Steamed Snacks Recipes: ತೂಕ ನಷ್ಟಕ್ಕೆ ಇಲ್ಲಿವೆ 5 ಸ್ಟೀಮ್ಡ್ ಸ್ನ್ಯಾಕ್ಸ್ ರೆಸಿಪಿಗಳು

ನೀವು ಆರೋಗ್ಯಕರವಾಗಿ ಏನನ್ನಾದರೂ ತಿನ್ನಬೇಕು ಆದರೆ ದೇಹದ ತೂಕ ಹೆಚ್ಚಾಗಬಾರದು ಎಂದಿದ್ದರೆ ಸ್ಟೀಮ್ಡ್ ಆಹಾರವನ್ನು ಸೇವಿಸುವುದು ಉತ್ತಮ ಮಾರ್ಗವಾಗಿದೆ. ನಾವು ಕೆಲವು ಆವಿಯಿಂದ ಬೇಯಿಸಿದ ಅಂದರೆ ಸ್ಟೀಮ್ಡ್ ತಿಂಡಿಗಳ ಪಾಕ ವಿಧಾನಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದೇವೆ.

Steamed Snacks Recipes: ತೂಕ ನಷ್ಟಕ್ಕೆ ಇಲ್ಲಿವೆ 5 ಸ್ಟೀಮ್ಡ್ ಸ್ನ್ಯಾಕ್ಸ್ ರೆಸಿಪಿಗಳು
ಸಾಂದರ್ಭಿಕ ಚಿತ್ರ Image Credit source: NDTV
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 23, 2022 | 4:34 PM

ನೀವು ಆರೋಗ್ಯಕರವಾಗಿ ಏನನ್ನಾದರೂ ತಿನ್ನಬೇಕು ಆದರೆ ದೇಹದ ತೂಕ ಹೆಚ್ಚಾಗಬಾರದು ಎಂದಿದ್ದರೆ ಸ್ಟೀಮ್ಡ್ (Steamed) ಆಹಾರವನ್ನು ಸೇವಿಸುವುದು ಉತ್ತಮ ಮಾರ್ಗವಾಗಿದೆ. ನಾವು ಕೆಲವು ಆವಿಯಿಂದ ಬೇಯಿಸಿದ ಅಂದರೆ ಸ್ಟೀಮ್ಡ್ ತಿಂಡಿಗಳ ಪಾಕ ವಿಧಾನಗಳನ್ನು ಶಾರ್ಟ್ಲಿಸ್ಟ್ ಮಾಡಿದ್ದೇವೆ. ಈ ಆವಿಯಿಂದ ಮಾಡಿದ ತಿಂಡಿಗಳು ನಿಮ್ಮ ತೂಕ ಇಳಿಕೆ ಮಾಡಲು ಪರ್ಫೆಕ್ಟ್ ಆಹಾರ ಕ್ರಮವಾಗಿದೆ.

ನಾವೆಲ್ಲರೂ ದಿನದ ಮೂರು ಪ್ರಮುಖ ಊಟಗಳ ಮೇಲೆ ಕೇಂದ್ರೀಕರಿಸುತ್ತೇವೆ. ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ. ಆದ್ದರಿಂದ ಊಟದ ನಡುವೆ ಹಸಿವಿನ ಸಾಧ್ಯತೆಯನ್ನು ಕಡೆಗಣಿಸುತ್ತೇವೆ. ಮತ್ತು ಸಂಜೆಯ ಚಹಾದ ಸಮಯದಲ್ಲಿ ಪ್ಯಾಕೆಟ್‌ಗಳಲ್ಲಿ ಸಿಗುವಂತಹ ಆರೋಗ್ಯಕರವಲ್ಲದ ಚಿಪ್ಸ್ ಹಾಗೂ ಇನ್ನಿತರ ತಿಂಡಿಗಳನ್ನು ಸೇವಿಸುತ್ತೇವೆ. ಇದು ದೇಹದ ಬೊಜ್ಜಿನ ಬೆಳವಣಿಗೆಗೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ಏನು ಮಾಡಬೇಕು? ನಾವು ಸಂಜೆ ತಿಂಡಿ ತಿನ್ನುವುದನ್ನು ಬಿಟ್ಟು ಬಿಡಬೇಕೇ?. ಇಲ್ಲ ಇಲ್ಲ ಆರೋಗ್ಯಕರ ಅಡುಗೆ ತಂತ್ರಗಳ ಪಾಕ ವಿಧಾನವನ್ನು ನೀವು ನೋಡಬೇಕು. ಉದಾಹರಣೆಗೆ ಆವಿಯಿಂದ ಬೇಯಿಸಿದ ತಿಂಡಿಗಳು. ಡೋಕ್ಲಾ ಮತ್ತು ಇಡ್ಲಿಯಂತಹ ಸ್ಟೀಮ್ಡ್ ತಿಂಡಿಗಳು ನಮ್ಮ ಸ್ನ್ಯಾಕ್ಸ್ ಟೈಮ್‌ಗೆ ಉತ್ತಮವಾಗಿದೆ. ಮತ್ತು ಆರೋಗ್ಯಕರವಾಗಿಯೂ ಇರುತ್ತದೆ,. ಇಂತಹ ತೂಕ ನಷ್ಟ ಮಾಡುವ ಕೆಲವೊಂದು ಸ್ಟೀಮ್ಡ್ ಸ್ನ್ಯಾಕ್ಸ್ ರೆಸೆಪಿಗಳು ಇಲ್ಲಿವೆ.

5 ಸ್ಟೀಮ್ಡ್ ಸ್ನ್ಯಾಕ್ಸ್ ರೆಸಿಪಿ

1. ಓಟ್ಸ್ ಇಡ್ಲಿ: ಈ ಓಟ್ಸ್ ಇಡ್ಲಿ ಆರೋಗ್ಯಕರವಾದುದು ಮಾತ್ರವಲ್ಲದೆ ತೂಕ ಇಳಿಸಲು ಕೂಡಾ ಸಹಕಾರಿಯಾಗಿದೆ. ಇದು ಬಲು ರುಚಿಕರವಾಗಿ, ಕಡಿಮೆ ಕ್ಯಾಲೊರಿಯನ್ನು ಹೊಂದಿದ ಲೈಟ್‌ವೈಟ್ ಫುಡ್ ಆಗಿದೆ. ಈ ಮೃದುವಾದ ಇಡ್ಲಿಯನ್ನು ಬಿಸಿ ಬಿಸಿ ಸಾಂಬಾರ್ ಮತ್ತು ಚಟ್ನಿಯೊಂದಿಗೆ ಸವಿಯಲು ರುಚಿಯಾಗಿರುತ್ತದೆ.

2. ಸೋಜಿ ಡೋಕ್ಲಾ : ಈ ಗುಜರಾತಿ ಶೈಲಿಯ ತಿಂಡಿಯನ್ನು ಕೇವಲ 25 ನಿಮಿಷಗಳ ಒಳಗೆ ತಯಾರಿಸಬಹುದು. ಇದು ರುಚಿಯಾಗಿ ಇರುವುದರ ಜೊತೆಗೆ ತುಕ ನಷ್ಟಕ್ಕೆ ಸಹಕಾರಿಯಗಿದೆ.

3. ಗೋವಾನ್ ಸನ್ನಾ(ರೈಸ್ ಕೇಕ್) : ಇದು ಆವಿಯಲ್ಲಿ ಬೇಯಿಸಿದ ಬ್ರೆಡ್ ಆಗಿದ್ದು, ದಕ್ಷಿಣ ಭಾರತದ ಇಡ್ಲಿಯ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದೆ. ಈ ರೆಸಿಪಿ ಮಂಗಳೂರು ಮತ್ತು ಇತರ ಕರಾವಳಿ ಪ್ರದೇಶಗಳಲ್ಲಿ ಜನಪ್ರಿಯವಗಿದೆ. ಇದನ್ನು ಅಕ್ಕಿ, ಉದ್ದಿನ ಬೇಳೆ, ತೆಂಗಿನ ಕಾಯಿಯನ್ನು ಹಾಕಿ ಮಾಡಲಾಗುತ್ತದೆ. ಈ ಇಡ್ಲಿ ಹೆಲ್ತೀ ಆಹಾರಗಳಲ್ಲಿ ಒಂದಗಿದೆ.

ಇದನ್ನು ಓದಿ:lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

4. ಉಪ್ಪು ಉರುಂಡೈ : ದಕ್ಷಿಣ ಭಾರತ ಶೈಲಿಯ ಆವಿಯಿಂದ ಬೇಯಿಸಿದ ಡಂಪ್ಲಿಂಗ್ ಇದಾಗಿದೆ. ಇದು ಕರಿಬೇವಿ ಎಲೆ, ಸಾಸಿವೆ, ಜೀರಿಗೆ, ಚನಾ ಬೇಳೆ, ಉದ್ದಿನ ಬೇಳೆ ಸೇರಿದಂತೆ ಇನ್ನಿತರ ಮಸಾಲೆಗಳನ್ನು ಸೇರಿಸಿ ಬೇಯಿಸಿದ ಅಕ್ಕಿಯ ಉಂಡೆ ಇದಾಗಿದೆ. ಇದು ೩೦ ನಿಮಿಷಗಳಲ್ಲಿ ತಯಾರಿಸಬಹುದಾದ ಸರಳ ಪಾಕ ವಿಧಾನವಾಗಿದೆ.

5. ಬೇಸನ್ ಖಾಂಡವಿ: ಖಾಂಡವಿ ಮತ್ತೊಂದು ಗುಜರಾತಿ ಶೈಲಿಯ ತಿನಿಸು ಆಗಿದ್ದು, ಡೋಕ್ಲಾಕ್ಕಿಂತ ಮೃದು ಮತ್ತು ಕೋಮಲವಾಗಿರುತ್ತದೆ. ಇದನ್ನು ಹುಳಿ ಮೊಸರು ಮತ್ತು ಕಡ್ಲೆ ಹಿಟ್ಟು ಮತ್ತು ಕೆಲವೊಮದು ಮಸಾಲೆಯನ್ನು ಸೇರಿಸಿ ತಯಾರಿಸಲಾಗುತ್ತದೆ. ಇದು ರುಚಿಕರ ಆರೋಗ್ಯಕರ ತಿಂಡಿಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Fri, 23 December 22

ತಾಜಾ ಸುದ್ದಿ
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ