ಅಧಿಕ ತೂಕದ ಜನರು, ಸ್ಥೂಲಕಾಯರು ಅಥವಾ ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿರುವವರಿಗೆ ತೆಳ್ಳಗಿರುವುದು ವರವಾಗಿ ಕಾಣುತ್ತದೆ. ಏಕೆಂದರೆ ತೆಳ್ಳಗಿರುವುದು ಯಾವಾಗಲೂ ಫಿಟ್ ಮತ್ತು ಆರೋಗ್ಯಕರವಾಗಿರುತ್ತಾರೆ. ಆದರೂ ಕೆಲವು ತೆಳ್ಳಗಿನ ಜನರು ಹೈಪೋಥೈರಾಯ್ಡಿಸಮ್, ಒಳಾಂಗಗಳ ಕೊಬ್ಬು, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಮಧುಮೇಹದಂತಹ ಪರಿಸ್ಥಿತಿಗಳಿಂದ ಬಳಲುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಹೊಸ ಸಂಶೋಧನೆಯ ಪ್ರಕಾರ, ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಜಡವನ್ನು ಹೋಲಾಡಿಸುವುದು ಹೇಗೆ? ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಸಂಖ್ಯೆ ಸಣ್ಣ ಪ್ರಮಾಣದಲ್ಲಿ ಇದ್ದರೂ 25 ಜನರಲ್ಲಿ ಒಬ್ಬರು ತೆಳ್ಳಗಿರುತ್ತಾರೆ ಮತ್ತು ಅವರ ಜೀವನಶೈಲಿ ಮತ್ತು ಆಹಾರದ ಆಯ್ಕೆಗಳಿಂದ ತೂಕವನ್ನು ಹೆಚ್ಚಿಸಲು ಹೆಣಗಾಡುತ್ತಾರೆ. ನಿಮ್ಮ ಸ್ನೇಹ ಬಳಗದಲ್ಲಿ ತೆಳ್ಳಗಿನವರು ಇದ್ದರೆ ಹೇಳುವುದನ್ನು ಕೇಳಬಹುದು, “ಎಷ್ಟು ತಿಂದರೂ ನಾನು ಹೀಗೇ, ದಪ್ಪ ಆಗುವುದಿಲ್ಲ” ಎಂದು. ಅದಾಗ್ಯೂ ತೆಳ್ಳಿನ ವ್ಯಕ್ತಿಗಳು ಸಮಾರಂಭಗಳಿಗೆ ಹೋದಾಗ ಮುಜುಗರಕ್ಕೀಡಾಗುತ್ತಾರೆ. ಹಿರಿಯರು, ಸ್ನೇಹಿತರು ಬಂದು, ನಿನಗೇನು ಮನೆಯಲ್ಲಿ ತಿನ್ನಲು ಕೊಡುವುದಿಲ್ವಾ? ನೀನೇನು ಇಷ್ಟು ಸಪೂರ ಆಗಿದ್ದೀ? ಎಂದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ನೈಜವಾಗಿ ಒಂಟೆಯನ್ನು ನೋಡದಿದ್ದರೂ ಫೋಟೋದಲ್ಲಿ ಒಂಟೆಯನ್ನು ನೋಡಿದ ಕೆಲವರು ಬಂದು, ಏನ ನೀಡನು ಒಂಟೆ ರೀತಿ ಆಗಿದ್ದೀ ಎಂದು ಹೇಳುವುದು ಕೂಡ ಇದೆ. ಹೀಗೆ ಸಾರ್ವಜನಿಕವಾಗಿ ದೇಹದ ಮಾನಹರಾಜು ಹಾಕುಲಾಗುತ್ತದೆ.
ಇದೆಲ್ಲಾ ತಮಾಷೆಯಾಗಿದ್ದರೆ, ಇದರ ಹೊರತಾಗಿ ತೆಳ್ಳಗಿನ ವ್ಯಕ್ತಿಗಳು ಸೋಮಾರಿಯಾಗಿರುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಇದು ಗಂಭೀರ ವಿಚಾರವಾಗಿದೆ. ಏಕೆಂದರೆ ಜಡ ಜೀವನಶೈಲಿ ಕೆಲವು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಿದ್ದರೆ ಈ ಜಡ ಜೀವನಶೈಲಿಯನ್ನು ಹೋಗಲಾಡಿವುದು ಅಥವಾ ಬದಲಾಯಿಸುವುದು ಹೇಗೆ? ನೀವು ತೆಳ್ಳಗಿನವರಾಗಿದ್ದರೆ ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಬಹುದು.
ಜಡ ಜೀವನಶೈಲಿಯನ್ನು ಹೇಗೆ ಸೋಲಿಸುವುದು?
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಫಿಟ್‌ನೆಸ್ ಕಾರ್ಯವನ್ನು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.