಡ್ರೆಸ್ ತೊಟ್ಟು ಆಕೆಯ ಮುಂದೆ ಮಂಡಿಯೂರಿ ಪ್ರೇಮನಿವೇದನೆ ಮಾಡಿಕೊಂಡರೆ ಒಪ್ಪಿಕೊಂಡು ಬಿಡುತ್ತಾಳೆ ಎನ್ನುವುದು ತಪ್ಪು. ಈಗಿನ ಕಾಲದ ಹುಡುಗಿಯರು ಇಂತಹದ್ದಕ್ಕೆಲ್ಲಾ ಬೀಳುವವರು ಅಲ್ಲವೇ ಅಲ್ಲ. ಹೀಗಾಗಿ ಇಷ್ಟಪಟ್ಟ ಹುಡುಗಿಯನ್ನು ಒಲಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಹುಡುಗರು ಈ ಕೆಲಸಗಳನ್ನು ಮಾಡಿದರೆ ಖಂಡಿತ ನಿಮ್ಮ ಪರಿಶುದ್ಧ ಪ್ರೀತಿಗೆ ಬಿದ್ದೆ ಬೀಳುತ್ತಾರೆ.
- ನಗಿಸುವುದನ್ನು ಕಲಿಯಿರಿ: ಹುಡುಗಿಯೂ ಆಕೆಯನ್ನು ಯಾರು ನಗಿಸುತ್ತಾರೋ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾಳೆ. ಹಾಸ್ಯ ಪ್ರಜ್ಞೆಯ ಪುರುಷರು ನೀವಾಗಲೇಬೇಕು. ತಾವು ನಕ್ಕು ಇತರರನ್ನೂ ನಗಿಸುವ ವ್ಯಕ್ತಿಗಳು ಹುಡು ಗಿಯರು ಬೇಗನೆ ಇಷ್ಟವಾಗುತ್ತಾರೆ. ಹೀಗಾಗಿ ಆಕೆಯನ್ನು ಜೋಕ್ ಹೇಳುವ ಮೂಲಕ ಆಕೆಯ ಮನಸ್ಸನ್ನು ಗೆಲ್ಲಬಹುದು.
- ಗೌರವ ನೀಡುವ ಗುಣ ನಿಮ್ಮಲಿರಲಿ : ಹುಡುಗಿಯನ್ನು ಇಂಪ್ರೆಸ್ ಮಾಡುವುದಕ್ಕೆ ದೊಡ್ಡ ದೊಡ್ಡ ಸಾಹಸವನ್ನು ಮಾಡಬೇಕಾಗಿಲ್ಲ. ಕೆಲವು ಸೂಕ್ಷ್ಮ ವಿಚಾರಗಳತ್ತ ಗಮನ ಕೊಡಬೇಕು. ಅದರಲ್ಲಿಯೂ ಹೆಣ್ಣು ಮಕ್ಕಳನ್ನು ಗೌರವಿಸುವ ಗುಣ ನಿಮ್ಮದಾಗಿಸಿಕೊಂಡರೆ ಹುಡುಗಿಯೂ ನಿಮ್ಮ ಪ್ರೀತಿಗೆ ಬೀಳುವುದು ಖಚಿತ.
- ಆಕೆಗೆ ಇಷ್ಟವಿರುವುದನ್ನು ಮಾಡಿ : ಹುಡುಗಿಯರು ತುಂಬಾ ಹಠಮಾರಿ ಸ್ವಭಾವದವರಾಗಿದ್ದು, ಅಷ್ಟು ಸುಲಭವಾಗಿ ಯಾವುದನ್ನೂ ಇಷ್ಟ ಪಡುವುದಿಲ್ಲ. ಹೀಗಾಗಿ ಹುಡುಗನು ಹುಡುಗಿಯನ್ನು ಇಂಪ್ರೆಸ್ ಮಾಡಲು ಬಯಸಿದರೆ ಆಕೆಗೆ ಇಷ್ಟವಿರುವುದನ್ನು ಮಾಡಿದರೆ ಸಾಕು, ಆಕೆಯು ನಿಮ್ಮ ಪ್ರೀತಿಗೆ ಕರಗುತ್ತಾರೆ. ಅವಳ ಇಷ್ಟ ಕಷ್ಟಗಳಿಗೆ ಬೆಲೆ ಕೊಡುವ ಹುಡುಗನಿಗೆ ಹೆಣ್ಣು ಮಕ್ಕಳು ಹೆಚ್ಚು ಬೆಲೆ ಕೊಡುತ್ತಾರೆ.
- ಡ್ರೆಸ್ಸಿಂಗ್ ಸೆನ್ಸ್ ಇರಲಿ : ಹುಡುಗಿಯನ್ನು ಇಂಪ್ರೆಸ್ ಮಾಡುವಲ್ಲಿ ಡ್ರೆಸ್ಸಿಂಗ್ ಸೆನ್ಸ್ ಪ್ರಮುಖ ಪಾತ್ರವಹಿಸುತ್ತದೆ. ಒಟ್ಟಾರೆಯಾಗಿ ಡ್ರೆಸ್ ಮಾಡಿಕೊಂಡಿರುವ ಹುಡುಗರನ್ನು ಅಷ್ಟಾಗಿ ಹುಡುಗಿಯರು ಇಷ್ಟ ಪಡುವುದಿಲ್ಲ. ನಿಮ್ಮ ಉಡುಗೆ ತೊಡುಗೆಯೂ ನೀವು ಹೇಗೆ ಎನ್ನುವುದು ತಿಳಿಸುತ್ತದೆ ಹೀಗಾಗಿ ನೀವು ಆಕರ್ಷಕವಾದ ಡ್ರೆಸ್ ಸೆನ್ಸ್ ಹೊಂದಿದ್ದರೆ ಒಳ್ಳೆಯದು.
- ಜಂಟಲ್ ಮ್ಯಾನ್ ವ್ಯಕ್ತಿಯಾಗಿರಿ : ಹೆಣ್ಣು ಮಕ್ಕಳು ರೂಡ್ ಆಗಿರುವ ವ್ಯಕ್ತಿಗಳಿಗಿಂತ ಜಂಟಲ್ ಮ್ಯಾನ್ ಗಳನ್ನು ಹೆಚ್ಚು ಇಷ್ಟವಾಗುತ್ತಾರೆ. ಅದರಲ್ಲಿಯೂ ಶಾಂತ ಸ್ವಭಾವದ ಹುಡುಗನಾಗಿದ್ದರೆ ಆಕೆಯ ಮನಸ್ಸನ್ನು ಬೇಗನೇ ಗೆಲ್ಲಬಹುದು. ಆಕೆಯ ಮಾತು ಹಾಗೂ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯೂ ಹುಡುಗನಲ್ಲಿದ್ದರೆ ಆಕೆಯು ಪ್ರೀತಿಗೆ ಸಮ್ಮತಿ ನೀಡುವುದು ಗ್ಯಾರಂಟಿ. ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡರೆ ಹುಡುಗಿಯನ್ನು ಇಂಪ್ರೆಸ್ ಮಾಡುವುದು ಕಷ್ಟವೇನಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ