Kannada News Lifestyle Summer Healthy Drinks : How to make desi soft drink at home Lifestyle News SIU
Summer Healthy Drinks :ಅಡುಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ದೇಸಿ ಪಾನೀಯ ತಯಾರಿಸಿ
ಬೇಸಿಗೆಯು ಆರಂಭವಾಗಿದ್ದು, ಸೂರ್ಯನು ತನ್ನ ತೀವ್ರವಾದ ಕಿರಣಗಳಿಂದ ಮೈ ಸುಡುತ್ತಿದ್ದಾನೆ. ಈ ತಾಪಮಾನದಲ್ಲಿ ಎಷ್ಟೇ ನೀರು ಕುಡಿದರೂ ಬಾಯಾರಿಕೆಯು ನೀಗುತ್ತಿಲ್ಲ. ಈ ಸಮಯದಲ್ಲಿ ತಂಪು ಪಾನೀಯಗಳನ್ನು ನೀಡಿದರೆ ಬೇಡ ಎನ್ನಲು ಮನಸ್ಸಾದರೂ ಹೇಗೆ ಬರುತ್ತದೆ ಹೇಳಿ. ಬಿಸಿಲಿನ ಧಗೆಯ ನಡುವೆ ತಂಪಾದ ಪಾನೀಯವನ್ನು ಕುಡಿದರೆ ಮನಸ್ಸು ಹಾಗೂ ದೇಹಕ್ಕೂ ಖುಷಿಯ ಅನುಭವವಾಗುತ್ತದೆ. ಅಂಗಡಿಗಳಲ್ಲಿ ಸಿಗುವ ಪಾನೀಯಕ್ಕಿಂತ ಮನೆಯಲ್ಲೇ ಮೆಂತ್ಯೆ ಕಾಳು, ನಿಂಬೆ ಹಣ್ಣು ಹಾಗೂ ಹೆಸರುಕಾಳುಗಳಿಂದ ಪಾನೀಯ ಮಾಡಿ ಸೇವಿಸಿದರೆ ದೇಹಕ್ಕೆ ಹಿತಕರ.
ಬೇಸಿಗೆಯಲ್ಲಿ ವಿಪರೀತ ಬಾಯಾರಿಕೆಯಾಗುವುದು ಸಹಜ. ಮೈ ಸುಡುವ ಬಿಸಿಲಿನಲ್ಲಿ ತಣ್ಣನೆಯ ಏನಾದರೂ ಸಿಕ್ಕರೆ ಮುಖದಲ್ಲಿ ಸಣ್ಣದೊಂದು ಗು ಮೂಡುತ್ತದೆ. ಈ ತಂಪು ಪಾನೀಯಗಳು ಬಾಯಾರಿಕೆ, ಸುಸ್ತು, ದಣಿವನ್ನು ನೀಗಿಸಿ ಮನಸ್ಸು ಹಾಗೂ ದೇಹವನ್ನು ಆರಾಮದಾಯಕವನ್ನಾಗಿಸುತ್ತದೆ. ಅದಲ್ಲದೇ, ದಾಹವಾದಾಗ ಅಂಗಡಿಗಳಲ್ಲಿ ಸಿಗುವ ಕೃತಕ ಜ್ಯೂಸ್‌ಗಳ ಮೊರೆ ಹೋಗುವುದೇ ಹೆಚ್ಚು. ಈ ಕೃತಕ ಜ್ಯೂಸ್ ಗಳಲ್ಲಿ ರಾಸಾಯನಿಕಯುಕ್ತ ಅಂಶಗಳು ಹೇರಳವಾಗಿದ್ದು ಆರೋಗ್ಯ ಸಮಸ್ಯೆಗಳು ಬಂದದ್ದೇ ತಿಳಿಯಲು. ಹೀಗಾಗಿ ಮನೆಯಲ್ಲೇ ದೇಸಿ ಪಾನೀಯಗಳನ್ನು ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.
ಮೆಂತ್ಯೆ ಬೆಲ್ಲ ಪಾನೀಯ:
ಬೇಕಾಗುವ ಸಾಮಗ್ರಿಗಳು :
ಮೆಂತ್ಯೆ ಕಾಳು
ಬೆಲ್ಲ
ನೀರು
ಮೆಂತ್ಯೆ ಬೆಲ್ಲ ಪಾನೀಯ ಮಾಡುವ ವಿಧಾನ :
ಮೊದಲಿಗೆ ಸುಮಾರು ಒಂದೆರಡು ಗಂಟೆ ನೆನೆಸಿಟ್ಟುಕೊಳ್ಳಬೇಕು.
ಆ ಬಳಿಕ ಈ ಮೆಂತ್ಯೆಯನ್ನು ನುಣ್ಣಗೆ ರುಬ್ಬಿಕೊಂಡು ಬೆಲ್ಲ ಹಾಗೂ ನೀರು ಬೆರೆಸಿದರೆ ಕೂಲ್ ಕೂಲ್ ಪಾನೀಯ ಸವಿಯಲು ಸಿದ್ಧ.
ಮೆಂತ್ಯೆ ಕಾಳು ಪಾನೀಯ ಮಾಡಿದ ತಕ್ಷಣ ಕುಡಿಯಿರಿ. ಹಾಗೆ ಇಟ್ಟರೆ ಈ ಪಾನೀಯ ಗಟ್ಟಿಯಾಗುತ್ತದೆ.