Suri Tribe: ಈ ಬುಡಕಟ್ಟಿನ ಮಹಿಳೆಯರ ಸೌಂದರ್ಯವೇ ಈ ತುಟಿ, ಈ ಆಧಾರದ ಮೇಲೆ ವರದಕ್ಷಿಣೆ
ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ಪ್ರಿಯರು. ಎಲ್ಲರಿಗಿಂತ ತಾನು ಚಂದವಾಗಿ ಕಾಣಬೇಕೆನ್ನುವ ಸಲುವಾಗಿ ನಾನಾ ರೀತಿಯ ಪ್ರಾಡಕ್ಟ್ ಗಳನ್ನು ಬಳಸುವುದನ್ನು ನೋಡಿರಬಹುದು. ಆದರೆ ಇಥಿಯೋಪಿಯಾದ ಸೂರಿ ಬುಡಕಟ್ಟಿನ ಹೆಣ್ಣು ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವ ರೀತಿಯೇ ಭಿನ್ನವಾಗಿದೆ. ಈ ಜನಾಂಗದ ಹೆಣ್ಣು ಮಕ್ಕಳ ಸೌಂದರ್ಯವು ನಿರ್ಧಾರವಾಗುವುದೇ ತುಟಿಯಿಂದ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೌಂದರ್ಯ ಎನ್ನುವ ಪದ ಕೇಳಿದ ಕೂಡಲೇ ಮೊದಲು ನೆನಪಾಗೋದೆ ಈ ಹೆಣ್ಣು ಮಕ್ಕಳು. ಮಹಿಳೆಯರಿಗೆ ಸೌಂದರ್ಯದ ಪ್ರಜ್ಞೆ ನಿನ್ನೆ ಮೊನ್ನೆದಲ್ಲ, ಅನಾದಿ ಕಾಲದಿಂದಲೂ ವಿವಿಧ ಸೌಂದರ್ಯ ಪರಿಕರಗಳನ್ನು ಬಳಕೆ ಮಾಡುತ್ತಿದ್ದರು. ಆದರೆ ಈ ಬುಡಕಟ್ಟಿನ ಮಹಿಳೆಯರು ತಮ್ಮ ಅಂದವನ್ನು ಹೆಚ್ಚಿಸುವ ರೀತಿಯೇ ವಿಭಿನ್ನವಾಗಿದೆ. ಈ ಬುಡಕಟ್ಟಿನ ಹೆಣ್ಣುಮಕ್ಕಳು ಸುಂದರವಾಗಿದ್ದಾರೆಯೇ ಎಂದು ನಿರ್ಧಾರವಾಗುವುದು ತುಟಿಯಿಂದಂತೆ.
ಈ ಸೂರಿ ಇಥಿಯೋಪಿಯಾದ ನೈಋತ್ಯ ಭಾಗದಲ್ಲಿ ಕಂಡು ಬರುವ ಸಣ್ಣ ಬುಡಕಟ್ಟು ಜನಾಂಗವಾಗಿದ್ದು, ಇವರನ್ನು ಸುರ್ಮಾ ಎಂದೂ ಕರೆಯುತ್ತಾರೆ. ಈ ಬುಡಕಟ್ಟಿನ ಹೆಣ್ಣು ಮಕ್ಕಳು ಶತಮಾನಗಳಿಂದ ನಡೆದುಕೊಂಡು ಬಂದ ತಮ್ಮ ಪದ್ಧತಿಯನ್ನು ಈಗಲೂ ಅನುಸರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಅಲಂಕಾರವು ತುಂಬಾನೇ ವಿಚಿತ್ರವಾಗಿದೆ. ದೇಹಕ್ಕೆ ಹಾಗೂ ಮುಖಕ್ಕೆ ಪೇಂಟ್ ಮಾಡಿಕೊಳ್ಳುತ್ತಾರೆ. ತುಟಿಗೆ ತಟ್ಟೆಗಳನ್ನು ಅಂಟಿಸಿಕೊಳ್ಳುವುದು ಪದ್ಧತಿಯಾಗಿರದೇ, ಸೌಂದರ್ಯವನ್ನು ಸುಚಿಸುವುದಾಗಿದೆ.
ಈ ಇಥಿಯೋಪಿಯಾದ ಸೂರಿ ಬುಡಕಟ್ಟಿನ ಮಹಿಳೆಯರ ಸೌಂದರ್ಯದ ಸಂಕೇತವೇ ಅಗಲವಾದ ತುಟಿಯನ್ನು ಹೊಂದುವುದಾಗಿದೆ. ಹೆಣ್ಣು ಮಕ್ಕಳಿಗೆ ಸುಮಾರು ಹದಿನೈದು ವರ್ಷ ತುಂಬುತ್ತಿದ್ದಂತೆ ಆಕೆಯ ಕೆಳ ತುಟಿಯ ಬಳಿ ಇರುವ ಎರಡು ಹಲ್ಲುಗಳನ್ನು ತೆಗೆಯಲಾಗುತ್ತದೆ. ತುಟಿಗೆ ಸಣ್ಣದಾದ ಹೋಲ್ ಮಾಡಿ ಅದಕ್ಕೆ ಹದಿನಾರು ಇಂಚು ಅಗಲದ ಮರದ ಅಥವಾ ಜೇಡಿಮಣ್ಣಿನ ತಟ್ಟೆಯನ್ನು ಹಾಕಲಾಗುತ್ತದೆ. ಆದರೆ ವಯಸ್ಸು ಹೆಚ್ಚಾದಂತೆ ಈ ತಟ್ಟೆಯಾಕಾರವು ದೊಡ್ಡದಾಗುತ್ತಾ ಹೋಗುತ್ತದೆಯಂತೆ.
ಇದನ್ನೂ ಓದಿ: ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡು ಮಲಗುವವರೇ ಎಚ್ಚರ!
ಈ ಅಗಲವಾದ ಮರ ಅಥವಾ ಜೇಡಿಮಣ್ಣಿನ ತಟ್ಟೆಯು ಎಷ್ಟು ದೊಡ್ಡದಾಗಿದೆಯೋ ಅದರ ಆಧಾರದ ಮೇಲೆ ಆಕೆಯ ಸೌಂದರ್ಯ ನಿರ್ಧಾರವಾಗುತ್ತದೆ. ಮದುವೆಯ ಸಂದರ್ಭದಲ್ಲಿ ಹುಡುಗಿಯ ತುಟಿಗಳ ಆಧಾರದ ಮೇಲೆ ವರನಿಂದ ವರದಕ್ಷಿಣೆಯನ್ನು ತೆಗೆದುಕೊಳ್ಳಲಾಗುತ್ತದೆ. ಹುಡುಗಿಯ ತುಟಿಯು ದೊಡ್ಡದಾಗಿದ್ದರೆ ತಂದೆ ವರನಿಂದ 60 ಹಸುಗಳನ್ನು ವರದಕ್ಷಿಣೆಯಾಗಿ ಕೇಳುತ್ತಾನೆ. ಒಂದು ವೇಳೆ ತುಟಿ ಸಣ್ಣದಾಗಿದ್ದರೆ ಆತ 40 ಹಸುಗಳನ್ನು ವರದಕ್ಷಿಣೆಯಾಗಿ ಕೇಳುತ್ತಾನೆ ಎನ್ನಲಾಗಿದೆ. ಈ ಪದ್ಧತಿಯು ಇವತ್ತಿಗೂ ಇಥಿಯೋಪಿಯಾದ ಸೂರಿ ಬುಡಕಟ್ಟಿನಲ್ಲಿ ಆಚರಣೆಯಲ್ಲಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ