ನಿದ್ರೆ ಕೂಡ ನಿಮ್ಮ ಫರ್ಟಿಲಿಟಿ ಮೇಲೆ ಪರಿಣಾಮ ಬೀರಬಹುದು ಎಚ್ಚರ!

|

Updated on: Dec 16, 2023 | 2:52 PM

ದೀರ್ಘಕಾಲದ ನಿದ್ರಾಹೀನತೆಯು ಮಾನಸಿಕ ಒತ್ತಡ ಮತ್ತು ಬಂಜೆತನಕ್ಕೆ ಸಂಬಂಧಿಸಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ನಿದ್ರೆ ಅತ್ಯಗತ್ಯ. ಇಲ್ಲವಾದರೆ ಅದು ಅವರಿಬ್ಬರ ಫರ್ಟಿಲಿಟಿ ಮೇಲೂ ಪರಿಣಾಮ ಬೀರಬಲ್ಲದು.

ನಿದ್ರೆ ಕೂಡ ನಿಮ್ಮ ಫರ್ಟಿಲಿಟಿ ಮೇಲೆ ಪರಿಣಾಮ ಬೀರಬಹುದು ಎಚ್ಚರ!
ನಿದ್ರೆ
Follow us on

ಕೆಲವು ಜೀವನಶೈಲಿಯ ಅಭ್ಯಾಸಗಳು ನಿಮ್ಮ ಫಲವತ್ತತೆಯ ಮೇಲೆ ಪ್ರಭಾವ ಬೀರಬಹುದು. ಕಡಿಮೆ ತೂಕ ಅಥವಾ ಅಧಿಕ ತೂಕ, ಅನಾರೋಗ್ಯಕರ ಆಹಾರ, ಧೂಮಪಾನ, ಮದ್ಯಪಾನ ಮತ್ತು ವ್ಯಾಯಾಮ ಮಾಡದಿರುವುದು ಕೂಡ ನಿಮ್ಮ ಗರ್ಭ ಧರಿಸುವ ಸಾಮರ್ಥ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರಬಹುದು. ಆದರೆ, ನಿದ್ರೆ ಕೂಡ ನಿಮ್ಮ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತೆ ಎಂಬ ಬಗ್ಗೆ ನಿಮಗೆ ಎಂದಾದರೂ ಯೋಚನೆ ಬಂದಿದೆಯೇ? ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅದು ನಿಮ್ಮ ಫಲವತ್ತತೆ ಮೇಲೆ ಕೂಡ ಪರಿಣಾಮ ಬೀರಬಲ್ಲದು. ಹೀಗಾಗಿ, ನೆಮ್ಮದಿಯಾಗಿ ನಿದ್ರೆ ಮಾಡಲು ಏನು ಮಾಡಬಹುದು ಎಂಬ ಬಗ್ಗೆ ಹೆಚ್ಚು ಗಮನ ನೀಡಿ.

ದೀರ್ಘಕಾಲದ ನಿದ್ರಾಹೀನತೆಯು ಮಾನಸಿಕ ಒತ್ತಡ ಮತ್ತು ಬಂಜೆತನಕ್ಕೆ ಸಂಬಂಧಿಸಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ನಿದ್ರೆ ಅತ್ಯಗತ್ಯ. ಇಲ್ಲವಾದರೆ ಅದು ಅವರಿಬ್ಬರ ಫರ್ಟಿಲಿಟಿ ಮೇಲೂ ಪರಿಣಾಮ ಬೀರಬಲ್ಲದು. ಸಾಕಷ್ಟು ನಿದ್ರೆಯ ಕೊರತೆಯಿಂದಾಗಿ ಅವರ ಫಲವತ್ತತೆಗೆ ತೊಂದರೆಯಾಗಬಹುದು.

ನಿದ್ರಾ ಭಂಗಕ್ಕೆ ಸಂಬಂಧಿಸಿದಂತೆ ಸಂಬಂಧಿತ ಡೊಮೇನ್‌ಗಳು ನಿದ್ರೆಯ ವಿಘಟನೆ, ನಿದ್ರೆಯ ನಿರಂತರತೆಯ ಅಡಚಣೆ, ಕಡಿಮೆ ಅಥವಾ ದೀರ್ಘ ನಿದ್ರೆಯ ಅವಧಿಯನ್ನು ಒಳಗೊಂಡಿದೆ. ನಮ್ಮ ದೇಹವು ಸ್ಥಿರವಾದ ಮಾದರಿಗೆ ಒಡ್ಡಿಕೊಂಡಾಗ ನಮ್ಮ ದೇಹದ ಆಂತರಿಕ ಗಡಿಯಾರ ಎಂದು ಕರೆಯಲ್ಪಡುವ ಸಿರ್ಕಾಡಿಯನ್ ರಿದಮ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಕತ್ತಲು ಮತ್ತು ಬೆಳಕಿಗೆ ಅದು ಸೈಕಲ್ ರೀತಿ ತನ್ನನ್ನು ಸಿದ್ಧಪಡಿಸಿಕೊಳ್ಳುತ್ತದೆ. ಹೀಗಾಗಿ, ನೈಟ್ ಶಿಫ್ಟ್​ನಲ್ಲಿ ಕೆಲಸ ಮಾಡುವವರ ನಿದ್ರೆಯ ಸೈಕಲ್​ಗೆ ತೊಂದರೆಯಾಗುವುದರಿಂದ ಅವರಿಗೆ ನಿದ್ರೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚು.

ಇದನ್ನೂ ಓದಿ: ನಿದ್ರೆಗೂ ನಿಮ್ಮ ತೂಕಕ್ಕೂ ಏನು ಸಂಬಂಧ?

ನಿದ್ರೆ ಮತ್ತು ಎಚ್ಚರಕ್ಕೆ ಸಂಬಂಧಿಸಿದ ಹಾರ್ಮೋನುಗಳನ್ನು ನಿಯಂತ್ರಿಸುವ ಎರಡೂ ಲಿಂಗಗಳಲ್ಲಿ ಒಂದೇ ಮೆದುಳಿನ ಪ್ರದೇಶ ( ಕಾರ್ಟಿಸೋಲ್ ಮತ್ತು ಮೆಲಟೋನಿನ್) ಸಂತಾನೋತ್ಪತ್ತಿಯಲ್ಲಿ ತೊಡಗಿರುವ ಹಾರ್ಮೋನುಗಳನ್ನು ಸಹ ಸಕ್ರಿಯಗೊಳಿಸುತ್ತದೆ. ವೀರ್ಯ ಪಕ್ವತೆಯನ್ನು ಉತ್ತೇಜಿಸುವ ಅಥವಾ ಅಂಡೋತ್ಪತ್ತಿಯನ್ನು ಪ್ರಚೋದಿಸುವ ಹಾರ್ಮೋನುಗಳು ನಿಮ್ಮ ನಿದ್ರೆ ಮತ್ತು ಎಚ್ಚರ ಸೈಕಲ್​ಗೆ ಸಂಬಂಧಿಸಿವೆ. ನಿದ್ರೆಯ ಕೊರತೆಯು ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು. ಒತ್ತಡವು ನಿಮ್ಮನ್ನು ನಿದ್ರಿಸುವುದನ್ನು ತಡೆಯುತ್ತದೆ. ನಿದ್ರೆಯ ಕೊರತೆ ಒತ್ತಡ ಮತ್ತು ಆತಂಕದ ಮಟ್ಟವನ್ನು ಉಲ್ಬಣಗೊಳಿಸುತ್ತದೆ.

ಸಾಕಷ್ಟು ನಿದ್ರೆಯ ಕೊರತೆಯಿರುವ ಹೆಣ್ಣು ತನ್ನ ಅಂಡೋತ್ಪತ್ತಿ-ಪ್ರಚೋದಕ ಹಾರ್ಮೋನುಗಳಲ್ಲಿ ಅಡಚಣೆಯನ್ನು ಅನುಭವಿಸಬಹುದು. ಅದು ಆಕೆಯ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಡಾ. ಶ್ರುತಿ ಎನ್ ಮಾನೆ ನೀಡಿರುವ ಸಲಹೆಗಳು ಹೀಗಿವೆ…

ಇದನ್ನೂ ಓದಿ: ಆರಾಮಾಗಿ ನಿದ್ರೆ ಮಾಡಲು ಇಲ್ಲಿವೆ 6 ಸಲಹೆಗಳು

– ನಿಮ್ಮ ದಿನಚರಿಯಲ್ಲಿ ಕೆಲವು ರೀತಿಯ ಏರೋಬಿಕ್ ವ್ಯಾಯಾಮವನ್ನು ಸೇರಿಸಿಕೊಳ್ಳಿ. ಅದು ನಿಮ್ಮ ಹೃದಯ ಬಡಿತವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ.

– ಕನಿಷ್ಠ 30 ನಿಮಿಷಗಳ ಕಾಲ ಮನೆಯಿಂದ ಹೊರಗೆ ಅರ್ಧ ಗಂಟೆ ವಾಕಿಮಗ್ ಮುಂತಾದ ಸರಳ ಚಟುವಟಿಕೆಗಳನ್ನು ಮಾಡಿ. ಇದು ಕೂಡ ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.

– ದಿನವೂ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗಲು ಮತ್ತು ಏಳುವ ಮೂಲಕ ನಿಮ್ಮ ದೇಹಕ್ಕೆ ನೀವೇ ವೇಳಾಪಟ್ಟಿಯನ್ನು ಹಾಕಿಕೊಡಿ.

– ನಿಮ್ಮ ಮಲಗುವ ಕೋಣೆಯನ್ನು ಕತ್ತಲೆಯಾಗಿರಿಸಿ ಮತ್ತು ತಂಪಾಗಿರಿಸುವ ಮೂಲಕ ಮಲಗಲು ಸೂಕ್ತವಾದ ವಾತಾವರಣವನ್ನು ರಚಿಸಿ.

– ನಿಮ್ಮ ಮಲಗುವ ಸಮಯದ ಕನಿಷ್ಠ 7 ಗಂಟೆಗಳ ಮೊದಲು ಆಲ್ಕೋಹಾಲ್ ಅಥವಾ ಕೆಫೀನ್ ಸೇವನೆಯನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ