AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Saffron for Mental Health: ಮಾನಸಿಕ ಆರೋಗ್ಯಕ್ಕೆ ಕೇಸರಿ ಏಕೆ ಸೇವಿಸಬೇಕು? ಪ್ರಯೋಜನಗಳೇನು? ಇಲ್ಲಿದೆ ಕಾರಣ

ನಿಮಗೆ ತಿಳಿದಿರುವಂತೆ ಕೇಸರಿ ದುಬಾರಿ ಮಸಾಲೆಗಳಲ್ಲಿ ಒಂದಾಗಿದೆ. ಆದರೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

Saffron for Mental Health: ಮಾನಸಿಕ ಆರೋಗ್ಯಕ್ಕೆ ಕೇಸರಿ ಏಕೆ ಸೇವಿಸಬೇಕು? ಪ್ರಯೋಜನಗಳೇನು? ಇಲ್ಲಿದೆ ಕಾರಣ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jun 16, 2023 | 3:02 PM

Share

ಅಡುಗೆ ಕೋಣೆಯ ಶೆಲ್ಫ್ ನಮ್ಮ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಹಾಯ ಮಾಡುವ ವಸ್ತುಗಳಿಂದ ತುಂಬಿರುತ್ತದೆ. ಇವೆಲ್ಲವೂ ಒಂದಿಲ್ಲೊಂದು ಹಂತದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಗಿಡಮೂಲಿಕೆಗಳು ಮತ್ತು ಮಸಾಲೆಗಳ ಬಗ್ಗೆ ನಾವು ಎಷ್ಟು ಚೆನ್ನಾಗಿ ತಿಳಿದಿದ್ದೇವೆ ಎಂಬುದರ ಮೇಲೆ ಅದನ್ನು ಹೇಗೆ ಬಳಸಬಹುದು ಎಂಬುದು ನಿರ್ಧಾರವಾಗುತ್ತದೆ. ಹಾಗಾಗಿ ಎಲ್ಲ ಮಸಾಲೆ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅನೇಕ ಪ್ರಯೋಜನಕಾರಿ ಪದಾರ್ಥಗಳ ಜೊತೆಗೆ ಅದೇ ಸಾಲಿಗೆ ಸೇರುವುದು ಕೇಸರಿ. ಹಲವಾರು ಕೇಸರಿಯ ಚಿನ್ನದ ಎಳೆಗಳನ್ನು ವಿಶ್ವದ ಅತ್ಯಂತ ದುಬಾರಿ ಮಸಾಲೆಗಳಲ್ಲಿ ಪರಿಗಣಿಸಲಾಗಿದೆ. ಸಾಕಷ್ಟು ಶ್ರಮ ವಹಿಸಿ ಕಷ್ಟ ಪಟ್ಟು ಕೊಯ್ಲು ಮಾಡುವುದರಿಂದ ಅದಲ್ಲದೆ ಇದರಲ್ಲಿ ಅತೀ ಹೆಚ್ಚು ಔಷಧಿ ಗುಣಗಳಿರುವುದರಿಂದ ಇದರ ಬೆಲೆಯೂ ಅಧಿಕ. ಕೇಸರಿಯನ್ನು ಸಾಮಾನ್ಯವಾಗಿ ಕೇಸರಿ ಕ್ರೋಕಸ್ ಎಂದು ಕರೆಯಲ್ಪಡುವ ಕ್ರೋಕಸ್ ಸ್ಯಾಟಿವಸ್ ಹೂವಿನಿಂದ, ಕೈ ಯಿಂದ ಕೊಯ್ಲು ಮಾಡಲಾಗುತ್ತದೆ. “ಕೇಸರಿ” ಸುಂದರವಾದ ಬಣ್ಣದ ಜೊತೆಗೆ ಸಣ್ಣ ದಾರದಂತೆ ಕಂಗೊಳಿಸುವ ಇದನ್ನು ನೋಡುವುದೇ ಒಂದು ಚೆಂದ. ಈ ಬಗ್ಗೆ ಪೌಷ್ಟಿಕ ತಜ್ಞ ಲೊವ್ನೀತ್ ಬಾರಾ, ಕೇಸರಿಯ ಕೆಲವು ಪ್ರಯೋಜನಗಳನ್ನು ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಎನ್ಹೌಸ್ ಆಂಟಿ- ಆಕ್ಸಿಡೆಂಟ್: ಹೆಲ್ತ್ ಲೈನ್ ಪ್ರಕಾರ, ಕೇಸರಿ ಬೆಳೆಯುವ ಸಸ್ಯ ಹೆಚ್ಚು ಸಂಯುಕ್ತಗಳನ್ನು ಹೊಂದಿದೆ, ಅದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜೀವಕೋಶಗಳು ಮತ್ತು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.

ಖಿನ್ನತೆ ನಿವಾರಕವಾಗಿ ಕೇಸರಿ: ಈ ದುಬಾರಿ ಮಸಾಲೆಯು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕರಿ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದು ಮನಸ್ಥಿತಿಯನ್ನು ಸರಿಪಡಿಸಿ ಮತ್ತು ಖಿನ್ನತೆ ನಿವಾರಕವಾಗಿ ಕಾರ್ಯನಿರ್ವಹಿಸಲು ಸೂಕ್ತವೆಂದು ಪರಿಗಣಿಸಲಾಗಿದೆ. ಕೇಸರಿ ಏಕೆ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತೀರ್ಮಾನಿಸಿದ ವಿವಿಧ ಅಧ್ಯಯನಗಳಿವೆ, ಜೊತೆಗೆ ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇಸರಿಯ ಸಕಾರಾತ್ಮಕ ಪರಿಣಾಮಗಳನ್ನು ಬೆಂಬಲಿಸಲು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಉತ್ತೇಜಕ ಟಾನಿಕ್: ಕೇಸರಿ ಒಂದು ಉತ್ತೇಜಕ ಟಾನಿಕ್ ಮತ್ತು ಶೀತ ಮತ್ತು ಜ್ವರಗಳಿಗೆ ಚಿಕಿತ್ಸೆ ನೀಡಲು ತುಂಬಾ ಪರಿಣಾಮಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಗೆ ಒಳ್ಳೆಯದು: ಈ ಮಸಾಲೆ ಕ್ಯಾರೊಟಿನಾಯ್ಡ್ಗಳಿಂದ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ಕೇಸರಿಯು ರಿಬೋಫ್ಲೇವಿನ್ ಮತ್ತು ವಿಟಮಿನ್ ಬಿ ಯ ಶ್ರೀಮಂತ ಮೂಲಗಳಲ್ಲಿ ಒಂದಾಗಿದೆ, ಇದು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Saffron: ಕೇಸರಿಯ ಆಯುರ್ವೇದ ಪ್ರಯೋಜನಗಳ ಜೊತೆ ಗಮನಿಸಬೇಕಾದ ಅಡ್ಡ ಪರಿಣಾಮಗಳು

ಕಡಿಮೆ ಪಿಎಂಎಸ್ ರೋಗಲಕ್ಷಣಗಳು: ಆತಂಕ ಮತ್ತು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ನ ಕಡಿಮೆ ಮಾಡಲು ಮತ್ತು ಪಿಎಂಎಸ್ ರೋಗಲಕ್ಷಣಗಳ ಇಳಿಕೆಗೆ ಹೆಚ್ಚು ಸಹಾಯ ಮಾಡುತ್ತದೆ.

ಮೆಮೊರಿ ಫಂಕ್ಷನ್ : ಕೇಸರಿಯಲ್ಲಿ ಕ್ರೋಸಿನ್ ಮತ್ತು ಕ್ರೋಸೆಟಿನ್ ಎಂಬ ಎರಡು ರಾಸಾಯನಿಕಗಳಿವೆ, ಇದು ಅಧ್ಯಯನಗಳ ಪ್ರಕಾರ ಕಲಿಕೆ ಮತ್ತು ನೆನೆಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಮ್ಮ ಆಹಾರಗಳಲ್ಲಿ ಎಲ್ಲಾ ಬಣ್ಣ ಮತ್ತು ಪರಿಮಳವನ್ನು ಸೇರಿಸುವುದರ ಜೊತೆಗೆ, ಕೇಸರಿಯ ಸಣ್ಣ ಭಾಗವನ್ನು ಸೇರಿಸುವುದರಿಂದ ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಹಿಂದೆಂದೂ ಕಂಡಿರದ ಬೆಳವಣಿಗೆ ಕಂಡು ಬರುವುದರಲ್ಲಿ ಸಂಶಯವೇ ಇಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:20 am, Fri, 16 June 23

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು