Krishna Janmashtami 2023: ಶ್ರೀ ಕೃಷ್ಣನಿಗೆ ಪ್ರಿಯವಾದ ಬಿಳಿ ಬೆಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ? ಪಾಕವಿಧಾನ ಇಲ್ಲಿದೆ

ಶ್ರೀ ಕೃಷ್ಣನಿಗೆ ಬಿಳಿ ಬೆಣ್ಣೆಯು ಅತ್ಯಂತ ಪ್ರಿಯವಾದದ್ದು, ಈ ಕಾರಣದಿಂದಲೇ ಕೃಷ್ಣ ಜನ್ಮಾಷ್ಟಮಿಯ ದಿನದಂದು ಭಕ್ತರು ಬೆಣ್ಣೆಯ ಜೊತೆಗೆ ಕೃಷ್ಣನಿಗೆ ಪ್ರಿಯವಾದ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿ ಅದನ್ನು ಗೋಪಾಲನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ. ಅನೇಕರಿಗೆ ಬಿಳಿ ಬೆಣ್ಣೆಯನ್ನು ಹೇಗೆ ತಯಾರಿಸಬೇಕೆಂದು ತಿಳಿದಿಲ್ಲ. ಆದರೆ ಇದನ್ನು ಸುಲಭವಾಗಿ ಮಾಡಬಹುದು. ನೀವು ಕೂಡಾ ಮನೆಯಲ್ಲಿ ಬೆಣ್ಣೆ ತಯಾರಿಸಿ ದೇವರಿಗೆ ಅರ್ಪಿಸಲು ಬಯಸುತ್ತೀರಾ, ಇಲ್ಲಿದೆ ಬೆಣ್ಣೆ ತೆಗೆಯುವ ಸುಲಭ ವಿಧಾನ.

Krishna Janmashtami 2023: ಶ್ರೀ ಕೃಷ್ಣನಿಗೆ ಪ್ರಿಯವಾದ ಬಿಳಿ ಬೆಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ? ಪಾಕವಿಧಾನ ಇಲ್ಲಿದೆ
Sri Krishna's Favorite white butter Image Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Sep 02, 2023 | 6:39 PM

ಇನ್ನೇನು ಜನ್ಮಾಷ್ಟಮಿ ಹಬ್ಬ ಬಂದೇ ಬಿಟ್ಟಿತ್ತು. ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನ ಭಕ್ತರು ತಮ್ಮ ಮನೆಯಲ್ಲಿ ಕೃಷ್ಣನಿಗೆ ಪ್ರಿಯವಾದ ಖಾದ್ಯಗಳನ್ನು ತಯಾರಿಸಿ ಅದನ್ನು ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ. ಶ್ರೀ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಎಂದಾಕ್ಷಣ ನೆನಪಿಗೆ ಬರುವಂತಹದ್ದೇ ಬೆಣ್ಣೆ. ಆದರೆ ಅನೇಕರಿಗೆ ಬಿಳಿ ಬೆಣ್ಣೆಯನ್ನು ಹೇಗೆ ತಯಾರಿಸಬೇಕೆಂದು ತಿಳಿದಿಲ್ಲ. ಅದಕ್ಕಾಗಿಯೇ ಈ ದಿನ ಬೆಣ್ಣೆಯನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತಾರೆ. ಆದರೆ ಬೆಣ್ಣೆಯನ್ನು ಸುಲಭವಾಗಿ ತಯಾರಿಸಬಹುದು. ನೀವು ಕೂಡಾ ಮನೆಯಲ್ಲಿ ಶುದ್ಧ ಬೆಣ್ಣೆ ತಯಾರಿಸಿ ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲು ಬಯಸುತ್ತೀರಾ, ಇಲ್ಲಿದೆ ಬೆಣ್ಣೆ ತೆಗೆಯುವ ಸುಲಭ ವಿಧಾನ.

ಬಿಳಿ ಬೆಣ್ಣೆ ತಯಾರಿಸುವುದು ಹೇಗೆ?

ನೀವು ಐದಾರು ದಿನಗಳ ಮುಂಚೆಯೇ ಪ್ರತಿದಿನ ಹಾಲು ಕುದಿಸಿ ನಂತರ ಅದರ ಮೇಲೆ ಹೊಂದಿಕೊಳ್ಳುವ ಕೆನೆಗಳನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ಅದನ್ನು ರೆಫ್ರಿಜರೇಟರ್ನಲ್ಲಿಡಿ. ನೀವು ಬೆಣ್ಣೆ ಮಾಡಲು ಬಯಸುವ ದಿನ ರೆಫ್ರಿಜರೇಟರ್ ನಲ್ಲಿ ಇರಿಸಲಾದ ಕೆನೆಯನ್ನು ಹೊರತೆಗೆದು, ಕೋಣೆಯ ಉಷ್ಣಾಂಶಕ್ಕೆ ಬರುವವರೆಗೆ ಅದನ್ನು ಹಾಗೇನೆ ಇಡಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಸಂಗ್ರಹಿಸಿಟ್ಟ ಹಾಲಿನ ಕೆನೆ ಮತ್ತು ಸ್ಪಲ್ಪ ನೀರನ್ನು ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿ. (ನೀವು ಕಡುಗೋಲು ಬಳಸಿ ಕೈಯಲ್ಲಿಯೇ ಬೆಣ್ಣೆಯನ್ನು ಕಡೆಯಬಹುದು) ಈಗ ಮತ್ತೊಮ್ಮೆ ಸ್ವಲ್ಪ ನೀರು ಸೇರಿಸಿ ಇನ್ನೊಂದು ಬಾರಿ ಬ್ಲೆಂಡ್ ಮಾಡಿ. ಆಗ ಬೆಣ್ಣೆಯು ಮೇಲ್ಭಾಗದಲ್ಲಿ ಹೊಂದಿಕೊಳ್ಳಲು ಪ್ರಾರಂಭವಾಗುತ್ತದೆ. ಈಗ ಸಂಪೂರ್ಣವಾಗಿ ಬೆಣ್ಣೆ ತಯಾರಾಗಿದೆ. ಹೀಗೆ ತಯಾರಾದ ಬೆಣ್ಣೆಯನ್ನು ಪುಟಾಣಿ ಮಣ್ಣಿನ ಮಡಕೆಯಲ್ಲಿಟ್ಟು ಗೋಕುಲಾಷ್ಟಮಿಯ ದಿನ ಶ್ರೀ ಕೃಷ್ಣನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಿ.

ಇದನ್ನೂ ಓದಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿದಿದೆಯಾ? ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಳಿ ಬೆಣ್ಣೆಯ ಆರೋಗ್ಯ ಪ್ರಯೋಜನಗಳು:

ಕೃಷ್ಣನಿಗೆ ಪ್ರಿಯವಾದ ಬಿಳಿ ಬೆಣ್ಣೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಈ ಬೆಣ್ಣೆಯು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಳದಿ ಬೆಣ್ಣೆಗಿಂತ ಆರೋಗ್ಯಕರವಾಗಿದೆ. ಹಳದಿ ಬೆಣ್ಣೆಯಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಬಿಳಿ ಬೆಣ್ಣೆಯನ್ನು ತಾಜಾ ಹಾಲಿ ಕೆನೆ ಮಂಥನದಿಂದ ತಯಾರಿಸಲಾಗುತ್ತದೆ ಮತ್ತು ಇದು ನೈಸರ್ಗಿಕ ಹಾಗೂ ಸಂಸ್ಕರಿಸದ ಕಾರಣ ಹಳದಿ ಬೆಣ್ಣೆಗಿಂತ ಹೆಚ್ಚು ಪೌಷ್ಟಿಕವಾಗಿದೆ.

  • ಬಿಳಿ ಬೆಣ್ಣೆಯು ಗಂಟಲಿನ ಊತವನ್ನು ಕಡಿಮೆ ಮಾಡುತ್ತದೆ.
  • ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
  • ಕೀಲು ನೋವನ್ನು ನಿವಾರಿಸುತ್ತದೆ.
  • ತೂಕ ನಿಯಂತ್ರಣಕ್ಕೆ ಸಹಕಾರಿ.
  • ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
  • ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಮಕ್ಕಳ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್