ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಕಾಂತಿಗಾಗಿ ಮನೆಯಲ್ಲಿಯೇ ನೈಸರ್ಗಿಕ ಫೇಸ್ ಮಾಸ್ಕ್ ತಯಾರಿಸಿ
ಸುಡು ಬಿಸಿಲು ಹಾಗೂ ಬೆವರಿನಿಂದ ನಿಮ್ಮ ತ್ವಚೆಯನ್ನು ಕಾಪಾಡಲು ಮನೆಯಲ್ಲಿಯೇ ಫೇಸ್ ಮಾಸ್ಕ್ ತಯಾರಿಸಿ. ಮಾರುಕಟ್ಟೆಯಿಂದ ದುಬಾರಿ ಬೆಲೆ ಸೌಂದರ್ಯ ವರ್ಧಕವನ್ನು ಬಳಸುವ ಬದಲಾಗಿ ನೈಸರ್ಗಿಕವಾಗಿ ತ್ವಚೆಯ ಕಾಂತಿಯನ್ನು ಹೆಚ್ಚಿಸಿ.
ಆರೋಗ್ಯಕರ ಹಾಗೂ ಕಾಂತಿಯುತ ತ್ವಚೆ ನನ್ನದಾಗಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ಬಿಸಿಲು, ಧೂಳು ಮಾಲಿನ್ಯ ತ್ವಚೆಯ ಮೇಲೆ ಸಾಕಷ್ಟು ಹಾನಿಯುಂಟು ಮಾಡುತ್ತದೆ. ಮಳೆಗಾಲ ಇನ್ನೇನು ಸಮೀಪಿಸುತ್ತಿದ್ದರೂ ಕೂಡ ಬಿಸಿಲಿನ ಶಾಖ ಇನ್ನೂ ಕಡಿಮೆಯಾಗಿಲ್ಲ. ಆದ್ದರಿಂದ ಸುಡು ಬಿಸಿಲು ಹಾಗೂ ಬೆವರಿನಿಂದ ನಿಮ್ಮ ತ್ವಚೆಯನ್ನು ಕಾಪಾಡಲು ಮನೆಯಲ್ಲಿಯೇ ಫೇಸ್ ಮಾಸ್ಕ್ ತಯಾರಿಸಿ. ಮಾರುಕಟ್ಟೆಯಿಂದ ದುಬಾರಿ ಬೆಲೆ ಸೌಂದರ್ಯ ವರ್ಧಕವನ್ನು ಬಳಸುವ ಬದಲಾಗಿ ನೈಸರ್ಗಿಕವಾಗಿ ತ್ವಚೆಯ ಕಾಂತಿಯನ್ನು ಹೆಚ್ಚಿಸಿ.
ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಕಾಂತಿಗಾಗಿ ನೈಸರ್ಗಿಕ ಫೇಸ್ ಮಾಸ್ಕ್ಗಳು:
1. ಟೊಮೆಟೊ ಮಾಸ್ಕ್:
ನೀವು ದಿನವಿಡೀ ಬಿಸಿಲಿನಿ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಚರ್ಮದ ಮೇಲೆ ಸಾಕಷ್ಟು ಹಾನಿಯುಂಟಾಗುತ್ತದೆ. ಆದ್ದರಿಂದ ತ್ವಚೆಯ ಹಾನಿಯನ್ನು ಶಮನಗೊಳಿಸಲು ಹಾಗೂ ಪೋಷಿಸಲು ಟೊಮೆಟೊ ಮಾಸ್ಕ್ ಸಹಾಯ ಮಾಡುತ್ತದೆ. ಟೊಮೆಟೋವನ್ನು ಎರಡು ಭಾಗಗಳಾಗಿ ತುಂಡರಿಸಿ ಮುಖದ ಮೇಲೆ ಹಚ್ಚಿ. 15 ರಿಂದ 20 ನಿಮಿಷಗಳ ನಂತರ ಅದನ್ನು ತೊಳೆಯಿರಿ.
2. ನಿಂಬೆ ರಸ ಮತ್ತು ಜೇನುತುಪ್ಪ:
ಕಂದುಬಣ್ಣವನ್ನು ತೊಡೆದುಹಾಕಲು ನಿಂಬೆ ಮತ್ತು ಜೇನುತುಪ್ಪವನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ನಿಂಬೆ ರಸವು ನೈಸರ್ಗಿಕವಾಗಿ ತ್ವಚೆಯಿಂದ ಕಂದುಬಣ್ಣದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಜೇನುತುಪ್ಪವನ್ನು ಸೇರಿಸುವುದರಿಂದ ಹಿತವಾದ ಸಂವೇದನೆಯನ್ನು ನೀಡುತ್ತದೆ.
ಇದನ್ನೂ ಓದಿ: ಕಣ್ಣಿಗೆ ಕಾಡಿಗೆ ಹಚ್ಚುತ್ತೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ
3. ಅಲೋವೆರಾ:
ಅಲೋವೆರಾದ ಅನೇಕ ಪ್ರಯೋಜನಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅಲೋವೆರಾ ಎಲೆಯಿಂದ ಸ್ವಲ್ಪ ತಾಜಾ ತಿರುಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಮತ್ತು ಯಾವುದೇ ಸಾರಯುಕ್ತ ತೈಲದ ಕೆಲವು ಹನಿಗಳನ್ನು ಸೇರಿಸಿ. ಇದು ಬಿಸಿಲಿನಿಂದ ಹಾನಿಗೊಳಗಾದ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ.
4. ಕಡಲೆ ಹಿಟ್ಟು ಮತ್ತು ಅರಿಶಿನ:
ಬಿಸಿಲಿನಿಂದ ಉಂಟಾದ ಚರ್ಮದ ಹಾನಿಗೆ ಚಿಕಿತ್ಸೆ ನೀಡಲು ಮತ್ತೊಂದು ಮಾಂತ್ರಿಕ ಸಂಯೋಜನೆಯೆಂದರೆ ಕಡಲೆ ಹಿಟ್ಟು ಮತ್ತು ಅರಿಶಿನ. ಅರಿಶಿನ, ಹಾಲು, ಕಡಲೆ ಹಿಟ್ಟು ಮತ್ತು ಸ್ವಲ್ಪ ರೋಸ್ ವಾಟರ್ ಅನ್ನು ಒಟ್ಟಿಗೆ ಮಿಶ್ರಣ ಮಾಡಿ. ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿ ಮತ್ತು 20 ನಿಮಿಷಗಳ ಕಾಲಗಳ ತೊಳೆಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: