ಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣನ ಜನನವನ್ನು ನೆನಪಿಸುವ ಹಬ್ಬವಾಗಿದೆ. ಜೊತೆಗೆ ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶ್ರೀಕೃಷ್ಣನು ಈ ದಿನದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಹಾಗಾಗಿ ಈ ದಿನವನ್ನು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿ ದೃಕ್ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿ ಸತತ ಎರಡು ದಿನಗಳಲ್ಲಿಯೂ ಆಚರಿಸಲಾಗುತ್ತದೆ. ಅಷ್ಟಮಿ ತಿಥಿ ಸೆಪ್ಟೆಂಬರ್ 06, 2023 ರಂದು ಸಂಜೆ 15:37 ಕ್ಕೆ ಆರಂಭವಾಗಿ ಮತ್ತು ಸೆಪ್ಟೆಂಬರ್ 07, ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ಹಬ್ಬವನ್ನು ಎರಡೂ ದಿನಗಳಲ್ಲಿ ಆಚರಿಸಲಾಗುತ್ತದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ ಸಾಕಷ್ಟು ಮಹತ್ವದ್ದಾಗಿದೆ ಏಕೆಂದರೆ ಈ ಪೂಜೆಯ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಾಯ ಮಾಡಲು ವಿಸ್ತಾರವಾದ ಪೂಜಾ ವಿಧಿಗಳನ್ನು ನೀಡಿದ್ದು ಕೃಷ್ಣ ಜನ್ಮಾಷ್ಟಮಿಯ ದಿನ ಯಾವ ರೀತಿಯ ಪೂಜಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: ಜನ್ಮಾಷ್ಟಮಿಯ ದಿನ ಶ್ರೀ ಕೃಷ್ಣನಿಗೆ ಪ್ರಿಯವಾದ ಪಂಚಾಮೃತ ತಯಾರಿಸಿ, ಇದು ಆರೋಗ್ಯಕ್ಕೂ ಉತ್ತಮ
ದೇಶಾದ್ಯಂತ ಭಕ್ತರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಇಡೀ ದಿನವನ್ನು ಭಗವಂತನ ಸ್ಮರಣೆಯಲ್ಲಿ ಕಳೆಯಲಾಗುತ್ತದೆ, ಮತ್ತು ಮಧ್ಯರಾತ್ರಿಯ ನಂತರ ಉಪವಾಸವನ್ನು ಮುರಿಯಲಾಗುತ್ತದೆ. ಭಕ್ತರು ದಿನವಿಡೀ ಭಗವಂತನ ನಾಮವನ್ನು ಜಪಿಸುತ್ತಾರೆ, ಭಕ್ತಿ ಮತ್ತು ಸಮರ್ಪಣೆಯ ಮನೋಭಾವದಿಂದ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಕೃಷ್ಣನಿಗೆ ಸಂಬಂಧಪಟ್ಟ ಸ್ತೋತ್ರಗಳನ್ನು ಪಠಿಸಲಾಗುತ್ತದೆ. ವಿಶೇಷವಾಗಿ ಕೃಷ್ಣ ದೇವಾಲಯಗಳಲ್ಲಿ ಭಜನೆಗಳಿಂದ ಭಗವಂತನನ್ನು ಸ್ತುತಿಸುತ್ತಾ ಹಾಡಲಾಗುತ್ತದೆ, ಇದು ಸುತ್ತಲೂ ಉತ್ಸಾಹಭರಿತ ವಾತಾವರಣವನ್ನು ಸೃಷ್ಟಿಸುತ್ತದೆ. ಕೃಷ್ಣನ ಜೀವನ ಘಟನೆಗಳು ಮತ್ತು ಅವನ ವಿವಿಧ ಲೀಲೆಗಳನ್ನು ಚಿತ್ರಿಸುವ ಸ್ಕಿಟ್ ಗಳನ್ನು ಎಲ್ಲೆಡೆ ಆಯೋಜಿಸಲಾಗುತ್ತದೆ. ಕೃಷ್ಣನ ರಾಸ ಲೀಲೆಯನ್ನು ಕೃಷ್ಣ ಮತ್ತು ಅವನ ಗೋಪಿಯರ ವೇಷ ಧರಿಸಿದ ಮಕ್ಕಳು ಪ್ರದರ್ಶಿಸುತ್ತಾರೆ. ಕೃಷ್ಣನ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಭಗವಾನ್ ಕೃಷ್ಣನಿಗೆ ಬೆಣ್ಣೆ ಅತ್ಯಂತ ಪ್ರೀಯ, ಆದ್ದರಿಂದ ಇದು ದಿನದ ಪ್ರಮುಖ ಭಕ್ಷ್ಯವಾಗಲೇ ಬೇಕು. ಈ ದಿನ ಕೃಷ್ಣನ ಬೋಧನೆಗಳು ಮತ್ತು ಜೀವನದ ನಿಜವಾದ ಅರ್ಥವನ್ನು ನೆನಪಿಸಲು ಭಗವದ್ಗೀತೆಯ ಪಾಠಗಳನ್ನು ಎಲ್ಲರೂ ಪಠಣ ಮಾಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:04 pm, Sat, 2 September 23